ವಿಷಯಕ್ಕೆ ಹೋಗು

ಪುಟ:Kannada-Saahitya.pdf/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

1 ವಿದು ಚೋರನೆಂಬ ಋಷಿಯ ಕಥೆ ಆರು ದಿವಸದ ವರೆಗೂ ಎಡೆಬಿಡದೆ ಹುಡುಕಿದನು. ಕಳ್ಳನನ್ನು ಎಲ್ಲಿಯೂ ಕಾಣಲಿಲ್ಲ. ಏಳನೆಯ ದಿವಸ ಹಾಳು ದೇಗುಲದಲ್ಲಿದ್ದ ತೊನ್ನನು ಹೋಗು ವಾಗ ಸ್ವಲ್ಪ ದೊಡ್ಡದಾದ ಒಂದು ಸಿಕ್ಕ ಹಬ್ಬವನ್ನು ದಾರಿಯಲ್ಲಿ ಕಂಡು ಇದನ್ನು ವಿದ್ಯಾಧರ ಕರಣದಿಂದ ಹಾರಿ ಹೋದನು. ಯಮದಂಡನು ದೂರ ದಲ್ಲಿದ್ದು ಅದನ್ನು ಕಡನು, ಕಂಡು ಇವನೇ ಕಳ್ಳನೆಂದು ನಿನ್ನಯಿಸಿ ಹಿಡಿದುಕೊಂಡು ಅವನ: ಹುಯ್ಯಲಿಡುತ್ತಿದ್ದರೂ ಬಿಡದೆ ಅವನನ್ನು ಅರಮನೆಗೆ ಎಳೆದುಕೊಂಡು ಹೋಗಿ, 'ಕಳ್ಳನನ್ನು ತಂದೆ ” ಎಂದು ಅರಸನಿಗೆ ತೋರಿಸಿ, * ಈ ತನೇ ಕಳ್ಳ'ನೆಂದು ಹೇಳಿದನು. ಅದಕ್ಕೆ ತೊನ್ನನು, “ ದೇವಾ, ನಾನು ಕಳ್ಳನಲ್ಲ. ಇದನ್ನು ಪಟ್ಟಣವಲ್ಲ ಬಲ್ಲದು. ಕಳ್ಳನನ್ನು ಕಂಡುಹಿಡಿಯಲಾರದೆ ನನ್ನ ಸಾವಿಗೆ ಅ೦ಜಿ, ಈ ಬಡ ಸರದೇಶಿಯನ್ನು, ಪಟ್ಟಣದಲ್ಲಿ ತಿರಿದುಂಡು ಬಾಳುವ ನನ್ನನ್ನು ಹಿಡಿದು ಕೊಂಡು ಬಂದು ಕೊಲ್ಲಿಸುತ್ತಾನೆ” ಎಂದನು. ತಳರನು ಕಳ್ಳರನ್ನು ಕಂಡು ಹಿಡಿಯುವ ಶಾಸ್ತ್ರಗಳಲ್ಲಿ ಬಹಳ ಕುಶಲನಾದವನು. ಆದ್ದರಿಂದ ಅವನು ದೊರೆಗೆ * ಇವನು ರೂಪ ಮರೆಸಿಕೊಂಡು ರಾತ್ರಿ ಹೊತ್ತು ಪಟ್ಟಣದಲ್ಲೆಲ್ಲ ಕದ್ದು ಹಗಲು ಈ ರೀತಿ ತೊನ್ನನಾಗಿರುತ್ತಾರೆ. ನೀವು ನಂಬದಿದ್ದರೆ ನಂಬುವಂತೆ ಮಾಡಿ ತೋರಿಸುತ್ತೇನೆ” ಎಂದನು. ಹಾಗೆಂದು ಪ್ರತಿಘುಟಿಕಾಂಜನಗಳನ್ನು ತೊನ್ನನ ಕಣ್ಣಿಗೆ ಎಚ್ಚಿದನು. ಕೂಡಲೆ ದಿವ್ಯವಾದ ಮೊದಲಿನ ರೂಪುಂಟಾ ಯತು. ಆಗ ಕಳ್ಳನು, “ ಇವನು ಮೋಸಗಾರ, ಇಂದ್ರಜಾಲಗಳನ್ನು ಬಲ್ಲವ ನಾದ್ದರಿಂದ ಎಲ್ಲಾ ರೂಪಗಳನ್ನೂ ಮಾಡಬಲ್ಲ ” ಎಂದು ವಾದಿಸಿದನು. ತಳಾರನು, ” ಬೇರೆಯವರಿಗೂ ಮಾಡಿ ನಂಬಿಕೆ ತೋರಿಸುತ್ತೇನೆ” ಎಂದು ನುಡಿದನು, ಅರಸನ ಅಪ್ಪಣೆ ಪಡೆದು ಅರಸಿಯರ ಮತ್ತು ಸೂಳೆಯರ ಕಣ್ಣುಗಳಿಗೆ ಅಂಜನವನ್ನ ಚ್ಚಿದನು. ಅವರೆಲ್ಲ ತೊನ್ನೆಯರಾದರು. ಬಳಿಕ ಪ್ರತಿಘುಟಿಕಾಂಜನಗಳನ್ನೆ ಬೈಲು ಅವರು ಸ್ವಾಭಾವಿಕವಾದ ತಮ್ಮ ರೂಪನ್ನು ಪಡೆದರು. - ಅದನ್ನು ಕಂಡು ಅರಸನಿಗೆ ನಂಬಿಕೆಯಾಯಿತು. ಇವನೇ ಕಳ್ಳ.

  • ಏದ್ಯಾಥರಿತ ಹಾಗೆ ಕೌಶದಲ್ಲಿ ಹೋಗುವ ಒಂಭು ವಿದ್ಯ,