ಕಡುಮೂರ್ಖ೦ ನೆ ಕೇಳನೈ ಹರಹರಾ ಶ್ರೀಚೆನ್ನಸೋಮೇಶ್ವರಾ ‖ ೫೨ ‖
ತೊನೆವರ್ ಮಾತಿಗೆ ಸೋಲ್ದು ತನ್ನ ತಲೆಯೊಳ್ ತಾನಿಟ್ಟು ಬೊಬ್ಬಿಟ್ಟು ಕೈ-
ಪನೆ ಬಿಟ್ಟೆಲ್ಲರ ಮುಂದೆ ತೋಳ ನೆಗಪುತ್ತಂ ಕೋತಿಯಂತೇಡಿಸು-
ತ್ತಿನಿಸುಂ ಹೇಸದೆ ಲಜ್ಜೆಯಿಲ್ಲದನಿಬರ್ ತಾಂ ಮಾನ್ಯನೆಂದಾ
ಮನುಜಂ ಸದ್ಗತಿ ಕಾಣನೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೩ ‖
ಘನದೈನ್ಯಂಬಡುವರ್ ಗಭೀರಗೆಡುವರ್ ಗ್ರಾಸಕ್ಕೆ ಕುಗ್ರಾಮವಾ-
ಗನುಗೆಟ್ಟಿರ್ಪರು ಆ ಕ್ಷಣಕ್ಕೆ ಕೆಲವರ್ ಮಾತಾಡಲುಂ ಬಿ-
ರ್ರನೆ ಬಾಗರ್ ತಲೆಗೇರಿ ಸೊಕ್ಕು ತೊನೆವರ್ ತಾವೆಲ್ಲರಂ ನಿಂದಪರ್
ಮನುಜರ್ಗೆತ್ತಣ ನೀತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೪ ‖
ಅಗಲರ್ ಸೂಳೆಯನಾಳರಾ ಕುಲಜೆಯಂ ಸಂಕೀರ್ಣಮಂ ಮಾಳ್ಪರಾ-
ವಗ ದುರ್ಗೋಷ್ಠಿಯೊಳಿರ್ಪರೇಳು ಬೆಸನಕ್ಕೀಡಪ್ಪರಾಚಾರಮಂ
ಬಗೆಯರ್ ಸ್ವಾತ್ಮವಿಚಾರವಿಲ್ಲ ಮತಿಗೀಯರ್ ಧರ್ಮಮಂ ಪಾಲಿಸರ್
ಯುಗಧರ್ಮ೦ ನರರ್ಗಪ್ಪುದೆ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೫ ‖
ಕುಲದೊಳ್ ಕೂಡರು ಕೂಸನೀಯರು ನೃಪರ್ ನಿಷ್ಕಾರಣಂ ದಂಡಿಪರ್
ಪೊಳಲೊಳ್ ಸೇರಲು ಪೋರುಗೈದು ಸತಿ ತಾಂ ಪೋಗಟ್ಟುವಳ್ ಸಾಲಿಗರ್
ಕಲುಗುಂಡಂ ತಲೆಗೇರಿಪರ್ ತೊಲಗಿರಲ್ ಲಕ್ಷ್ಮೀಕಟಾಕ್ಷೇಷಣಂ
ನೆಲ ಮುಟ್ಟಲ್ ಮುನಿದಪ್ಪುದೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೬
‖
ಮಡೆಯಂಗುತ್ತಮವಿದ್ಯೆ ಬೆಟ್ಟ ಕುರುಡಂಗಂ ಮಾರ್ಗವೇ ಬೆಟ್ಟ ೧ಕೇಳ್೧
ಬಡವಂಗೊಂದಿನ ಘಟ್ಟ ಬೆಟ್ಟ ಜಡದೇಹಂಗುಜ್ಜುಗಂ ಬೆಟ್ಟ ಮು-
ಪ್ಪಡಿಸಿರ್ದಾತಗೆ ಪೆಣ್ಣು ಬೆಟ್ಟ ರುಣವೇ ಪರ್ಬೆಟ್ಟ ಮೂಲೋಕದೊಳ್
ಕಡುಲೋಭಂಗಣು ಬೆಟ್ಟವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೫೭ ‖
ಪುಟ:ಶತಕ ಸಂಪುಟ.pdf/೯೧
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೫೧