ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೫೭


ಗಣಿಕಾಸ್ತ್ರೀ ಗುಣಕಿಲ್ಲವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ
‖ ೮೩ ‖

ಕಡುಮುಪ್ಪಾಗಿರೆ ಕುಂಟನಾಗೆ ಕುರುಡಂ ತಾನಾಗೆಯೆತ್ತೇರಿದಾ
ಮುಡಬಂ ಮೂಕೊರೆ ಮೊಂಡ ಲಂಡ ಕಿವುಡಂ ಚಂಡಾಲ ತಾನಾದೊಡಂ
ಸುಡುಮೈ ಕುಷ್ಠಶರೀರಿಯಾಗಲೊಲಿವರ್ ಪೊನ್ನಿತ್ತಗಂ ಸೂಳೆಯರ್
ಕೊಡುಗೈ ವೇಶೆಯ ವಶ್ಯವೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೮೪ ‖

ಕೊರಚಾಡೆಲ್ಲರ ಮುಂದೆ ರಚ್ಚೆಗೆಲೆಯುತ್ತಂ ಕಿತ್ತು ಮೈಯೆಲ್ಲವಂ
ಹರಿತಿಂದುಳ್ಳ ಸುವಸ್ತುವಂ ಕಡೆಯೊಳೊರ್ವಂಗಿತ್ತು ತಾಂ ಭಾಷೆಯ
ಬರಿಗಂಟಿಕ್ಕುವನೆಂದು ತಾಯ ಹೊಸೆಬಿಟ್ಟೆಬ್ಬಟ್ಟಿ ಕೊಂಡಾಡುತಂ
ತಿರೆವಳ್ ತಾಂ ನೆರೆ ಸೂಳೆಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೮೫ ‖

ಮಹಿಯೊಳ್ ಭೂಸುರವೇಷದಿಂದ ಕಲಿಯಲ್ ಕರ್ಣಂ ಧನುರ್ವೇದಮಂ
ರಹಿಂಗೆಟ್ಟಂ ಬಲುನೊಂದನಿಲ್ವಲ ಮಹಾವಾತಾಪಿಯೊಳ್ ಶುಕ್ರನಿಂ
ದಹಿರಾಜಾತ್ಮಜೆ ಮಂತ್ರತಂತ್ರವರಿದಾಣ್ಮಂ ಪೋಗೆ ತಾಂ ತಂದಳೇ
ಬಹುವಿದ್ವಾಂಸಗೆ ಭ್ರಾಂತಿಯೈ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೮೬ ‖

ಕಪಿಯಂ ಗಾಣಿಗ ಹಾವು ಕಾಷ್ಠ ಜಿನ ತಕ್ರ ತೈಲಸಿಕ್ತಂ ನಿರೋ-
ಧಿಪನೊರ್ವಂ ದ್ವಿಜ ಮುಕ್ತಕೇಶಿ ಜಟರಕ್ತಂ ರಿಕ್ತಕುಂಭಂ ವಿರಾ-
ಜಿಪ ಕಿನ್ನಾಂಗನೆ ಕುಷ್ಠನಂ ವಿಧವೆಯಂ ಕೊಂದಾಟಮಂ ಧೂಮಮಂ
ನಿಪುಣರ್ ಕಂಡರೆ ಪೋಗರೈ ಹರಹರಾ ಶ್ರೀ ಚೆನ್ನಸೋಮೇಶ್ವರಾ‖ ೮೭ ‖

ಶುಕ ಶಂಖಂ ಗಜ ವಾಜಿ ವೀಣೆ ಪಶು ತಾಳಂ ಭೇರಿ ಶೋಭಾನ ಪಾ
ಠಕ ನೃತ್ಯಾದಿ ವರಾಂಗನಾ ತಳಿರುಗಳ್ ಪೂವಣ್ಣು ವಿಪ್ರದ್ವಯಂ
ಮುಕುರಂ ಮಾಂಸವು ಮದ್ಯತುಂಬಿದ ಕೊಡಂ ಪೆರ್ಗಿಚ್ಚನಾರ್ ಕಂಡೊಡಂ
ಶಕುನಂ ಶೋಭನಕಾಸ್ಪದಂ ಹರಹರಾ ಶ್ರೀ ಚೆನ್ನಸೋಮೇಶ್ವರಾ ‖ ೮೮ ‖