ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ဂ ನಡೆದದ್ದೇ ದಾರಿ ಮಾವಿನ ಗಿಡಾ, ನಿನ್ನ ಪ್ರೀತಿ ಮಲ್ಲಿ ಗೀನೂ ಇಲ್ಲ. ನಡುವ ಒಂದು ಹಳ್ಳ ಇರಬೇಕ ಹ್ಯಾ ಮತ್ತ, ನನಗ ಬೇಕಲ್ಲ ಮೀನಾ ಹಿಡೀಲಿಕ್ಕೆ, ಅದರ ದಂಡೀಮ್ಯಾಲ ನಮ್ಮ ಗುಡಸಲಾ. ಆದರಾಗ ನಾನು - ನೀನು - The old boy and his fairy queen.... ನಿನ್ನ ಎಲ್ಲಾ ಸ್ವಪ್ಪನೂ ಸಾಕಾರ, ಹ್ಯಾಂಗದ idea ?" - ಬಹುಶಃ ತನ್ನ ಕಣ್ಣಲ್ಲಿನ ದಣಿವು- ಸೋತು ಹೋದಂಥ ದಣಿವು- ಆತನ ಗಮನಕ್ಕೆ ಬಂದಿರಬೇಕು. ಮಾತು ಅಷ್ಟಕ್ಕೇ ಬಿಟ್ಟು ಆತ ಸೀರಿಯಸ್ಸಾಗಿ ಕೇಳಿದ್ದ : '- ಯಾಕ ಮಿನಿ ? ಇನ್ನೂ ಯಾಕ ಸಪ್ಪಗದ ಮಾರಿ ? ಇಷ್ಟೆಲ್ಲಾ ಸುಖಾ ಖರೇನೇ ಹೌದೋ ಅಲ್ಲೊ ಅಂತ ಸಂಶೇ ಬಂದದೇನು ? ನಾ ಎಂದರೆ ಸುಳ್ಳ ಹೇಳಿದ್ದೇನು ನಿನಗ ?.... ಹಾಂಗ ನೋಡಿದರ ದುಃಖಾ ನನಗ ಇರಬೇಕು. ಎಷ್ಟ ಕಳಕೊಂಡೆ ಜೀವನದಾಗ ! ಹದಿನಾರನೇ ವರ್ಷಕ್ಕೆ ನನ್ನ ಆಗ್ನಿಸಾಕ್ಷಿ ಆಗಿ ಲಗ್ನ ಮಾಡಿಕೊಂಡು ನನ್ನ ಮನೀಗೆ ಬಂದು, ಮೂವತ್ತೈದು ವರ್ಷ ನನ್ನ ಜೋಡೀ ಸಂಸಾರ ಮಾಡಿ, ಬಂಗಾರದಂಥಾ ಎರಡ ಮಕ್ಕಳನ್ನ ಹಡದು, ನನ್ನ ಸುಖಾ-ದುಃಖದಾಗ ಭಾಗೀ ಆಗಿ, ನನಗ ತನ್ನ ಸರ್ವಸ್ವ ಕೊಟ್ಟು, ಕಡೀಕೆ ನನ್ನ ಒಬ್ಬನ್ನು ಬಿಟ್ಟು ಶಾಂತಾ ಹೋಗಿಬಿಟ್ಟಳು.... ಹೋಗಿ ಎರಡು ತಿಂಗಳಾತು. ಎಷ್ಟ ನೆನಪ ಬಿಟ್ಟ ಹೋಗ್ಯಾಳ ನನ್ನ ಪಾಲಿಗೆ! ಇನ್ನೂ ಆಕಿ ಇದ್ದಾಳಂತು ಭ್ರಮಾ ನನಗ... ಆದರ ಇಲ್ಲ ಮಿನಿ, ನಾ ನನ್ನ ದುಃಖದಾಗ ಮುಳುಗಿ ನಿನಗ ಇನ್ನ ಅನ್ಯಾಯ ಮಾಡೋದಿಲ್ಲ. ನನ್ನ ಉಳದ ಜೀವನ ಈ ಎಲ್ಲಾ ನಿನ್ನ ಸುಖದ ಸಲುವಾಗಿ devote ಮಾಡತೀನಿ, ಇಲ್ಲಂದರ ದೇವರು ಮೆಟ್ಟೋದಿಲ್ಲ.... - ಆತನ ಕಣ್ಣು ಖರೇ ತುಂಬಿ ಬಂದಿದ್ದವು. ತಾನು ಮುಂದೆ ಸರಿದು ತೊಡೆಯಬೇಕು ಆ ಕಣ್ಣೀರನ್ನು. ಆದರೆ ಯಾಕೋ ಕೈಗಳು ನಿರ್ಜೀವವಾದಂತೆನಿಸಿ ಆಕೆ ಸುಮ್ಮನೆ ಇದ್ದಳು. -ನಂತರ ಎರಡೇ ನಿಮಿಷದಲ್ಲಿ ಆತನ ಮಾತಿಗೆ ಮತ್ತೆ ರಂಗೇರಿತ್ತು : “ನಿನಗ ನೆನಪದ ಏನು ಮಿನಿ ? ಮೊದಮೊದ್ಧ ನೀ ಹಗಲೆಲ್ಲ ಹೇಳತಿದ್ದಿ - ನೀ ಸಣ್ಣಾಕಿದ್ದಾಗಿನಿಂದ ಕನ್ಯಾಕುಮಾರಿ ಸಲುವಾಗಿ ಏನೋ ಒಂದ ವಿಚಿತ್ರ ರೀತಿಯ fascination ಅನಸ್ತದ, ಅಲ್ಲಿ ನನ್ನ ಜೋಡಿ ಒಮ್ಮೆ ಹೋಗಬೇಕನಸ್ತದ ಅಂತ. ಆದರ ನಾವು ಅಲ್ಲಿ ಹೋಗಬೇಕಂತ ಎರಡ ಮೂರ ಸರೆ ಪ್ಲಾನ್ ಮಾಡಿದಾಗೂ ಏನರೆ ವಿಘ್ನ ಬಂದು ರದ್ದು ಮಾಡಿದ್ವಿ. ಮುಂದಿನ ತಿಂಗಳು ನಾ ಪೂರಾ ಎರಡ ವಾರ ರಜಾ ತಗೋತೀನಿ, ಕನ್ಯಾಕುಮಾರಿಗೆ ಹೋಗಿ ಬೆಳತನಕಾ ಸಮುದ್ರ ದಂಡೇವಾಲ ಉಸುಕಿನ್ಯಾಗ ತಿರಗ್ಯಾಡೊಣಂತ. ನೀ ಸಾಕು ಅನ್ನೂ ತನಕಾ...' -'ಅಲ್ಲ ಮಿನಿ, ವಿಧಿ ಆಟ ಎಷ್ಟು ವಿಚಿತ್ರ ಆದ ನೋಡು. ನೀ ದೊಡ್ಡ ಪಗಾರದ