ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿರುಕಾದಂಬರಿಗಳು / ಶೋಷಣೆ, ಬಂಡಾಯ ಇತ್ಯಾದಿ... ೩೯೫ ಕವಿತಾ ನೋಡಿಧಾಂಗ ಇಲ್ಲಾ, ಎಷ್ಟು ರೆಗ್ಯುಲರೀ ಬರೀತಿದ್ರಿ, ಈಗ್ಯಾಕ ಬಿಟ್ಟು ಬಿಟ್ಟಿರಿ ಸಾಹಿತ್ಯ ಸೃಷ್ಟಿ ? ಬರಕೋತ ಇರಿ. ಅಂದರ ಈ ಸುಸ್ತು-ಗಿಡೀನೆಸ್ ಎಷ್ಟೋ ಕಡಿಮೆ ಅನಸ್ವಾವ." ಪೂರ್ಣಿಮಾಳ ಮುಖ ಇನ್ನಷ್ಟು ಬಾಡಿತು- “ಎಲ್ಲಿ ಕವಿತಾ ಡಾಕ್ಟರ್ ? ಮಕ್ಕಳನ್ನ ಸಂಭಾಳಸೊದೇ ಸಾಕಾಗತದ." “ಆದ್ಯಾಕ, ಮಕ್ಕಳನ್ನ ನೋಡಿಕೊಳ್ಳಿಕ್ಕೆ ಇಬ್ಬರು ಆಯಾ ಇದ್ದಾರಲ್ಲ ? ಅಡಿಗಿಗೆ ಮ್ಯಾಲಿನ ಕೆಲಸಕ್ಕ, ಹೊರಗಿನ ಕೆಲಸಕ್ಕೆ ಏನಿಲ್ಲಂದ್ರೂ ಐದಾರು ಸರ್ವಂಟ್ಸ್ ಇದ್ದಾರಲ್ಲ, ಮತ್ತ ಸುಪರನ್ಸಿಜನ್‌ಗೆ ನಿಮ್ಮ ಅತ್ತೆಯವು ಇದ್ದಾರ, ಎಲ್ಲಾ ಅನುಕೂಲ ಇದ್ದು ಅದ್ಯಾಕ ಹಿಂಗಂತೀರಿ ?" “ಎಲ್ಲಾ ಆದ ಡಾಕ್ಟರ್‌, ಇರಬೇಕಾದದ್ದ ಇಲ್ಲ." ಪೂರ್ಣಿಮಾ ಸೋತ ಧ್ವನಿಯಲ್ಲಿ ಅಂದಳು. ಏನಾದರೂ ಮಾಡಿ ಅವಳನ್ನು ಸ್ವಲ್ಪವಾದರೂ ಖುಶಿಗೊಳಿಸಲೆಂದು ಶಶಿ ಚೇಷ್ಟೆಯ ಧ್ವನಿಯಲ್ಲಿ ಅಂದಳು. “ಅಂದರ ಮಿಸ್ಟರ್ ಸಿಂಗ್ ಅವರು ಭಾಳ ಬಿಝಿ ಇಾರ, ನಿಮ್ಮ ಕಡೆ ಸಾಕಷ್ಟು ಲಕ್ಷ ಕೊಡೂದಿಲ್ಲ ಅಂತ ಬೇಜಾರೇನು ನಿಮಗ ?" ಪೂರ್ಣಿಮಾ ನಗದೆ ಅಂದಳು, “ಅವು ನನ್ನ ಕಡೆ ಲಕ್ಷ್ಯ ಕೊಡದಿದ್ರೇ ಛಲೋ ಇರಿತ್ತು. ನನಗೆ ಬೇಕಾದ್ದು ಮಾಡಿಕೊಂಡು ನಾ ಆರಾಮಿರಿದ್ದೆ." “ಈಗೇನು ಅವರು ನಿಮಗ ಏನು ಮಾಡ್ಲಿಕ್ಕೆ ಬ್ಯಾಡ ಅಂದಾರ ?" “ಅವರು ?'" ಪೂರ್ಣಿಮಾ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಳು. ನಂತರ ಕೆಳಗೆ ನೋಡುತ್ತ ಇಳಿಧ್ವನಿಯಲ್ಲಿ ಹೇಳಿದಳು, “ಕವಿತಾ ಯಾಕ ಬರಿಯೋದಿಲ್ಲ ಅಂದ್ರೆಲ್ಲ ಡಾಕ್ಟರ್‌, ಅದಕ್ಕೆ ಹೇಳಿದೆ. ನಮ್ಮನೀಯಿಗೆ ನಾ ಕವಿತಾ ಬರೆಯೋದು ಸೇರೋದಿಲ್ಲ....* “ಓಹ್, ಹಿಂಗೇನು ? ಶಶಿ ನಕ್ಕು ವಾತಾವರಣವನ್ನು ತಿಳಿಯಾಗಿಸಲೆತ್ನಿಸಿದಳು. “ವರ್ಷಕ್ಕೊಂದು- ಎರಡು ವರ್ಷಕ್ಕೊಂದು ಈ ಜೀವಂತ ಕಾವ್ಯನೇ ಸೃಷ್ಟಿ ಮಾಡ್ತೀರಲ್ಲ, ಮತ್ಯಾಕ ಬೇಕಬಿಡಿ ಆ ಜುಜುಬಿ ಕವಿತಾ ?" “ಈ ಜೀವಂತ ಕವಿತಾ ನನ್ನನ್ನ ಸ್ವಲ್ಪ ಸ್ವಲ್ಪ ಕೊಲ್ಲತಾ ಹೊರಟಾವ' ಅಂದ ಸಿಂಗ್ಳ ಮಾತನ್ನ ಕೇಳದಂತೆ ನಟಿಸುತ್ತ ಆಕೆ ಔಷಧ ತರಲೆಂದು ಒಳಗಿನ ಕೋಣೆಗೆ ನಡೆದಳು.

ಎಲ್ಲ ಮುಗಿಸಿ ರಾತ್ರಿ ಹಾಸಿಗೆ ಸೇರಿದಾಗ ಶಶಿಗೆ ಫಕ್ಕನೆ ಕಮಲಾಳ ಡೈರಿಯ