ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೫೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೫೧೦
ನಡೆದದ್ದೇ ದಾರಿ

ಮಹಿಳಾ ಉದ್ಯೋಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದುದನ್ನು
ಸಾಬೀತುಪಡಿಸಿ ಆತನಿಗೆ ದಂಡವನ್ನೂ ಆಕೆಗೆ ಪರಿಹಾರವನ್ನು ವಿಧಿಸಿದ್ದಳು.

ಹೀಗೆ ರಜೆಯ ಮೊದಲು ಎಲ್ಲ ಕೇಸುಗಳನ್ನೂ ಯಶಸ್ವಿನಿ ತೃಪ್ತಿಕರವಾಗಿ
ಇತ್ಯರ್ಥ ಮಾಡಿ ಸಮಾಧಾನದಿಂದ ಬೆಂಗಳೂರಿನ ಬಸ್ಸು ಏರಿ ಕೂತಳು.

ಬಸ್ಸು ಹೊರಟಾಗ ಮಾತ್ರ ಆಕೆ ಕೇಸುಗಳನ್ನೂ ವಕೀಲರ ವಾದ-
ಪ್ರತಿವಾದಗಳನ್ನೂ ಸಂಪೂರ್ಣವಾಗಿ ಮರೆತಳು. ಆಕೆಯ ಕಣ್ಣ ತುಂಬ. ಮನಸ್ಸುತುಂಬ
ಮನೆ, ತನ್ನ ಮನೆ, ಗಂಡ, ಮಕ್ಕಳು ತುಂಬಿದರು. ಇಂಜಿನೀಯರಿಂಗ್‌ ಓದುತ್ತಿದ್ದ.
ಇನ್ನೂ ತಾಯಿಯ ಕಡೆಯಿಂದಲೇ ಜಡೆ ಹಾಕಿಸಿಕೊಳ್ಳುತ್ತಿದ್ದ ಮಗಳು, ಪಾಪ, ಏನು
ಮಾಡುತ್ತಿದ್ದಾಳೋ, ರಾತ್ರಿಯ ಹೊತ್ತಿನಲ್ಲಿ ವಿದ್ಯುತ್‌ ಹೋಗಿ ದೀಪಗಳು ಆರಿದರೆ
ಓಡಿ ಬಂದು ತಾಯಿಯ ಮಗ್ಗುಲಲ್ಲಿ ಮಲಗುವ ಮಗ. ಪಾಪ, ಹೇಗೆ ಈ ಕಷ್ಟಗಳನ್ನು
ಎದುರಿಸುತ್ತಿದ್ದಾನೋ, ಮುಖ್ಯವಾಗಿ ಗಂಡ ಮನೋಹರ, ಅದೆಷ್ಟೋ ವರ್ಷಗಳಿಂದ
ಹಗಲಿರುಳೂ ಜೊತೆಯಾಗಿದ್ದ ಹೆಂಡತಿಯನ್ನು ಅಗಲಿ ಎಷ್ಟು ಒದ್ದಾಡುತ್ತಿದ್ದಾನೋ.
ನೆನೆಯುತ್ತಿದ್ದಂತೆ ಯಶಸ್ವಿನಿಗೆ ಕಣ್ಣುತುಂಬಿ ಬಂದವು. ಈ ರಜೆಯ ಪ್ರತಿಯೊಂದು
ಕೃಣವನ್ನೂ ಆಕೆ ತನ್ನವರಿಗಾಗಿ ಮೀಸಲಿಡುವಳು. ಸಾಧ್ಯವಾದರೆ ರಜೆಯನ್ನು
ವಿಸ್ತರಿಸುವಳು. ಇನ್ನೂ ಒಂದಿಷ್ಟು ಯೋಚಿಸಿದರೆ ನೌಕರಿಗೇ ರಾಜೀನಾಮೆ
ಕೊಡಬೇಕು ಅನ್ನಿಸುತ್ತದಲ್ಲ. ಆ ಬಗೆಗೂ ಮನೋಹರನೊಂದಿಗೆ ಈ ಸಲ
ಸಮಾಲೋಚಿಸಬೇಕು. ಸಂಸಾರದ ಸುಖ ಮತ್ತು ಶಾಂತಿಗಿಂತ ಯಾವುದೂ
ಹೆಚ್ಚಿನದಲ್ಲವಲ್ಲ.

ಇಷ್ಟು ದಿನಗಳ ನಂತರ ಯಶಸ್ವಿನಿ ಮನೆಗೆ ಬಂದಿದ್ದಳು. ಅವಳನ್ನು
ಎದುರುಗೊಳ್ಳಲು ಯಾರೂ ಬಸ್‌ಸ್ಟ್ಯಾಂಡಿಗೆ ಬಂದಿರಲಿಲ್ಲ. ಮನೆಯಲ್ಲೂ ಅತ್ತೆ
ಒಬ್ಬರೇ ಇದ್ದರು. ಮಗಳು ಕಾಲೇಜಿನ ಸಹಪಾಠಿಗಳೊಂದಿಗೆ ಪಿಕ್‌ನಿಕ್‌ಗೆ ಹೋಗಿದ್ದಳು.
ರವಿವಾರವಾದುದರಿಂದ ಮಗ ಕ್ರಿಕೆಟ್‌ ಆಡಲು ಹೋಗಿದ್ದ. ಸಂಜೆಯಾಗಿತ್ತೆಂದು
ಮನೋಹರ ಕ್ಲಬ್ಬಿಗೆ ಹೋಗಿದ್ದ.

ಒಂದು ಕ್ಚಣ ಮನಸ್ಸಿಗೆ ಪಿಚ್ಚೆನ್ನಿಸಿದರೂ ಆಕೆ ಸಾವರಿಸಿಕೊಂಡಳು. ಕೈಕಾಲು
ಮುಖ ತೊಳೆದು, ಅತ್ತೆ ಕೊಟ್ಟ ಚಹಾ ಕುಡಿದಳು. ನೀನು ಹೇಗಿದ್ದೀ, ಕೆಲಸ ಹೇಗೆ
ನಡೆದಿದೆ. ಆರೋಗ್ಯವೇ ಅಂತ ಏನೂ ಕೇಳದೆ ಅತ್ತೆ ಈಚೆಗೆ ಮದುವೆಯಾದ ತನ್ನ
ಮಗಳು ಅಂದರೆ ಮನೋಹರನ ತಂಗಿಯ ಸಂಭ್ರಮವನ್ನೇ ವರ್ಣಿಸುತ್ತ ಕೂತಾಗ