ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೬ ನಡೆದದ್ದೇ ದಾರಿ ಒರಟಾಗಿ ಅಲುಗಿಸಿ ಎಚ್ಚರಗೊಳಿಸಿದ, “ಶಾಂತೀ, ಏ ಶಾಂತೀ...." ಕಣ್ಣು ಬಿಟ್ಟು ಆಕೆ ನಿದ್ದೆಯ ಮಂಪರಿನಲ್ಲೇ ಏನು ಎಂಬಂತೆ ಆತನ ಕಡೆ ನೋಡಿದಳು. ಆಕೆಗೆ ಪೂರ್ಣ ಎಚ್ಚರವಾಗುವುದನ್ನೂ ಕಾಯದೆ ತುಸು ಅಸಹನೆಯಿಂದ ಆತನೆಂದ, “ಶಾಂತಿ, ನಿನ್ನೆ ರಾತ್ರಿ ನೀನು ಬಂದಾಗ ಒಂಬತ್ತು ಗಂಟೆಯಾಗಿತ್ತೆಂದು ಡೈವರ್ ಹೇಳಿದ್ದಲ್ಲ, ಎಲ್ಲಿಗೆ ಹೋಗಿದ್ದೆ ?" - ಆತನ ಪ್ರಶ್ನೆಯಲ್ಲಿನ ಮೊನೆಯಿಂದ ಆಕೆಗೆ ಪೂರಾ ಎಚ್ಚರಾಯಿತು. ಆಕಳಿಸುತ್ತ ಆತನ ಕಡೆ ಹೊರಳಿ ಆತನ ಎದೆಯಲ್ಲಿ ಮುಖ ಹುದುಗಿಸುತ್ತ ಆಕೆ ಅಂದಳು. “ನೀ ಕುಡದ ನಿಶೇದಾಗ ಮರಬಿಟ್ಟಿ ಕಾಣಸ್ತದ. ನೀನೇ ಹೇಳಿದ್ದಿಲ್ಲೇನು ಆ ಪ್ರೆಸ್ ಕಾನ್ಸರನ್ಸ್ ಅಟೆಂಡ್ ಆಗಿ ರಿಪೋರ್ಟ್ ಬರಿ ಅಂತ ? ಎಲ್ಲಾ ಮುಗಿಸಿ ಬರಿಕ್ಕೆ ತಡಾ ಆತು," ಬಳಿಗೆ ಬಂದವಳನ್ನು ದೂರ ಸರಿಸಿ ಆತ ಸಿಡುಕಿನಿಂದ ಅಂದ, ಅದೆಂಥ ಹಾಳಾದ ಕಾನ್ನರೆನ್ನು ರಾತ್ರಿ ಒಂಬತ್ತು ಗಂಟೆಯ ವರೆಗೆ ? ಲೇಟಾಗುತ್ತೆ ಅಂತ ಗೊತ್ತಾದ್ಮಲೆ ಬೇಗ ಎದ್ದು ಬಂದ್ದಿಡಬಾರದಾಗಿತ್ತೆ ನೀನು ? ಹೀಗೆಲ್ಲ ಲೇಡಿಸ್ ರಾತ್ರಿ ಒಬ್ಬೊಬೈ ತಿರುಗೋದು ಸರಿಯಲ್ಲ, ನನಗಂತೂ ಒಂದಿಷ್ಟೂ ಸೇರೋಲ್ಲ." ಶಾಂತಿಗೆ ಮತ್ತಷ್ಟು ಎಚ್ಚರಾಯಿತು. ಆಕೆ ಏನೂ ಮಾತಾಡದೆ ಮೇಲೆ ನೋಡುತ್ತ ಸುಮ್ಮನೆ ಅಂಗಾತಾಗಿ ಮಲಗಿದಳು. - ತುಸು ಹೊತ್ತು ಬಿಟ್ಟು ಜಾನ್ ಮತ್ತೆ ಅಂದ, “ಶಾಂತಿ, ಇದನ್ನ ನೆನಪಿಟ್ರೋ, ಇನ್ನೊಮ್ಮೆ ಹೀಗೆ ಲೇಟಾಗಿ ಬರೇಡ." “ಆಲ್‌ರೈಟ್" ಅಂದಳು ಆಕೆ. ತಿರುಗಿ ಬೆಳಗಾಗುವವರೆಗೂ ಜಾನ್ ಮತ್ತೆ ಆಕೆಯ ಹತ್ತಿರ ಸರಿಯಲಿಲ್ಲ.

ಸ್ವತಂತ್ರ ಪಾರ್ಟಿಯ ಪರವಾಗಿ ಪಾರ್ಟಿಯ ಸದಸ್ಯರೆಲ್ಲ ಜಾನ್ ಆಶೋಕ ಕುಮಾರನಿಗೆ ಮತಗಳನ್ನು ದೊರಕಿಸಲೆಂದು ಕ್ಯಾನ್ವ್ವಾಸ್ ಮಾಡಲು ದಿನಾ ಗುಂಪುಗುಂಪಾಗಿ ಬೇರೆ ಬೇರೆ ಕಡೆ ಹೋಗುತ್ತಿದ್ದರು. ಸ್ವತಃ ಜಾನ್‌ನ ಜೊತೆ ಮಾತ್ರ ಯಾವಾಗಲೂ ಲೂಸಿ ಫರ್ನಾಂಡಿಸ್, ತಪ್ಪಿದರೆ ರೀಟಾ ಮಾರಿಸ್, ಇಬ್ಬರ ಪೈಕಿ ಯಾರಾದರೊಬ್ಬರು ಹೋಗುತ್ತಿದ್ದರು. ಈ ದಿನಗಳಲ್ಲಿ ಶಾಂತಿ ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದಳು. ದಿನಕ್ಕೆ ಒಂದೋ ಎರಡೋ ಗಂಟೆ ಮಾತ್ರ ಆಫೀಸಿಗೆ ಬಂದು ಪತ್ರಿಕೆಯ ಕೆಲಸ ನೋಡುತ್ತಿದ್ದಳು.