________________
ಕವಲು } ಹೋಟೆಲ್ ಬ್ಲೂ ೧೭೭ ಖಾಲೀ ಮಾತಾಡಾಕ ಹತ್ತೀರಿ. ಸಭಾ ಅಂದಮ್ಯಾಲ, ಭಾಷಣಾ ಅಂದಮ್ಯಾಲ ಜನಾ ಬಂದು ಬಾರು. ಹ್ಯಾಂಡ್‌ಬಿಲ್ಲಿನ್ಯಾಗ ನಮ್ಮೆಲ್ಲಾರ ಹೆಸರು ನೋಡಿ ಬರದು ಇದ್ದಾರ ? ಮೊನ್ನೆ ಕಾಲೇಜಿನ್ಯಾಗ ಫಂಕ್ಯನ್ ಮಾಡಿದ್ದೆಲ್ಲ, ನಾ ಜಾತೀಯತಾ ಬಗ್ಗೆ ಮಾತಾಡಿದ್ದೆಲ್ಲ ನೋಡಿದ್ರಿಲ್ಲೋ ಹ್ಯಾಂಗ ಕೂಡಿತ್ತು ಮಂದಿ ?' - 'ಹೌದು ಶೆಟ್ಟರ, ಇವತ್ತು ನೀವು ಜಾತೀಯತೆಯ ಬಗ್ಗೆನೇ ಮಾತಾಡಿ, ನಮ್ಮ ದೇಶದ ಜನರಲ್ಲಿ ತುಂಬ ಆಳವಾಗಿ ಬೇರು ಬಿಟ್ಟಿರೋ ಭೂತ ಅಂದ್ರೆ ಈ ಜಾತೀಯತೆ. ಈ ಜಾತೀಯತೆಯಿಂದಾಗೋ ಅನಾಹುತಗಳು, ಜಾತ್ಯಾತೀತ ರಾಷ್ಟ್ರ ನಿರ್ಮಾಣ ಮಾಡೋ ಯೋಜನೆಗಳು ಇತ್ಯಾದಿ ಬಗ್ಗೆ ನಿಮ್ಮ ಕವಿವಾಣಿ ಕೇಳ್ತಾ ಇದ್ರೆ ಯಾವ ಪ್ರಾಮಾಣಿಕ ಮನಸ್ಸಾದ್ರೂ, ಜಾತೀ ವಿರುದ್ಧ ಬಂಡೇಳತ್ತೆ'- ಅಯ್ಯಂಗಾರ್. “ಉಚ್ಚಜಾತಿ- ಕನಿಷ್ಠ ಜಾತಿ ಅಂತ ಭೇದ ಮಾಡೋರ ನಡುವ ಬೆಳದು ಅದರ ಕಷ್ಟಾ ಉಂಡೀನಿ ನಾನು. ಅದಕ್ಕು ಜಾತಿ ಆಂದ್ರ ಸಂತಾಪ ಬರತಿ ನನಗ. ಎಲ್ಲಾ ಜಾತೀನೂ ನಿರ್ಮೂಲ ಮಾಡಿದಾಗ ನಮ್ಮ ದೇಶ ಉದ್ದಾರವಾಗದು. ಇಂವಾ ಬ್ರಾಹ್ಮಣಾ, ಇಂವಾ ಲಿಂಗಾಯತಾ ಇಂವಾ ಹೊಲೆಯಾ- ಅನ್ನವರನ್ನ ಕಂಡ್ರೆ ಮೈ ಉರೀತತಿ ನಂದು' – ಶಿವನಾಥ ಶೆಟ್ಟರ. 'ನಿಮ್ಮು ಹದಿನಾರಾಣೆ ಸಾತ್ವಿಕ ಸಂತಾಪ ಶೆಟ್ರೆ, ನೀವು ಜಾತೀ ಬಗೆಗೇ ಮಾತಾಡಿ, ಕೇಸಕರ್ ಸಾಹೇಬ್ರು ಭ್ರಷ್ಟಾಚಾರ ಬಗ್ಗೆ ಮಾತಾಡ್ಲಿ. ಈ ಆಡಳಿತ ಪಕ್ಷಾನ ಉರುಳಿಸಬೇಕಾದ್ರೆ ಅದು ಹ್ಯಾಗೆ ದೇಶದಲ್ಲಿ ಬೆಲೆ ಏರಿಕೆಗೆ, ಭ್ರಷ್ಟಾಚಾರಕ್ಕೆ ಕಾರಣ ಆಗಿದೆ ಅನ್ನೋದನ್ನು ನಂ ಜನಗಳಿಗೆ ತಿಳಿಸಿ ಹೇಳೋಕು. ಈ ಕೆಲ್ಸಾನ ಕೇಸಕರ್ ಹಾಗೆ ಬೇರೆ ಯಾರೂ ಮಾಡೋಕಾಗೋಲ್ಲ.' -ಶಂಕರಪ್ಪ. - 'ಹೌದು, ನಾನು ಸೋಶಿಯಲ್ ವರ್ಕರ್ ಆಗಿರೋದ್ರಿಂದ ನನಗ ಮಂದೀ ಕಾಂಟ್ಯಾಕ್ಟ್ ಭಾಳ ಬರದ. ಅದಕ್ಕೆ ಎಲ್ಲಾ ರೀತೀ ಭ್ರಷ್ಟಾಚಾರದ ಅನುಭವಾನೂ ನನಗ ಆವ. ಭ್ರಷ್ಟಾಚಾರದ ವಿರುದ್ಧ ಹೋರಾಡೋದ್ರಾಗ ಆರ್ಧಾ ಆಯುಷ್ಯ ಕಳೀತು ನಂದು.' -ಕೇಸಕರ್. ಮೂರನೆಯ ಸಲ ಅವರು ಕಾಫಿಗೆ ಹೇಳುತ್ತಿದ್ದಾಗ ಜೋಸಫ್ ಯೋಚಿಸಿದ : ಈ ಭ್ರಷ್ಟಾಚಾರ ಅಂದರೆ ಏನು ? ಗೋವೆಯಿಂದ ಬಾಸ್ ಪರದೇಶೀ ಮದ್ಯ ತರಿಸುವುದೆ ? ವಿಶೇಷ ಅತಿಥಿಗಳೊಂದಿಗೆ ರೀಟಾ ರಾತ್ರಿ ಕಳೆಯುವುದೆ ? ಮಿನಿಸ್ಟರ್ ಪಾರ್ಟಿಗಾಗಿ ಸರ್ಕಾರಿ ಗೆಸ್ಟ ಹೌಸಿನವರು ಸ್ಕಾಚ್ ಒಯ್ದದ್ದೆ ? “ಇವತ್ತಿನ ಭಾಷಣದಾಗ ನನ್ನ ಮುಖ್ಯ ಟಾರ್ಗೆಟ್ ಎರಡು : ಮೊದಿದ್ದು ಬ್ಲ್ಯಾಕ್ ಮಾರ್ಕೆಟ್ ಮಾಡೋ ಮರ್ಚಂಟ್ಟು ಮತ್ತು ಅವರ ಏಜಂಟ್ಟು, ಎರಡನೇದ್ದು