ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕೊನೆಯ ದಾರಿ } ಮುಕ್ತಿ ೧೧೯ ನೀವೇ** ಗಿರಿಧರನ ಭವಿಷ್ಯವಾಣಿ ತನ್ನೊಳಗಿನ ಭವ್ಯ ಕನಸಿನೊಂದಿಗೆ ತಾಳ ಹಾಕಿ ಕುಣಿಯುತ್ತಿದೆ. ಅದರಲ್ಲಿ ಏನೂ ಅತಿಶಯೋಕ್ತಿಯಿಲ್ಲ. ಚಂದೂಲಾಲನ ಮೇಲೆ ತನ್ನ ಇಂಪ್ರೆಶನ್ ಒಳ್ಳೆಯದಿರುವ ತನಕ ತಾನು ನಿರಾಶನಾಗಲು ಕಾರಣವೇ ಇಲ್ಲ. ಕನಸುಗಳೆಲ್ಲ ಸಿದ್ದಿಸುವ ಕಾಲವೂ ಈಗ ಬರುತ್ತಿದೆ. “ನಮ್ಮನ್ನ ಮಾತ್ರ ಮರೀಬ್ಯಾಡ್ರಪಾ. ಭರ್ಜರಿ ಪಾರ್ಟಿ ಕೊಡಬೇಕು ಮತ್ತ, “ಓ ಯೆಸ್, ಓ ಯೆಸ್" – ಅನ್ನುತ್ತ ಕುರ್ಚಿಯಲ್ಲಿ ಕೂತ ಆತ, ಮೈಯೆಲ್ಲ ಬಲೂನಿನಂತೆ ಹಗುರ-ಹಗುರ. ಕಣ್ಣ ತುಂಬ ಎಂಥದೋ ತೃಪ್ತಿಯ ಅಮಲು. ಇಂದು ಮುಂಜಾನೆಯಿಂದಲೂ ಹೀಗೆ. “ಇವತ್ಯ ನಿಮ್ಮ ಕಲಾ ಯಾಕ ಬಂದಿಲೀ ಶಂಕರ ಮಾವಾ ?" -ಹಾಳಾದವಳು ಮಿಸ್ ಪರ್ವತಿ ಕನಸಿನ ಎತ್ತರದಿಂದ ಒಮ್ಮೆಲೆ ಕೆಳಗೆ ತಳ್ಳುತ್ತಾಳೆ ತನ್ನನ್ನು. “ಆ ? ಏನಂದ್ರಿ ? ಕಲಾ ? ಆಕೀಗೆ ಮೈಯಾಗ ನೆಟ್ಟಗಿಲ್ಲ. ಎಂಟು ದಿವಸ ಸಿಕ್ ಲೀವ್ ತಗೊಂಡಾಳ ಇವತ್ತಿನಿಂದ ಒಂದು ಕ್ಷಣ ಎಲ್ಲಾ ಕಡೆ ನಿಃಶಬ್ದ . ಯಾರು ಯಾರೋ ಕಣ್ಣು ಮಿಟುಕಿಸಿರಬೇಕು. ಆಸಿ. ಮ್ಯಾನೇಜರ್‌ನ ಚೇಂಬರಿನ ಕಡೆ ದೃಷ್ಟಿ ಹಾಯಿಸಿರಬೇಕು, ಕಲಾನ ಖಾಲಿ ಟೇಬಲಿನ ಕಡೆಗೂ ನೋಡಿರಬೇಕು-ಶಂಕರನಾಮಾಗೆ ಎಲ್ಲ ಗೊತ್ತಾಗುತ್ತಿದೆ. ಆದರೆ ಯಾಕೋ ಗಂಟಲೊಣಗಿದಂತೆನಿಸುತ್ತಿರುವುದರಿಂದ ಮಾತಾಡುವುದು ಆಗುತ್ತಿಲ್ಲ. ಸ್ವಲ್ಪ ಹೊತ್ತು ಟೈಪ್‌ರೈಟರುಗಳ ಕಟ್ ಕಟ್, ಫೈಲುಗಳ ಸರ್ ಸರ್ ಬಿಟ್ಟರೆ ಬೇರಾವ ಸಪ್ಪಳವೂ ಇಲ್ಲ. - `ಸಲಾಮ್ ಸರ್' -ಹೊರಗಡೆಯಿಂದ ಕೇಳಿಬಂದ ಪ್ಯೂನ್‌ನ ಗೊಗ್ಗರು ದನಿ. ಒಳಗಿದ್ದವರಿಗೆ ಎಚ್ಚರಿಕೆ. ಅಸಿ. ಮ್ಯಾನೇಜರ್‌ ಬಂದರು ಎಂದು. 'ಗುಡ್ ಮಾರ್ನಿಂಗು'ಗಳಿಗೆ ನಸುಬಾಗಿ ಉತ್ತರಿಸುತ್ತ ಖಟ್ ಖಟ್ ಬೂಟಿನ ಸಪ್ಪಳ ಮಾಡುತ್ತ ತೂಗಾಡುವ ಬಾಗಿಲಲ್ಲಿ ತೂರಿದ ಚಂದ್ರಲಾಲನ ಬೆನ್ನು ಮರೆಯಾದೊಡನೆ ಪಿಸುದನಿಯಲ್ಲಿ ಕೇಳಿದಳು ಮಿಸ್‌ ಪಕ್ವತಿ, “ಬಾಸ್‌ನ ಮಗಳ ಜೋಡೀ ಇವರ ಎಂಗೇಜ್‌ಮೆಂಟ್ ಆತಂತಿ ಶಂಕರಮಾಮಾ ?" ತಿರುಗಿ ಹುರುಪೇರಿತು ಶಂಕರ ಮಾವಾನಿಗೆ “ಹೌದು ಹೌದು, ನಾನೇ ಅದಕ್ಕೆ ಮೀಡಿಯೇಟರ್ ಆಗಿದ್ದೆ." “ಅದಕ್ಕೆ ಇವರು ನಿಮ್ಮ ಮ್ಯಾಲೆ ಇಷ್ಟು ಖುಶ್ ಇದ್ದಾರ ಕಾಣಸ್ತದ." “ಹಹ್ನ, ಇರದ ಏನು ? ಎಷ್ಟ ತ್ರಾಸ ತಗೊಂಡೀನಿ ಆದರ ಸಲುವಾಗಿ ಗೊತ್ತದ