ವಿಷಯಕ್ಕೆ ಹೋಗು

ಪುಟ:ಶತಕ ಸಂಪುಟ.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೫

||೪೮||


ಕ್ಷುಧೆಯಿಲ್ಲದರೋಗಣೆಯ ಮಾಡದವ ಜಾಣ
ಮೃದುನುಡಿಯನಾಡುತಹುದೆನಿಸಿಕೊಂಬವ ಜಾಣ
ಅಧಿಕಕೋಪಿಗಳೊಡನೆ ಸೋತು ನಡೆವವ ಜಾಣ ಚೂರ್ಣ ಕೈಸಾರದನಕ
ವದನದೊಳು ಕ್ರಮುಕವನು ಹಾಕಿಕೊಳದವ ಜಾಣ
ಹೃದಯದೊಳು ಆವಗಂ ನಿಮ್ಮ ಧ್ಯಾನವನು ತ
ಪ್ಲದೆ ಮಾಡುವವ ಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು|| ೪೯
||


ತನುಜರೊಳು ಕೋಪವನು ಹಿಡಿಯದವ ಬಲುಜಾಣ
ಮನೆಯ ಕದನವನು ಪರರೊಳು ಪೇಳದವ ಜಾಣ
ಧನವಿರಲು ಧರ್ಮವನ್ನು ಗಳಿಸಿಕೊಂಬವ ಜಾಣ ದುರ್ಜನರು ಹಳಿವುತಿರಲು
ಮನದೊಳಗೆ ಹಿಡಿದ ವ್ರತಗಳನು ಬಿಡದವ ಜಾಣ
ಅನಲಾಕ್ಷ ನಿಮ್ಮ ಧ್ಯಾನವ ಬಿಡದೆ ಮಾಡುತಿ
ಪ್ಪನು ತಾನು ಸಿಜಾಣ ನಿಜಲಿಂಗ ಭವಭಂಗ ಶರಣಜನವರದ ಜಯತು || ೫೦
||


ರತಿಕೇಳಿಯಾನಂದವೆಂತೆಂಬ ನೆವದಿಂದೆ
ಪತಿಯ ಜಠರವ ಬಿಟ್ಟು ತನ್ನ ತಾ ಪೊರಮಟ್ಟು
ಸತಿಯ ಗರ್ಭಕೆ ಬಂದು ಇಂಬುಗೊಡುತಲೆ ನಿಂದು ದಿನದಿನಕೆ ಪಿಂಡಬಲಿದು
ಮಿತಿಯಿಂದ ಒಂಬತ್ತು ಮಾಸ ತುಂಬಿದ ಬಳಿಕ
ಕ್ಷಿತಿಗೆ ಮುಟ್ಟಿಸುವ ದೇವರ ದೇವ ನಿನ್ನ ಸ
ತೃತಿಯ ಬಲ್ಲವರಾರು ನಿಜಲಿಂಗ ಭವಭಂಗ ಶರಣಜನವರದ ಜಯತು|| ೫೧
||


ಪುಟ್ಟಿದಾಕ್ಷಣ ಜನನಿಜನಕರ್ಗೆ ಕಡುಮೋಹ
ಪಟ್ಟಿ ನಲವಿಂದ ಸಲಹುವರು ಬಳಿಕೊಂದು ಪೆಸ
ರಿಟ್ಟು ತೊಟ್ಟಿಲುಕುವಾಗ ಜೋ ಜೋಯೆಂದು ಪಾಡುವರು ಸಂಭ್ರಮದೊಳು