ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಸ್ಲಾಮಧರ್ಮದಿಂದ ಹಿಂದುಸ್ಥಾನದ ಮೇಲಾದ ಪರಿಕಾಮ.

೩೦೯

ಶಿಖರಕ್ಕಡರಿದ ರೋಮನರ ರಾಜ್ಯವನ್ನು ಸಹ ಗೆದ್ದು ಬಿಟ್ಟರು. ಕಿವಿಯಲ್ಲಿ ಗಾಳಿ ತು೦ಬಿದ೦ತೆ ಆವೇಶಗೊ೦ಡವರಾದ ಮುಸಲ್ಮಾನರಿಗೆ ಭ೦ಗಾರದ ಹೊಗೆ ಹೊರಡುತ್ತಿರುವ ಹಿಂದುಸ್ಥಾನದ೦ಧ ದೇಶದ ಕಡೆಗೆ ಕಣ್ಣು ತಿರುಗದೆ ಇದ್ದಿತೆ ? ಈ ಕಾಲಕ್ಕೆ ಹಿಂದುಸ್ಥಾನವೆಂದರೆ ಒ೦ದಾನೊ೦ದು ಕಾಲಕ್ಕೆ ದೇಹಬಲದಿಂದಲೂ ಬುದ್ಧಿ ಬಲದಿಂದಲೂ ಮೆರೆದು ಮೆರೆದು ಮುಪ್ಪಿಗೀಡಾದ ದೇಶವು. 'ಹಣ್ಣೆಲೆಯು ಉದುರುವ ಮು೦ದೆ ಹಸರೆಲೆಯು ನಗುವಂತೆ' ಮಹಮ್ಮದೀಯ ಧರ್ಮದ ಮುಂದೆ ಹಿಂದೂ ದೇಶದ ದಾಡಾಗಿತ್ತು. ಮೈಯಲ್ಲಿಯ ಬಲವೆಲ್ಲ ಬಸಿದು ಹೋಗಿ ಸ್ಮಶಾನದ ಮೇಲೆ ಕಣ್ಣಿಟ್ಟು ಕಾಲಕಳೆಯುವ ಹಿಂದುಸ್ಥಾನವೆತ್ತ ? ಇದೀಗ ತಾನೇ ಮಹಮ್ಮದವರ ಶಸ್ತ್ರಪ್ರಧಾನವಾದ ಮ೦ತ್ರದಿ೦ದ ಮೈಹುರಿಗೊಂಡ ಅರಬಸ್ಥಾನವೆತ್ತ? ಮುದಿತನದ ಆಯಾಸದಿಂದ ಕೈಲಾಗದೆಂದು ಮೈ ಮುದುಡಿಕೊಳ್ಳುತ್ತಿರುವರೊಂದು ದೇಶವು! ನವತಾರುಣ್ಯ ಭರದಿ೦ದ ಮೈಯುಬ್ಬಿಸಿ ಎಲ್ಲರ ಮೇಲೆ ಹರಿಹಾಯುತ್ತಿರುವದು ಮತ್ತೊಂದು ದೇಶವು! ಇಂಥ ಮುದಿತನದ ಮುಪ್ಪಿನಲ್ಲಿ ಹಿಂದೂದೇಶದಂಧ ಪುರಾಣ ಜನಾ೦ಗದಿಂದ ಅಗುವದೇನು ? ಹೇಗಿದ್ದರೂ, ಹಿಂದೂಜನಾಂಗದಲ್ಲಿಯ ಕ್ಷತ್ರಿಯ ಪೀಳಿಗೆಯವರಾದ ರಜಪೂತರು ಮುಸಲ್ಮಾನರನ್ನು ತಮ್ಮ ಅಳವು ಮೀರಿ ಅಡ್ಡಗಟ್ಟಿ ತಮ್ಮ ಸಾಹಸ ಶೌರ್ಯಾದಿಗಳದೊ೦ದು ಕೊನೆಯ ಕೋಲ್ಮೀಂಚಿನ ಹೊಳವನ್ನು ಹಿಂದುಸ್ಥಾನದ ಇತಿಹಾಸದೊಳಗೆ ಅಚ್ಚಳಿಯದ೦ತೆ, ಬೆಳಗಿಸಿದರು. ರಜಪೂತ ಸ್ತ್ರೀಯರು ತಮ್ಮ ಪಾತಿವ್ರತ್ಯವನ್ನೂ, ಶೀಲವನ್ನೂ ಕಾಯ್ದುಕೊಳ್ಳಲೋಸುಗ ಅಗ್ನಿಯೊಳಗೆ ಧುಮುಕಿ ತಮ್ಮ ಚಾರಿತ್ಯಾಗಿಯ ಜ್ಯೋತಿಯನ್ನು ಕಲ್ಪಾಂತಗಳ ವರೆಗೆ ಇತಿಹಾಸದೊಳಗೆ ಉರಿಯುತ್ತ ಇಟ್ಟರು; ಇರಲಿ. ಇಸ್ಲಾಮಧರ್ಮದ ಹಬ್ಬಗೆಯಿಂದ ಹಿಂದುಸ್ಥಾನದ ಪಾರತಂತ್ರ್ಯಕ್ಕೆ ಪ್ರಾರಂಭವಾಯಿತು. ಹಿಂದುಗಳ ಬಾಹ್ಯಸಂಸ್ಕೃತಿಯಲ್ಲಿ ಇಸ್ಲಾಮದ ನೆರಳು ಬಿದ್ದಿತು. ಧಾರ್ಮಿಕದೃಷ್ಟಿಯಿಂದ ಹಿಂದೂಧರ್ಮವು ಬೆಳೆಯುವದೊತ್ತಟ್ಟಗುಳಿದು ಅದು ದಿನವೊಂದಕ್ಕೆ ಕುಗ್ಗಿ ಕಳೆಗುಂದಲಾರ೦ಭಿಸಿತು. ಈ ವೇಳೆಗೆ ಬಹುಮಟ್ಟಿಗೆ ಹಿಂದೂಧರ್ಮದೊಳಗಿನ ಹುರುಳು