ವಿಷಯಕ್ಕೆ ಹೋಗು

ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೧೦
ಭಾರತೀಯರ ಇತಿಹಾಸವು.

ಹಾರಿ ಹೋಗಿ ಬರಿಯ ಹೊಟ್ಟು ಉಳಿದಿದ್ದರೂ, ಅದೇ ನಮ್ಮ ಸಂಸ್ಕೃತಿಯನ್ನು ರಕ್ಷಿಸಲಿಕ್ಕೆ ಕಾರಣವಾಯಿತೆನ್ನಬಹುದು; ಹಾಗೆ೦ತಲೇ ನಮ್ಮವರು ಜೀವಕ್ಕೆರವಾಗಿ ಧರ್ಮ ಉಳಿಸಿಕೊಂಡರು. ರಾಜ್ಯಸೂತ್ರಗಳೆಲ್ಲ ಕ್ರಮವಾಗಿ ಮುಸಲ್ಮಾನರ ಕೈ ಸೇರಿದ್ದರಿಂದ ಧರ್ಮಕ್ಕೆ ರಾಜಾಶ್ರಯವು ತಪ್ಪಿಹೋಗಿ ಮೆಲ್ಲಗೆ ಧರ್ಮದ ತನಿಗಿಚ್ಚು ತನ್ನಷ್ಟಕ್ಕೆ ತಾನೇ ನೊ೦ದಿ ಹೋಗಲನುವಾಯಿತು. ಇಷ್ಟು ನಷ್ಟವಾದರೂ ಹಿ೦ದದೇಶದವರೂ ಮುಸಲ್ಮಾನರೂ ಬಹು ದಿನ ಒಂದೇ ಮನೆಯಲ್ಲಿ ಕೂಡಿರುವಂತೆ ಹೊ೦ದಿಕೊ೦ಡಿದ್ದುದರಿಂದ ಹಿಂದುಸ್ಥಾನಕ್ಕೆ ಅವರೊಬ್ಬರು ದತ್ತಕ ಪುತ್ರರಾಗಿ ಕೊನೆಯ ವರೆಗೂ ಹಿಂದೂದೇಶವನ್ನೇ ತಮ್ಮ ತಾಯ್ನಾಡನ್ನಾಗಿ ತಿಳಿದಕೊ೦ಡು ಇರತೊಡಗಿದರು. ಮುಸಲ್ಮಾನರಿಂದ ಮೊದಲು ಹಿಂದೂಪುತ್ರರಿಗೆ ಎಷ್ಟೊಂದು ಕಷ್ಟನಿಷ್ಠುರಗಳನ್ನು ಸೈರಿಸುವ ಅನರ್ಥಕರವಾದ ಪ್ರಸಂಗಗಳು ಬಂದು ಮುತ್ತಿದಾಗ್ಯೂ ಹಿ೦ದತಾಯಿಯು ಅವರನ್ನು ಹೊರಗೆ ದಬ್ಬಿ ಹಾಕದೆ ತನ್ನ ಮನೆಯಲ್ಲಿ ಅವರಿಗೂ ಆಶ್ರಯವನ್ನು ಕೊಟ್ಟು ಇಟ್ಟುಕೊಂಡಳು. ಬರುಬರುತ್ತ ಹಿಂದೂಧರ್ಮವೂ ಇಸ್ಲಾಮಧರ್ಮವೂ ಅವೆರಡು ಸೋದರಧರ್ಮಗಳಾಗಿ ಬಾಳತೊಡಗಿದವು. ಮು೦ದೆ ಮು೦ದ೦ತೂ ಹಿಂದೂಸಮಾಜದೊಳಗೆ ಇಸ್ಲಾಮರ ತತ್ವಗಳೂ, ಇಸ್ಲಾಮದೇವತೆಗಳ ಭಕ್ತಿಯೂ ಇಸ್ಲಾಮರಲ್ಲಿ ಹಿಂದೂ ದೇವತೆಗಳ ಭಕ್ತಿಯೂ ಒಳಗಿಂದೊಳಗೇ ಸ೦ಸರ್ಗವಿಶೇಷದಿಂದ ಬೆಳೆಯುತ್ತ ನಡೆದವೆಂಬುದು ಮುಂದಿನ ಇತಿಹಾಸದಿಂದ ತಾನೇ ನಿಚ್ಚಳವಾಗಿ ತಿಳಿಯುವದು.