ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೪೭ ನಾನೇ ತೌರಿಗೆ ಬಿಟ್ಟು ಬಂದೆ, ಎಂದಿದ್ದರು. ಆಧುನಿಕ ಪರಶುರಾಮ' ಎಂದು ತಾನು ಅವರನ್ನು ಲೇವಡಿ ಮಾಡಿದ್ದ ನೆನಪು... ಅನಂತರ ಏನಾಯಿತು? ಎಂದು ಕೇಳಿದ್ದೆ. “ಅಯ್ಯೋ, ನಾಲ್ಕು ದಿನವೂ ಸಹ ಕಳೆಯಲಿಲ್ಲ. ಹೋಗಿ ಕರೆದುಕೊಂಡು ಬಾ' ಎಂಬ ಇನ್ನೊಂದು ಆಜ್ಞೆ ಹೊರಬಿತ್ತು!- ಅಪ್ಪ ಮೇಲೆ ಮೇಲೆ ಹಟಮಾರಿ ಎನ್ನುವ ಹಾಗೆ ತೋರಿದರೂ ಒಳಗೆ ತೀರಾ ಮೃದು. ಇನ್ನೊಬ್ಬರಿಗೆ ನೋವಾದರೆ ಮರುಗಿ, ಕರಗುವ ಸ್ವಭಾವ!'.... “ಗಂಧಶಾಸ್ತ್ರಿಗಳು ಕೇಳಿದೊಡನೆಯೇ ಬೆಚ್ಚಿ ಶ್ರೀಗಂಧವನ್ನು ಗಂಧದ ಕೊರಡಿಗೆ ಮೆತ್ತಿ, “ತಗೋಳ್ಳಿ ಮಾವಯ್ಯ. ನೀವು ದೇವರುಗಳಿಗೆ ಗಂಧ, ಕುಂಕುಮ ಇಟ್ಟು, ಹೂವುಗಳನ್ನು ಸಂಪುಟದ ದೇವರುಗಳಿಗೆ, ಪಟದ ದೇವರುಗಳಿಗೆ ಭರಿಸೋದರೊಳಗೆ ದೇವರ ನೈವೇದ್ಯಕ್ಕೆ ಸಜ್ಜೆಗೆ ಮಾಡಿ ತಂದುಬಿಡ್ತೀನಿ” ಎಂದು, ಗಂಧದ ಕೊರಡನ್ನು ಅವರ ಕೈಗಿತ್ತು ಎದ್ದಳು. ಅಡಿಗೆಕೋಣೆಗೆ ಹೋಗುವಾಗ ಮಾತ್ರವಲ್ಲದೆ, ಅಲ್ಲಿ ರಸಬಾಳೆಹಣ್ಣುಗಳನ್ನು ಸುಲಿದು, ಅವನ್ನು ಕಿವುಚಿ, ಒಲೆಯ ಮೇಲೆ ಬೇಯುವ ರವೆ, ಸಕ್ಕರೆ, ಹಾಲು, ಕುಂಕಮದೇಸರಿ, ಏಲಕ್ಕಿ ಪುಡಿಗಳ ಮಿಶ್ರಣಕ್ಕೆ ಅವನ್ನು ಹಾಕುತ್ತಿರವಾಗಲೂ ತನ್ನ ಮದುವೆ ಮತ್ತು ಅದರ ತರುವಾಯದ ದಿನಗಳ ನೆನಪು ಮತ್ತೆ ಮತ್ತೆ ಮಾಡಿತು. ಇಷ್ಟು ಕಾಲವೂ ಆ ನೆನಪು ತನ್ನ ಬಳಿ ಸುಳಿಯುತ್ತಿರಲಿಲ್ಲವೆಂದೇನಲ್ಲ. ಆದರೆ ಇಂದು ಏಕೊ ಅದು ಅತಿ ಪ್ರಖರವಾಗಿ ತಾಂಡವವಾಡಿತು...ಮದುವೆ ಮಂಟಪದಲ್ಲಿ ಅಲಂಕಾರ ಮಾಡಿ ನಿಂತಾಗ- ಗಂಡು, ಹೆಣ್ಣು ಎಂದರೆ ಹೀಗಿರಬೇಕು; ಇದು ಅಪರೂಪದ ಜೋಡಿ; ಈ ರೀತಿಯ ವರಸಾಮ್ಯ ಲಕ್ಷಕ್ಕೆ ಒಂದು; ಆ ಭಗವಂತನೇ ಇವರಿಬ್ಬರನ್ನೂ ಒಂದುಮಾಡಿ, ಕಣ್ಣುತುಂಬ ನೋಡಿ, ಸಂತೋಷಿಸುತ್ತಿರಬೇಕು!- ಇವೇ ಮಾತುಗಳು, ದೀಪಾವಳಿಯ ಹೂಬಾಣಗಳಂತೆ ನೆರೆದವರೆಲ್ಲರ ಬಾಯಿಗಳಿಂದ ಉದುರಿ ತಮ್ಮಿಬ್ಬರನ್ನೂ ಪುಳಕಗೊಳಿಸಿದ್ದವು... ಸಜ್ಜಿಗೆ ತಳದಲ್ಲಿ ಸೀದ ವಾಸನೆ ಬಂದು, ಪಾತ್ರೆಯನ್ನು ಸೀರೆಯ ಸೆರಗಿನಲ್ಲೆ ಹಿಡಿದು, ಒಲೆಯಿಂದ ಕೆಳಗೆ ಇಳುಕಿಟ್ಟಳು. ಮನಸ್ಸು ಹಟಾತ್ತನೆ ಬೇರೆ ದಿಕ್ಕಿಗೆ ತಿರುಗಿತು. ಸುಮಾರು ಹಿಂದಿನ ಮಾತು. ಹೀಗೆಯೇ ತಾನು ನೈವೇದ್ಯಕ್ಕೆ ಸಜ್ಜಿಗೆ ಮಾಡಲು ಎಲ್ಲ ಸಿದ್ಧತೆ ಮಾಡಿ, ಪಾತ್ರೆಯನ್ನು ಒಲೆಯ ಮೇಲೆ ಇಡುತ್ತಿರುವಂತೆ ಎರಡು ತೊಡೆಗಳ ನಡುವೆ ತಣ್ಣಗಾದಂತ ಆಗಿ 'ಅಯ್ಯೋ ದೇವರೇ!- ಈ