ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಕೆಳಗಿಳಿದು ಬಂದಿರಬೇಕು.... “ರುದ್ರ ಕೆಳಗಿಳಿದು ಬಂದಾಗ ನಡುಗುತ್ತಲೇ ಇದ್ದನಂತೆ... ಆದರೆ ರುದ್ರ ನಿರೀಕ್ಷಿಸಿದಂತೆ ಕೇಶವಯ್ಯನಾಗಲಿ, ಅವನ ಆಳುಮಗನಾಗಲಿ ರುದ್ರನ ಮೇಲೆ ಕೈಯೆತ್ತಲೇ ಇಲ್ಲವಂತೆ. ಅದಕ್ಕೆ ಬದಲು, ಕೇಶವಯ್ಯ ರುದ್ರನ ಬೆನ್ನು ಸವರಿ“ಪಾಪ, ಎಳನೀರಿನ ಆಸೆಗೆ ನಿನ್ನ ಪ್ರಾಣಾನೆ ಒಪ್ಪಿಸಿದ್ದೆಯಲ್ಲೊ, ರುದ್ರ!... ನಮ್ಮ ತೋಟಗಳಲ್ಲಿ ಈಚೀಚೆಗೆ ಸರ್ಪಗಳ ಹಾವಳಿ ವಿಪರೀತವಾಗಿಬಿಟ್ಟಿದೆ. ನಾವು ಕೂಡ ನಮ್ಮ ಜೀವಾ ಕೈಲಿ ಹಿಡದೇ ಈ ತೆಂಗಿನ ಮರಗಳನ್ನು ಹತ್ತಬೇಕಾಗಿದೆ. ಸದ್ಯ, ಸರ್ಪ ತೆಂಗಿನ ಮರದ ಮೇಲಿರೋದರಿಂದ ನೀನು ಬದುಕಿದೆ. ನೀನು ಬಾಳೆಗೊನೆಗಳಿಗೆ ಕೈಹಾಕಿದಾಗ ಏನಾರ ಬಾಳೆಗಿಡಗಳಲ್ಲಿ ಸರ್ಪ ಇದ್ದರೆ ಏನಪ್ಪ ಗತಿ?... ಅದರಲ್ಲೂ ಬೆಳಗಿನ ವೇಳೆ ಆದ್ದರಿಂದ ಬಚಾವಾದೆ. ರಾತ್ರಿ ಸಮಯ ಆಗಿದ್ದರೆ ಏನಾಗಿತ್ತು ಯೋಚನೆ ಮಾಡು!... ನೋಡಪ್ಪ ರುದ, ನೀನು ಒಂದೆರಡು ತೆಂಗಿನಕಾಯಿ ಕಿತ್ತರೆ, ಮೂರುನಾಲ್ಕು ಬಾಳೆಗೊನೆ ಹಾರಿಸಿದರೆ ನಮ್ಮ ತೋಟವೇನೂ ಅಂಥ ಹಾಳಾಗುಲ್ಲ. ಲಕ್ಷ್ಮಿ ನಮಗೆ ಕೊಡೊದನ್ನ ಕೊಟ್ಟೆ ಕೊಡ್ತಾಳೆ. ಆದರೆ ಏನಾರ ಹೆಚ್ಚು ಕಮ್ಮಿ ಆಯ್ತು ಅಂದರೆ, ನಿನ್ನ ಹೆಂಡತಿ ಮಕ್ಕಳ ಗತಿಯೇನು?- ಅಲ್ಲದೀರ ನಿನ್ನ ಎರಡನೆಯ ಮಗು ಇನ್ನೂ ಕೈಕೂಸು. ಒಂದು ತಿಂಗಳೂ ಸಹ ತುಂಬಿಲ್ಲ.... ಆ ನಿನ್ನ ಮಕ್ಕಳು ಹೆಂಡತಿ, ಅವರಿಗೋಸ್ಕರವಾಗಿಯಾದರೂ ಪ್ರಾಣಭಯ ಇಲ್ಲದೆ ಹೀಗೆ ಅವರಿವರ ತೋಟಕ್ಕೆ ನುಗ್ಗೋದು ನಿಲ್ಲಿಸಪ್ಪ...' ನಯವಾಗಿ ಹೇಳಿ, ಅವನ ತಲೆ ಸವರಿದನಂತೆ, ರುದ್ರ ಕೇಶವಯ್ಯನ ಕಾಲಿಗೆ ಬಿದ್ದು, ಕ್ಷಮಿಸಿ ಕೇಶವಯ್ಯನೋರೆ, ಇನ್ನು ನಿಮ್ಮೂರ ತೋಟಗಳಿಗೆ ಕಾಲಿಟ್ಟರೆ ನನ್ನ ಹೆತ್ತ ತಾಯಿ ಆಣೆ' ಎಂದು ಭಾಷೆಯಿತ್ತು, ಅಲ್ಲಿಂದ ಕಾಲುಕಿತ್ತ ಸುದ್ದಿಯನ್ನ ಸ್ವಯಂ ಕೇಶವಯ್ಯನೆ ಸ್ವಾರಸ್ಯವಾಗಿ ನನ್ನ ಸಂಗಡ ಹೇಳಿದ. ಇದನ್ನ ನಿಮಗೂ ತಿಳಿಸೋಣ ಅನ್ನಿಸಿ, ಇಲ್ಲಿಗೆ ಬಂದೆ” ಎಂದರು. ಈ ಸಂಗತಿಯನ್ನು ಕೇಳಿ ಶಾಸ್ತ್ರಿಗಳು ತೃಪ್ತಿಯ ನಿಟ್ಟುಸಿರು ಬಿಟ್ಟರು. “ಆ ಕೇಶವಯ್ಯ ತಾಯಗ್ಗಂಡ, ಸಹಜ, ಆದರೆ ಅವನು ಈ ಹೂಟ ಹೂಡಿದ್ದರಿಂದ ಸದ್ಯ ನಮ್ಮ ತೋಟಗಳು ಉಳಿಯುವ ಹಾಗಾಯ... ಒಮೊಮ್ಮೆ ದುಷ್ಟರಿಂದಲೂ ಸಹ ಹೀಗೆ ಅಪ್ಪಿತಪ್ಪಿ ಒಂದೊಂದು ಒಳ್ಳೆಯ ಕಾರ್ಯ ನಡೆದು ಹೋಗತ್ತೆ ನೋಡಿ, ವೆಂಕಣ್ಣ...” ಇಷ್ಟು ಹೇಳಿ ಕೃಷ್ಣಶಾಸ್ತ್ರಿಗಳು ಎದ್ದು ಆಳುಗಳತ್ತ ನಡೆದರು. ವೆಂಕಟೇಶ