________________
೫೪ ವೈಶಾಖ ನಾನು ಊಟ ಮಾಡುವುದಿಲ್ಲ. ಹೇಗಿದ್ದರೂ ನಾನು ಪ್ರತ್ಯೇಕವಾಗಿ ಅಡಿಗೆ ಮಾಡಿಕೊಳ್ಳಲೇಬೇಕು... ಯಾಕೆ ಇಷ್ಟೆಲ್ಲ ರಂಪಾಟ?- ಎಲ್ಲರಿಗೂ ನಾನೇ ಅಡಿಗೆ ಮಾಡಿಬಿಟ್ಟರೆ, ಯಾವ ಸಮಸ್ಯೆಯೂ ಇರಲ್ಲ” ಎಂದು ಅಡಿಗೆಕೋಣೆಯ ಯಜಮಾನಿಕೆಯನ್ನು ತಾನೇ ವಹಿಸಿಬಿಟ್ಟಳು! ಮಾವನವರ ತಿಂಡಿ ತೀರ್ಥ ಊಟ ಉಪಚಾರ ಎಲ್ಲವೂ ಅವಳ ಕಾರುಬಾರಿಗೇ ಒಳಪಟ್ಟವು. ತನ್ನ ಯಜಮಾನರು ಮಾತ್ರ ಅದೇಕೋ ಅವಳಿಗೆ ಒಗ್ಗಿರಲಿಲ್ಲ! ಅವಳು ಮದುವೆಯಾಗದೆ ಕನೈಯಾಗಿ ತಮ್ಮ ಮನೆಯಲ್ಲಿದ್ದಾಗಲೂ ಇದೇ ಪರಿಪಾಟಲಂತೆ... “ಆಗಲೂ ಅಷ್ಟೆ, ಸುಶೀಲತೆಯ ಗುಣ ನನಗೆ ಕೊಂಚವೂ ಪ್ರಯವಾಗುತ್ತಿರಲಿಲ್ಲ. ಯಾವಾಗಲೂ ತನ್ನ ಮಾತೇ ಮುಂದಾಗಬೇಕು. ಯಾವ ಸಂದರ್ಭದಲ್ಲೂ ತನ್ನ ಬೇಳೆಯೇ ಬೇಯಬೇಕು ಅನ್ನುವ ಜಾತಿ!... ಅವಳ ಈ ಸ್ವಭಾವ ನಮ್ಮ ತಾಯಿಯನ್ನೂ ಒಮ್ಮೊಮ್ಮೆ ರೊಚ್ಚಿಗೇಳಿಸಿದ್ದುಂಟು. ಹಾಗೆ ನೋಡಿದರೆ, ನಮ್ಮ ತಂದೆಯವರೆ, ಕಿರಿಯ ತಂಗಿ ಎಂಬ ಮಮಕಾರದಿಂದಲೋ ಏನೊ, ಅವಳು ಎಷ್ಟೇ ಅಹಂಕಾರದಿಂದ ನಡೆದರೂ ಏನೇ ಅವಿವೇಕ ಮಾಡಿದರೂ ಸೊಲ್ಲೆತ್ತದೆ ಸುಮ್ಮನಿರುತ್ತಿದ್ದರು”- ಹೀಗೆಂದು ತನ್ನ ಯಜಮಾನರೆ ಸುಶೀಲತೆಯ ನಡತೆಯ ಬಗ್ಗೆ ಒಮ್ಮೆ ವಿವರಸಿದ್ದುಂಟು.... ಮಾವನವರ ಈ ಮಮಕಾರವೆ ಸುಶೀಲತೆಯು ನಮ್ಮ ಮನೆಯ ಆಡಳಿತದ ಮೇಲೆ ತನ್ನ ಸಾರ್ವಔಮತ್ವವನ್ನು ಸ್ಥಾಪಿಸಲು ನೆರವಾಯಿತು. ಒಂದು ದಿನ ನಾನು ಹಜಾರದ ಕಸ ಗುಡಿಸುತ್ತಿದ್ದೆ. ಸುಶೀಲ ಯಾರ ಮನೆಗೆ ಹೋಗಿದ್ದವರು ಒಳ ಬಂದು ಬಾಗಿಲು ಮುಚ್ಚಿ ನನ್ನಲ್ಲಿಗೆ ಬಂದವರು, ದನಿ ತಗ್ಗಿಸಿ ಏನೊ ಗೊಪ್ಯ ಹೇಳುವವರಂತೆ, “ಏಳಿದೆಯೇನೆ ರುಕ್ಕು, ನಮ್ಮ ವಿಶ್ವ ಈ ಪರಿ ಕೆಟ್ಟು ಹೋಗ್ತಾನೆ ಎಂದು ಕನಸು ಮನಸಿನಲ್ಲೂ ನಾನು ಎಣಿಸಿರಲಿಲ್ಲ” -ಹೇಳಿ ಬೆಚ್ಚಿಸಿದರು. “ಯಾಕೆ?” ಕೇಳಿದಾಗ, “ಆ ಪರಿವಾರದ ಸಣ್ಣಿ ಇಲ್ಲವೆ?- ಅವಳ ಜೊತೆ ತೋಟದಲ್ಲಿ ಅವಕಾಶ ಸಿಕ್ಕಾಗಲೆಲ್ಲ ಸರಸ ಆಡ್ತಾನಂತೆ ನಮ್ಮ ವಿಶ್ವ...”ಎಂದರು. ನಾನು ಒಳಗೇ ಕಂಪಸುತ್ತ, “ಯಾರು ನಿಮಗೆ ಈ ಸುದ್ದಿ ತಿಳಿಸಿದ್ದು ?” ಕೇಳಿದೆ. ಸುಶೀಲತೆ ಸಿಡುಕುತ್ತ, “ಯಾರೇನು ಹೇಳಬೇಕು?- ಊರಿಗೆ ಊರೇ ಕುಣೀತಾ ಇದೆ...