________________
ಸಮಗ್ರ ಕಾದಂಬರಿಗಳು ೭೩ ತೊಡಗುವಂತೆ ಇದು ಸಾಧ್ಯವಾಗಬಹುದೊ ಏನೊ?... ಆದರೆ ಈ ಹೊತ್ತಿನಲ್ಲಿ ಮಾಡುವ ಕೆಲಸವಾದರೂ ಈ ಮನೆಯಲ್ಲಿ ಏನು ಉಳಿದಿದೆ? ಎದ್ದು ಕಸ ಗುಡಿಸಲೇ?- ಒಂದು ಯೋಚನೆ ಬಂತು. ಆದರೆ ಅದಕ್ಕೂ ಒಂದು ಸಮಯ ದಮಯ ಬೇಡವೆ?- ಈ ವೇಳೆಯಲ್ಲಿ ಪೊರಕೆ ಹಿಡಿದರೆ ನೋಡಿದವರು ನಕ್ಕಾರು!... ಹಾಗಾದರೆ ಏನು ಮಾಡುವುದು?... ಮನಸ್ಸಿಗೆ ಬೇರೇನು ಯೋಚಿಸುವುದೂ ಅಶಕ್ಯವಾಗಿ ಶೂನ್ಯದ ತೆರೆ ಅದನ್ನು ಆವರಿಸುತ್ತಿರುವಂತೆ, ದಟ್ಟಿಸಿದ ಸಂಜೆಮೋಡದ ಅಂಚಿನಲ್ಲಿ ಒಮ್ಮೊಮ್ಮೆ ಹಟಾತ್ತನೆ ಪ್ರತ್ಯಕ್ಷವಾಗುವ ಬೆಳಕಿನ ಗೆರೆಯಂತೆ, ಅಟ್ಟದ ಮೇಲಿರಿಸಿದ ವೀಣೆಯ ನೆನಪಾಯಿತು. ಹಿಂದೆ ತಾನು ಅಭ್ಯಾಸ ಮಾಡುತ್ತಿದ್ದ ವೀಣೆ ಗೋಪಾಲಯ್ಯನವರು ಅಭ್ಯಾಸ ಮಾಡುತ್ತಿದ್ದುದಂತೆ. ಅದು ಈಗ ಧೂಳು ಹೊದೆದು ಅಟ್ಟ ಸೇರಿದೆ. ತಟ್ಟನೆ ಎದ್ದಳು. ಏಣಿಯ ಮೇಲೇರಿ ಹೋಗಿ ಜೋಪಾನವಾಗಿ ವೀಣೆಯನ್ನು ಅಟ್ಟದಿಂದ ಇಳಿಸಿ ತಂದಳು- ಹಳೆಯ ಬಟ್ಟೆಯ ತುಂಡಿನಿಂದ ಅದರ ಮೇಲೆ ಹರಡಿದಂತೆ ತುಂಬಿದ್ದ ಧೂಳು, ಸತ್ತ ಜಿರಲೆ, ಇಲಿಯ ಪಿಕ್ಕೆ, ಎಲ್ಲವನ್ನೂ ತೊಡೆದುಹಾಕುತ್ತ, ನನಗೆ ಕೊಡದಿದ್ದರೆ ಪರವಿಲ್ಲ. ಇದಕ್ಕೆ ಒಂದು ಬಟ್ಟೆ ಗೌಸು ಮುಚ್ಚುವ ವಿವೇಕವಾದರೂ ಬೇಡವೆ? ಎಂದು ತನ್ನಲ್ಲೆ ಗೊಣಗಿದಳು. ಅನಂತೆ ಬಿರಡೆಗಳನ್ನು ತಿರುಗಿಸಿ ತಂತಿಗಳನ್ನು ಹದಗೊಳಿಸುವ ಕೆಲಸ, ಬೆರಳಿನಲ್ಲಿ ಮೀಟಿ ನಾದ ಹದವಾಗಿ ಹೊಮ್ಮುತ್ತಿದೆ ಎಂದೆನಿಸಿದಾಗ, ವೀಣೆಯನ್ನೆತ್ತಿ ತೊಡೆಯ ಮೇಲಿಟ್ಟು, ತಂತಿ ಮೀಟಿ ಎಡಗೈ ಬೆರಳುಗಳನ್ನು ತಂತಿಗಳ ಮೇಲೆ ಸುಮ್ಮನೆ ಆಡಿಸಿದಳುಕಲಿತದ್ದೆಲ್ಲ ಮರೆತಿರಬೇಕೆಂಬ ಭ್ರಮೆ... ಎಲ್ಲಿಂದ ಹೇಗೆ ಆರಂಭ ಮಾಡುವುದು?ಏನೂ ಹೊಳೆಯದೆ ಸ ರಿ ಮಾ ಗ ರಿ ಸ ರಿ ಸ ನುಡಿಸಿದಳು. ನಕ್ಕಳು. ಕಳೆದು ಹೋದ ಒಡವೆ ಸಿಕ್ಕಿದಷ್ಟು ಸಂತೋಷವಾಗಿತ್ತು. ಇಲ್ಲಿಯವರೆಗೆ ಅಭ್ಯಾಸ ಮುಂದುವರಿಸಿದ್ದರೆ ತಾನು ರಾಮಮಂದಿರದಲ್ಲಿ ವಿದ್ವಾಂಸರೆದುರು ನುಡಿಸುವಷ್ಟು ಪ್ರಾವೀಣ್ಯ ಪಡೆಯಲು ಸಾಧ್ಯವಾಗುತ್ತಿರಲಿಲ್ಲವೆ?... ಶಾಮರಾಯರ ತರಬೇತಿ ಇನ್ನೂ ಕೆಲವು ವರ್ಷ ಸಿಕ್ಕಿದ್ದರೆ, ಆ ಪರಿಣತಿ ಲಭ್ಯವಾಗುತ್ತಿತ್ತೊ, ಏನೊ? ಆದರೆ ಗಂಡಿಸಿಗೆ ಹೆಣ್ಣು ಹೇಳಿ ಕೇಳಿ ಕಾಮದ ಗೊಂಬೆ. ಗುರುಸ್ಥಾನದಲ್ಲಿದ್ದ ಶ್ಯಾಮ ತನ್ನ ಪಾಡಿಗೆ ತಾನು ಘನವಾಗಿ ವೀಣೆಯ ಪಾಠವನ್ನು ಮುಂದುವರಿಸದೆ ತೂಕ ತಪ್ಪಿ ತನ್ನನ್ನು ಲಗ್ನವಾಗುವ ಬಯಕೆಯ ಬೆನ್ನನ್ನೇಕೆ ಏರಬೇಕಿತ್ತು?ಎಂದು ಗೊಣಗುತ್ತಲೆ ವೀಣೆಯನ್ನು ಮೀಟುತ್ತ ಬೆರಳಾಡಿಸಿದಳು... ಆ ಗಳಿಗೆಗೆ ನೆನಪಾದ ಯಾವುದೋ ಕೀರ್ತನೆಯನ್ನು ನುಡಿಸುತ್ತ ತಗ್ಗಿದ