ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಎಂದು ಸ್ವಲ್ಪ ತಡೆದಳು. ತರುವಾಯ, “ಅಯ್ಯೋ, ಪರ್ಪಂಚಕೇ ಗೃಹ್ವಾಗ ನಿಮ್ಮ ತಾವು ಮುಚ್ಚಕ್ಕೆ ಹ್ವಾದರೆ, ತಿಕ ಬುಟ್ಟು ಸ್ಯಾಲೆ ಸುತ್ತಿಗಂಡಂಗೆ ಆಯ್ತದೆ... ಕ್ಯಾಳಿ. ನಿಮ್ಮ ತಾವು ಯೋಳಕ್ಕೇನು- ನಂದೂ ಎಣ್ಣು ಜಲ್ಮ ತಡೀನಿಲ್ಲ. ಅವನ್ನ ಬುಟ್ಟುಬುಟ್ಟು ಬ್ಯಾರೆ ಒಬ್ಬ ಮಡೀಕಂಡಿ.”- ನೀರು ಕುಡಿದಷ್ಟು ಸಲೀಸಾಗಿ ನುಡಿದಿದ್ದಳು!... ಬಸವಾಪಟ್ಟಣದ ಬಳೆಗಾರ ಜಗಸೆಟ್ಟಿ ಬಳೆಮಲಾರವನ್ನು ತನ್ನ ಹೆಗಲಿನಿಂದ ಹಿಂದೆಮುಂದೆ ತೂಗಿಬಿಟ್ಟ ಬಟ್ಟೆಗಂಟಿನಲ್ಲಿ ಹೊತ್ತು ಹರಿಗಲಿನಿಂದ ಈಚೆ ದಡದಲ್ಲಿ ಇಳಿದಾಗ ಬಿಸಿಲಿನ ಪ್ರಭೆಗೆ ಫಲಫಲ ಹೊಳೆಯುವ ರಂಗುರಂಗಿನ ಬಳೆಗಳು ನನ್ನೊಳಗೆ ಬತ್ತಿಹೋಗಿದ್ದ ಬಯಕೆಯನ್ನು ಮೀಟುತ್ತಿದ್ದವು. ನನ್ನ ಸನಿಹದಲ್ಲೆ ಕುಳಿತು ಬಟ್ಟಗಳಿಗೆ ಸಾಬೂನು ಹಚ್ಚಿತ್ತಿದ್ದ ನಮ್ಮ ಮನೆಯ ಹಿಂದಿನ ಸಾಲಿನಲ್ಲಿ ವಾಸಿಸುವ ನಾಗಪ್ಪನವರ ಸೊಸೆ ಲಕ್ಷ್ಮಿದೇವಿಯ ಎರಡೂ ಮುಂಗೈಗಳ ತುಂಬ ಎರಡೆರಡು ಚಿನ್ನದ ಬಳೆಗಳ ಕಣ್ಣು ಕೋರೈಸುವ ಗಾಜಿನ ಕೆಂಪು ಹಸಿರು ಬಳೆಗಳ ಮೇಲೆ ನನ್ನ ದೃಷ್ಟಿ ಹರಿದಿತ್ತು. ನನಗರಿವಿಲ್ಲದಂತೆಯೆ ಅಸೂಯೆ ಬೆರೆತ ನಿಟ್ಟುಸಿರುಬಿಟ್ಟಿದ್ದೆ. ಲಕ್ಷ್ಮೀದೇವಿಗೂ ನನ್ನಂತೆ ಗಂಡ ಜೊತೆಗಿಲ್ಲ ವ್ಯತ್ಯಾಸ ಇಷ್ಟೆ, ನನ್ನ ಪತಿ ಸತ್ತು ಸ್ವರ್ಗ ಸೇರಿದ್ದರೆ, ಅವಳ ಗಂಡ ಅವಳನ್ನು ತೊರೆದು ಬೇರೆ ಜಾತಿಯ ಗಂಡನುಳ್ಳ ಗರತಿಯೊಡನೆ ಬೊಂಬಾಯಿಗೆ ಓಡಿಹೋಗಿದ್ದಾನೆ... ಆದರೂ ಅವಳಿಗೆ ತನ್ನ ಮುಂಗೈಗಳಿಗೆ ಬಳೆ ಹಾಕಿಕೊಳ್ಳುವ ಆದಿಕಾರವುಂಟು. ನನಗೆ ಮಾತ್ರ ಎಂದು ವಿಷಣ್ಣಳಾಗಿ, ಒಗೆ ಬಟ್ಟೆಗಳನ್ನು ನೀರಿನಲ್ಲಿ ಜಾಲಿಸುತ್ತಿರುವಾಗ, ಅವಳ ಬೆನ್ನಿನ ಹಿಂದೆಪರಿಚಿತ ದನಿಯೊಂದು “ ಅಮಾರೆಅಮ್ಮಾರೆ...” ಎಂಬ ಕೂಗು ಕಿವಿಗೆ ಬಿದ್ದು ಚಕಿತಳಾದಳು. ಕುಕ್ಕರಗಾಲಿನಲ್ಲಿ ಕುಳಿತಂತೆಯೆ ಹಿಂದಿರುಗಿ ನೋಡಿದಳು... ದರುಮನಳ್ಳಿಯ ಲಕ್ಕ!ಸಂತೋಷವಾಯಿತು. ಅವನ ಪಕ್ಕದಲ್ಲೆ ಅವನನ್ನು ಎಂದೂ ಎಡೆಬಿಡದ ಅವನ ಬಾಳ ಸಂಗಾತಿ- ನಾಲಿಗೆ ಹಿರಿದು ನಗುತ್ತ ನಿಂತ, ಬೊಡ್ಡ... “ನೀನು ಯಾವಾಗ ಬಂದೆಯೊ, ಲಕ್ಕ?” ಕೇಳಿದೆ. “ಇದೇ ಬಂದೆ ಕನವ”- ಅವನು ಅಂದಾಗ, ಅವನ ಮುಖ ಅಳುಅಳು ಸುರಿಯುತ್ತಿತ್ತು. ನನಗೆ ಮತ್ತೂ ಅಚ್ಚರಿಯಾಯಿತು. ಲಕ್ಕನದು ಯಾವಾಗಲೂ ನಗು ನಗುತ್ತ ಇರುವ ಲವಲವಿಕೆಯ ಸ್ವಭಾವ. ಖುಷಿ ಹೈದ. ನಮ್ಮ ಹಳ್ಳಿಗೆ ಬರವಾಗಲೆಲ್ಲ ಮುಖದಲ್ಲಿ ಸದಾ ಸಂತೋಷವನ್ನು ತುಳುಕಿಸುತ್ತ ಬರುತ್ತಿದ್ದ. ಏನೇ ಕಷ್ಟ