________________
ಸಮಗ್ರ ಕಾದಂಬರಿಗಳು ೧೦೩ ಗೂಡುಗಳಿಗೆ ಹಿಂದಿರುಗುತ್ತಿದ್ದವು. ಅಸವಾಳದ ಈಚಲುಗುತ್ತಿ ಸಮೀಪಿಸುತ್ತಿರುವಂತೆ ಜಾನಕಿ ಭಯದಿಂದಲೋ ಏನೋ ದೊಡ್ಡದಾಗಿ ಕೆಮ್ಮಿದ್ದಳು. ಸಾವಿತ್ರಿ ಗಾಬರಿಗೊಂಡು ಕಣ್ಣು ಅಗಲಿಸಿ ತನ್ನ ಬಾಯಿಗೆ ಬೆರಳಿಟ್ಟು, ಸದ್ದು ಮಾಡಕೂಡದೆನ್ನುವಂತೆ ಸೂಚಿಸುವ 'ಶ್' ಮಾಡಿದ್ದಳು. ಪರ್ವತಕ್ಕಿಗಳು ಒಂದರ ಹಿಂದೆ ಒಂದು ಸಾಲುಗಟ್ಟಿ ಕರ್ಕಶವಾಗಿ ಸದ್ದು ಮಾಡುತ್ತ ಗಾಡಿಯ ಮುಂದುಗಡೆಯ ಎತ್ತರದಲ್ಲಿ ಸಾಗುತ್ತಿದ್ದವು. ಇದ್ದಕ್ಕಿದ್ದಂತೆ ಗಾಡಿಯ ಕೆಳಗೆ ಇಷ್ಟು ಸಮಯವೂ ಮೌನವಾಗಿ ಬರುತ್ತಿದ್ದ ಬೊಡ್ಡ ಕೆಟ್ಟದಾಗಿ ಬಗಳತೊಡಗಿತ್ತು. ಪಕ್ಕದ ಸಾಲು ಮರವೊಂದರಲ್ಲಿ ಮರಗಿಳಿಗಳು ಚಿಲಿಪಿಲಿಗುಡುತ್ತಿದ್ದಂತೆಯೆ, ತಟ್ಟನೆ ಯಾರೊ ಒಬ್ಬಾತ ಈಚಲು ಗುತ್ತಿಯಿಂದ ನೆಗೆದು ಬಂದು ಗಾಡಿಯ ಮುಂದೆ ನಿಂತು, ಗಾಡಿಯ ಮೂಕಿಯನ್ನು ಹಿಡಿದು ನಿಲ್ಲಿಸಿದ. ಮತ್ತೊಬ್ಬ ಲಕ್ಕನ ಬಲಪಾರ್ಶ್ವಕ್ಕೆ, ನಿಂತು, “ಒಂದೇಡು ಚಿಟಕಿ ನಸ್ಯಕ್ವಡಪ್ಪ...” ಎಂದ. ಅಷ್ಟರಲ್ಲಿ ಇನ್ನಿಬ್ಬರು ಕಮಾನುಗಾಡಿಯ ಹಿಂದೆ ಬಂದು ನಿಂತಿದ್ದರು. ಗಾಡಿಯಲ್ಲಿ ಕುಳಿತ ನಾವೆಲ್ಲರೂ ಭಯಭ್ರಾಂತರಾದೆವು. ಸಾವಿತ್ರಿ ಅದದ್ದಾಯಿತು, ಒಡವೆಗಳನ್ನಾದರೂ ಉಳಿಸಿಕೊಳ್ಳುವ ಎಂಬ ಚಪಲದಿಂದ ಸರಸರನೆ ಕುತ್ತಿಗೆಯಿಂದ ಎರಡು ತೊಲ ಬಂಗಾರದ ಅವಲಕ್ಕೆ ಮಾದರಿಯ ಸರವನ್ನು ತೆಗೆದು, ಕಿವಿಗಳಿಂದ ವಜ್ರ ಓಲೆಗಳನ್ನು ಕಳಚಿ, ತಾನು ಕುಳತ ಮೆತ್ತೆಯ ಕೆಳಗೆ ಬಚ್ಚಿಟ್ಟಳು. ರುಕ್ಕಿಣಿ, ಕಳ್ಳರು ಏನು ಬೇಕಾದರೂ ಕೊಂಡೊಯ್ಯಲಿ, ನಮ್ಮ ಮಾನಹಾನಿ ಮಾಡದಿದ್ದರೆ ಸಾಕು ಎಂದುಕೊಳ್ಳುತ್ತಿದ್ದಳು. ಜಾನಕಿಯ ಪ್ರತಿಕ್ರಿಯೆ ವಿಚಿತ್ರವಾದುದಾಗಿತ್ತು. ಇಬ್ಬರು ದುಷ್ಟರು ತನ್ನ ಮೈಮೇಲೆ ಬಿದ್ದು ಘಾಸಿಗೊಳಿಸಿದ ಘಟನೆಯಿಂದ ಅವಳ ಮನಸ್ಸು ಇನ್ನೂ ಮುಕ್ತವಾಗಿರಲಿಲ್ಲ. ಅದಕ್ಕಿನ್ನ ಹೆಚ್ಚಿನ ದುರಂತ ಏನು ಸಂಭವಿಸೀತು, ಎನ್ನುವ ಒಂದು ರೀತಿಯ ವಿಷಣ್ಣಭಾವದ ಛಾಯೆ ಅವಳ ವದನವನ್ನು ಆವರಿಸಿದಂತಿತ್ತು. ಆಶ್ವತ್ಥ ಗಾಯತ್ರಿ ಜಪ ಮಾಡಲು ಶುರುಹಚ್ಚಿದ... “ವಸಿ ತಡಕಪ್ಪ, ನಸ್ಯ ತಕ್ಕಟ್ಟೇನು...” ಎಂದವನೇ, ದೊಣ್ಣೆ ಹಿರಿದು, ಗಾಡಿಯ ಎಡಗೋಲು ಎತ್ತಿನ ಕಡೆಯಿಂದ ಕೆಳಕ್ಕೆ ಧುಮುಕಿ, ಲಕ್ಕ ಗಾಡಿಯ ಮುಂದೆ ಮೂಕಿ ಹಿಡಿದವನ ಮೇಲೆ ದೊಣ್ಣೆ ಬೀಸಿದ. ಹಟಾತ್ತನೆ ಎರಗಿದ ಆ ಬಿರುಸಿನ ಹೊಡೆತಕ್ಕೆ ತತ್ತರಿಸಿ ಆ ವ್ಯಕ್ತಿ ನೆಲಕ್ಕುರುಳಿದ. ತನ್ನ ಯಜಮಾನನ್ನು ಅನುಸರಿಸಿ ಗಾಡಿಯ ಕೆಳಗಿದ್ದ ಬೊಡ್ಡ, ಬಲಪಾರ್ಶ್ವದಲ್ಲಿ ನಿಂತವನ ಮೇಲೆ ನುಗ್ಗಿ ನೆಗೆದು ಅವನ ಬಲತೊಡೆಯನ್ನು ಕಚ್ಚಿದಾಗ ಆತನೂ ನೆಲಕ್ಕೆ ಕುಸಿದು ತನ್ನ ಕೈಯಲ್ಲಿದ್ದ ದೊಣ್ಣೆಯನ್ನು ನಾಯಿಯತ್ತ ಬೀಸುತ್ತಿದ್ದ. ಆದರೆ ಅತ್ತ ಇತ್ತ