________________
೨೪d ಭಾರತ ದರ್ಶನ ಭಾರತದ ರಾಜಕೀಯ ಮತ್ತು ಆರ್ಥಿಕ ಬಲವು ಬಹುವೇಗದಿಂದ ಕ್ಷೀಣಿಸುತ್ತಿದ್ದಾಗ ಯಾರೋಪಿನ ಶಕ್ತಿಯ ಉಬ್ಬರವು ಭಾರತಕ್ಕೂ ಮತ್ತು ಪೌರ್ವಾತ್ಯಕ್ಷ ಹರಡುತ್ತಲಿತ್ತು. * ಫ್ರಾನ್ಸಿನಲ್ಲಿ ಹದಿನಾಲ್ಕನೆ ಲೂಯಿ ಕ್ರಾಂತಿಯ ಬೀಜಗಳನ್ನು ಹರಡುತ್ತಾ ತನ್ನ ದೀರ್ಘಕಾಲದ ಆಳ್ವಿಕೆಯ ನಡೆಸುತ್ತಿದ್ದನು. ಇಂಗ್ಲೆಂಡಿನಲ್ಲಿ ಮಧ್ಯಮವರ್ಗದ ದಂಗೆಕಾರರು ತಮ್ಮ ದೊರೆಯ ತಲೆ ಯನ್ನು ಕತ್ತರಿಸಿ ಹಾಕಿದ್ದರು. ಕ್ರಾಮ್ವೆಲ್ ನ ಅಲ್ಪಾಯುಸ್ಸಿನ ಪ್ರಜಾಧಿಪತ್ಯವು ಯಶಸ್ವಿಯಾಗಿತ್ತು. ಚಾರ್ ಸನ ಆಗಮನವಾಗಿ ನಿರ್ಗಮನವೂ ಆಗಿತ್ತು. ಎರಡನೆಯ ಜೇಮ್ಸ್ ಕಾಲಿಗೆ ಬುದ್ದಿ ಹೇಳಿ ದ್ದನು. ಬಹುಮಟ್ಟಿಗೆ ವರ್ತಕರ ಪ್ರತಿನಿಧಿಯಾದ ಪಾರ್ಲಿಮೆಂಟ್ ರಾಜನ ಅಧಿಕಾರವನ್ನು ಮೊಟಕು ಮಾಡಿ ತನ್ನ ಪರಮಾಧಿಕಾರವನ್ನು ಸ್ಥಾಪಿಸಿತ್ತು. ಅವರಂಗಜೇಬನು ತನ್ನ ತಂದೆಯಾದ ಷಹಜಾನನನ್ನು ಬಂಧಿಸಿ ಎದ್ದ ದಂಗೆಯನ್ನು ಅಡಗಿಸಿ ಮೊಗಲ್ ಸಿಂಹಾಸನವನ್ನು ಏರಿದ್ದು ಇದೇ ಕಾಲದಲ್ಲಿ. ಪರಿಸ್ಥಿತಿಯನ್ನು ಅರಿತುಕೊಂಡು ಉದೂತವಾದ ಹೊಸ ಶಕ್ತಿಗಳನ್ನು ಅಡಗಿಸಲು ಅಕೃರನಂಥವನಿಗೆ ಮಾತ್ರ ಸಾಧ್ಯವಿತ್ತು, ಅವನ ಜ್ಞಾನ ಕುತೂಹಲ ಮತ್ತು ದಾಹದಿಂದ ಅಂದು ಸನ್ನಿಹಿತವಾಗಿದ್ದ ಹೊಸ ಮಾರ್ಗ ಗಳ ಪ್ರಾಮುಖ್ಯತೆಯನ್ನೂ ಆರ್ಥಿಕ ಸ್ಥಿತಿಯಲ್ಲಿ ಆಗುತ್ತಿದ್ದ ಬದಲಾವಣೆಯನ್ನೂ ಅರಿತುಕೊಳ್ಳಲು ಸಮರ್ಥನಾಗಿದ್ದರೆ ಪ್ರಾಯಶಃ ಅವನಿಗೂ ತನ್ನ ಚಕ್ರಾಧಿಪತ್ಯದ ನಾಶವನ್ನು ಸ್ವಲ್ಪ ಮುಂದೆ ಮಾತ್ರ ತಳ್ಳ ಬಹುದಾಗಿತ್ತು. ಅಂದಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಹಾಗಿರಲಿ, ತನ್ನ ಪೂರ್ವಿ ಕರ ಕಾರ್ಯನೀತಿಯನ್ನೂ ಅರಿಯದಾದನು. ಅವನೊಬ್ಬ ಪ್ರತಿಗಾಮಿ, ಎಷ್ಟೇ ಶಕ್ತನೂ ಆಸಕ್ತನೂ ಇದ್ದರೂ ತನ್ನ ಪೂರ್ವಿಕರು ಸಾಧಿಸಿದುದನ್ನೆಲ್ಲ ನಾಶಮಾಡಲುದ್ಯುಕ್ತನಾದನು. ಮತಾಂಧನು ನಿಷ್ಠ ಜೀವಿಯೂ ಆದ್ದರಿಂದ ಕಲೆ ಅಥವ ಸಾಹಿತ್ಯದ ಮೇಲೆ ಮಮತೆ ಇರಲಿಲ್ಲ. ಹಿಂದೂಗಳ ಮೇಲೆ ಅಸಹ ನೀಯವಾದ ತಲೆಗಂದಾಯವನ್ನು ಹಾಕಿ, ಅವರ ದೇವಸ್ಥಾನಗಳನ್ನು ನಾಶಮಾಡಿ ಅವರ ದ್ವೇಷ ವನ್ನು ಕಟ್ಟಿ ಕೊಂಡನು. ಮೊಗಲ್ ಚಕ್ರಾಧಿಪತ್ಯದ ಆಧಾರ ಸ್ತಂಭಗಳಂತಿದ್ದ ವೀರರಾಜಪುತ್ರರನ್ನು ಕೆಣಕಿ ಅವರ ವೈರವನ್ನು ಕಟ್ಟಿ ಕೊಂಡನು. ಹಿಂದೂ ಮುಸಲ್ಮಾನ್ ಭಾವನೆಗಳಲ್ಲಿ ಒಂದು ಐಕ್ಯತೆ ಯನ್ನು ತಂದ ಶಾಂತ ಜೀವಿಗಳಾದ ಸಿಕ್ಕರನ್ನು ತುಳಿಯಹೋಗಿ ಅವರು ಸೈನ್ಯವನ್ನೇ ಕುಟ್ಟವಂತೆ ಪ್ರೇರೇಪಿಸಿದನು. ಒಬ್ಬ ಶ್ರೇಷ್ಠ ಸೇನಾನಿಯನ್ನು ಪಡೆದಿದ್ದ ರಾಷ್ಟ್ರ ಕೂಟವಂಶಜರೂ ಉತ್ತಮ ಯೋಧರೂ ಆದ ಮಹಾರಾಷ್ಟ್ರರನ್ನು ಪಶ್ಚಿಮದಲ್ಲಿ ರೊಚ್ಚಿಗೆಬ್ಬಿಸಿದನು. ವಿಶಾಲವಾಗಿ ಹರಡಿದ್ದ ಮೊಗಲ್ ಚಕ್ರಾಧಿಪತ್ಯದಲ್ಲೆಲ್ಲ ಈ ರೀತಿ ಒಂದು ತಳಮಳವೆದ್ದು ಧರ್ಮ ಶ್ರದ್ಧೆ ಮತ್ತು ರಾಷ್ಟ್ರೀಯ ಭಾವನೆಗಳ ಪರಿಣಾಮವಾಗಿ ಒಂದು ಪುನರುಜ್ಜಿವನ ಭಾವನೆ ಬೆಳೆ ಯಿತು. ರಾಷ್ಟ್ರೀಯ ಭಾವನೆಯು ಈಗಿನಂತೆ ಮತರಹಿತವಾಗಿ ಇರಲಿಲ್ಲ. ಅದರ ವ್ಯಾಪ್ತಿಯ ದೇಶಾದ್ಯಂತವಿರಲಿಲ್ಲ. ಅದರಲ್ಲಿ ಶ್ರೀಮಂತರ ಕೈವಾಡವಿತ್ತು. ಸ್ಥಳೀಯ ಭಾವನೆ ಇತ್ತು ಮತ ಶ್ರದ್ದೆ ಇತ್ತು. ಎಲ್ಲರಿಗಿಂತ ಹೆಚ್ಚು ಅಧಿಕಾರ ಲಾಲಸೆ ಇದ್ದ ರಾಜಪುತ್ರರು ತಮ್ಮ ವಂಶದ ಪ್ರಾಶ ಸ್ತ್ರಕ್ಕೆ ಮಹತ್ವ ಕೊಟ್ಟರು ; ಪಂಜಾಬಿನ ಒಂದು ಪಂಗಡವಾದ ಸಿಕ್ಕರಿಗೆ ತಮ್ಮ ರಕ್ಷಣೆಯನ್ನು ತಾವು ನೋಡಿಕೊಳ್ಳುವುದರ ವಿನಾ ಪಂಜಾಬಿನ ಹೊರಗೆ ಅವರ ದೃಷ್ಟಿಯು ಹೋಗಲಿಲ್ಲ. ಆದರೂ ಆ ಧರ ದಲ್ಲಿ ಒಂದು ಬಲವಾದ ರಾಷ್ಟ್ರೀಯ ಹಿನ್ನೆಲೆ ಇತ್ತು, ಅದರ ಸಂಪ್ರದಾಯವೆಲ್ಲ ಭಾರತೀಯವಾಗಿತ್ತು. * ಇಂಡೋಯೂರೊಪಿಯನ್ ಸಮುದಾಯದಲ್ಲಿ ಒಂದು ರಾಷ್ಟ್ರೀಯ ಮತವಾದ ಬ್ರಾಹ್ಮಣ ಮತ ವನ್ನು, ಒಂದು ದೊಡ್ಡ ವಿಶ್ವಧರ್ಮವಾದ ಬುದ್ಧ ಮತವನ್ನು ಸೃಷ್ಟಿಸಿದವರು ಭಾರತೀಯರು ಮಾತ್ರ, ಉಳಿದವರೆಲ್ಲ ನವೀನತೆಯನ್ನು ವ್ಯಕ್ತಗೊಳಿಸುವ ಬದಲು ಪರಕೀಯ ಧರ್ಮವನ್ನು ಅವಲಂಬಿಸಿದ 'ವರು ” ಎಂದು ಪ್ರೊಫೆಸರ್ ಮ್ಯಾಕ್ರೋನಲ್ ಹೇಳುತ್ತಾನೆ. ಧರ್ಮ ಮತ್ತು ರಾಷ್ಟ್ರೀಯ ಭಾವನೆಯ ಸಂಯೋಜನೆಯು ಎರಡರಿಂದಲೂ ಪರಸ್ಪರ ಶಕ್ತಿಯನ್ನೂ ಸಮನ್ವಯನ್ನೂ ಪಡೆದವು. ಆದರೂ ಆದರ ದೌರ್ಬಲ್ಯವೂ, ಅಪೂರ್ಣತೆಯೂ ಅದರಲ್ಲಿಯೇ ಅಡಗಿದ್ದವು. ಏಕಂದರೆ ಧರ್ಮದ ಎಲ್ಲ ಕಟ್ಟಿನ