ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ
೨೯೫

ನೌಕರಿ ಕೊಡುವ ಸಂಸ್ಥೆಯಾಯಿತು. ಅಲ್ಲದೆ ರೈಲ್ವೆ ಇಲಾಖೆಯನ್ನೂ ಸೇರಿಸಿದರೆ ಏಕಮಾತ್ರ ದೊಡ್ಡ ಸಂಸ್ಥೆಯಾಯಿತು. ಈ ಅಧಿಕಾರವರ್ಗ ಒಂದು ದೊಡ್ಡ ಯಂತ್ರವಾಯಿತು. ಯಂತ್ರದ ಸೂತ್ರಗಳೆಲ್ಲ ಮೇಲಧಿಕಾರಿಗಳ ಕೈಯಲ್ಲಿದ್ದು ಬಿಗಿಯಿಂದ ನಡೆಸಲ್ಪಡುತ್ತಿತ್ತು. ಅಧಿಕಾರ ಹಂಚಲು ಇದ್ದ ದೊಡ್ಡ ಅವಕಾಶವನ್ನು ದೇಶದಲ್ಲಿ ಬ್ರಿಟಿಷರ ಅಧಿಕಾರವನ್ನು ಭದ್ರಗೊಳಿಸುವುದಕ್ಕೂ, ಅಸಮಾಧಾನ ಗೊಂಡ ವಿರೋಧಿಗಳನ್ನು ತುಳಿಯುವುದಕ್ಕೂ, ಸರಕಾರದ ನೌಕರಿಯಲ್ಲಿ ಸೇರಿಕೊಳ್ಳಲು ಕಾತುರರಾಗಿದ್ದ ಬೇರೆ ಬೇರೆ ಪಂಗಡಗಳಲ್ಲಿ ಪೈಪೋಟಿಯನ್ನೂ, ವೈಷಮ್ಯವನ್ನೂ ಹೆಚ್ಚಿಸುವುದಕ್ಕೂ ದುರುಪಯೋಗಮಾಡಿದರು. ಅನೀತಿಯ ಪರಸ್ಪರ ವಿರೋಧವೂ ಹುಟ್ಟಿತು. ಇದರಿಂದ ಒಂದು ಪಂಗಡವನ್ನು ಇನ್ನೊಂದು ಪಂಗಡದಮೇಲೆ ಎತ್ತಿಕಟ್ಟಲು ಸರಕಾರಕ್ಕೆ ಅವಕಾಶ ದೊರೆಯಿತು.

ಈ ಪರಸ್ಪರ ವಿರೋಧವನ್ನು ಸಮತೂಕದಲ್ಲಿಡುವ ನೀತಿಯನ್ನು ಉದ್ದೇಶಪಟ್ಟು, ಭಾರತೀಯ ಸೈನ್ಯದಲ್ಲಿ ಆಚರಣೆಗೆ ತಂದರು. ರಾಷ್ಟ್ರೀಯ ಐಕಮತ್ಯದ ಭಾವನೆಯು ಅವರಲ್ಲಿ ಬೆಳೆಯದಂತೆ ಬೇರೆ ಬೇರೆ ಪಂಗಡಗಳನ್ನೇ ಪ್ರತ್ಯೇಕ ಪ್ರತ್ಯೇಕ ಇಟ್ಟರು, ಪಂಗಡ ಮತ್ತು ಜಾತಿಯ ಅಭಿಮಾನಕ್ಕೆ ಪ್ರೋತ್ಸಾಹ ದೊರೆಯಿತು. ಸಾಮಾನ್ಯ ಜನರೊಡನೆ ಯಾವ ಸಂಪರ್ಕವೂ ಇರದಂತೆ ಸೈನಿಕರನ್ನು ದೂರವಿಟ್ಟರು. ಭಾರತೀಯ ಸೈನಿಕರಿಗೆ ಯಾವ ವರ್ತಮಾನ ಪತ್ರವನ್ನೂ ಕೊಡುತ್ತಿರಲಿಲ್ಲ, ಮುಖ್ಯ ಅಧಿಕಾರ ಸ್ಥಾನಗಳೆಲ್ಲ ಇಂಗ್ಲಿಷರಿಗೆ ಮೀಸಲು, ಯಾವ ಭಾರತೀಯನೂ ಬ್ರಿಟಿಷ್ ದೊರೆಯಿಂದ ಸೈನ್ಯಾಧಿಕಾರ ಪಡೆಯುವಂತೆ ಇರಲಿಲ್ಲ. ಭಾರತೀಯ ನಾನ್-ಕಮಿಷನ್ ಅಥವ ವೈಶ ರಾಮ್ ಕಮಿಷನ್ ಪಡೆದ ಅಧಿಕಾರಿ ಎಷ್ಟೇ ವಯಸ್ಸಾಗಿ ಅನುಭವ ಪಡೆದಿದ್ದರೂ ಅವನಿಗಿಂತ ಒಬ್ಬ ಮೀಸೆಬಾರದ ಇಂಗ್ಲಿಷ್ ಸಬಾಲ್ಟರ್ ಗೆ ಉನ್ನತ ಸ್ಥಾನ, ಲೆಖತನಿಖೆ ಇಲಾಖೆಯಲ್ಲಿ ಗುಮಾಸ್ತ್ರರಾಗಿ ವಿನಾ ಭಾರತೀಯನಾರೂ ಸೈನ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಅಧಿಕಾರ ಪಡೆಯು ವಂತಿರಲಿಲ್ಲ. ವಿಶೇಷ ರಕ್ಷಣೆಯ ಉತ್ತಮ ಯುದ್ದ ಶಸ್ತ್ರಾಸ್ತ್ರಗಳನ್ನು ಉಪಯೋಗಿಸಲು ಭಾರತೀಯ ರಿಗೆ ಅವಕಾಶವಿರಲಿಲ್ಲ. ಅದೆಲ್ಲ ಭಾರತದಲ್ಲಿ ಬ್ರಿಟಿಷ್ ಸೈನಿಕರಿಗೇ ಮಾಸಲು, ಭಾರತದ ಮುಖ್ಯ ಮುಖ್ಯ ಕೇಂದ್ರಗಳಲ್ಲಿ ಗಲಭೆ ಅಡಗಿಸಿ ಜನರನ್ನು ಹೆದರಿಕೆಯಲ್ಲಿಟ್ಟಿರಲು ಒಳಾಡಳಿತ ಭದ್ರತೆಗೆಂದು ಭಾರತೀಯ ಸೈನಿಕರ ಜೊತೆಯಲ್ಲೇ ಬ್ರಿಟಿಷ್ ಸೈನಿಕ ಪಡೆಗಳನ್ನು ಇಡುತ್ತಿದ್ದರು. ಬ್ರಿಟಿಷ್ ಅಧಿ ಕಾರಿಗಳೇ ಹೆಚ್ಚು ಇದ್ದ ಈ ಒಳಾಡಳಿತ ಸುರಕ್ಷತೆಯ ಸೈನ್ಯವು ಭಾರತದ ಆಕ್ರಮಣ ಸೈನ್ಯವಾಯಿತು. ಭಾರತೀಯರೇ ಹೆಚ್ಚು ಇದ್ದ ಸೈನ್ಯದ ಬಹುಭಾಗವು ದೇಶದ ಹೊರಗೆ ಯುದ್ಧ ಮಾಡುವ ಸೈನ್ಯವಾಯಿತು. ಭಾರತೀಯರನ್ನು ಸೈನ್ಯಕ್ಕೆ ಸೇರಿಸಿಕೊಳ್ಳುವಾಗ ಉತ್ತರಹಿಂದೂಸ್ಥಾನದ ಯೋಧ ಜಾತಿ ಎಂಬ ಕೆಲವು ಪಂಗಡದವರಿಂದ ಮಾತ್ರ ಆರಿಸುತ್ತಿದ್ದರು.

ಭಾರತದಲ್ಲಿ ಬ್ರಿಟಿಷರ ಆಡಳಿತದಲ್ಲಿ ಇನ್ನೊಂದು ವಿರೋಧಾಭಾಸ ಎದ್ದು ಕಾಣುತ್ತದೆ. ದೇಶದಲ್ಲಿ ರಾಜಕೀಯ ಐಕಮತ್ಯವನ್ನು ತಂದು ಆ ಐಕಮತ್ಯದ ದೃಷ್ಟಿಯಿಂದ ಯೋಚಿಸಿ ದೇಶದ ಸ್ವಾತಂತ್ರ್ಯವನ್ನೇ ಗುರಿಯಾಗುಳ್ಳ ನವಚೈತನ್ಯ ಶಕ್ತಿಗಳ ಬೆಳವಣಿಗೆಗೆ ಅವಕಾಶಕೊಟ್ಟ ಬ್ರಿಟಿಷ್ ಸರಕಾರವೇ ಆ ಐಕಮತ್ಯವನ್ನು ಛಿದ್ರಗೊಳಿಸಲು ಯತ್ನ ಮಾಡಿತು. ರಾಜಕೀಯ ದೃಷ್ಟಿಯಿಂದ ಭಾರತವನ್ನು ವಿಭಾಗಮಾಡಬೇಕೆಂದು ಈ ಭೇದನೀತಿಯು ರೂಪುಗೊಳ್ಳಲಿಲ್ಲ. ಅದರ ಮುಖ್ಯ ಉದ್ದೇಶವು ರಾಷ್ಟ್ರೀಯ ಶಕ್ತಿಗಳನ್ನು ನಿಕ್ಷೇತನಗೊಳಿಸಿ ದೇಶಾದ್ಯಂತ ಬ್ರಿಟಿಷ್ ಆಡಳಿತವನ್ನು ಶಾಶ್ವತಗೊಳಿಸಬೇಕೆಂದೇ ಆಗಿತ್ತು. ಆದರೂ ಮೊದಲಿಗಿಂತ ದೇಶಿಯ ಸಂಸ್ಥಾನಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಟ್ಟಿದ್ದು, ಪ್ರಗತಿ ವಿರೋಧಿಗಳಿಗೆ ಪ್ರೋತ್ಸಾಹಕೊಟ್ಟು ಅವರ ಬೆಂಬಲ ಬಯಸಿದ್ದು, ಪಂಗಡ ಪಂಗಡಗಳಾಗಿ ವಿಭಾಗಮಾಡಿ ಪರಸ್ಪರ ವೈಷಮ್ಮ ಬೆಳೆಯಲು ಪ್ರೋತ್ಸಾಹಿಸಿದ್ದು, ಜಾತಿ ಮತ್ತು ಪ್ರಾಂತ್ಯಗಳ ಹೆಸರಿನಲ್ಲಿ ಜನತೆಯಲ್ಲಿ ಒಡಕು ಎಬ್ಬಿಸಿ ಉತ್ತೇಜನ ಕೊಟ್ಟಿದ್ದು, ಎಲ್ಲಿ ಏನು ಬದಲಾವಣೆಯಾದರೆ ತಮ್ಮ ಅಸ್ತಿತ್ವಕ್ಕೆ ಹಾನಿಯಾಗುತ್ತದೋ ಎನ್ನುವ ಹಿಂಬಾಲಕರ ಗುಂಪುಗಳನ್ನು ಕಟ್ಟಿ ಪ್ರೋತ್ಸಾಹಿಸಿದ್ದು ದೇಶದ ವಿಚ್ಛೇದನ ಪ್ರಯತ್ನಗಳೇ ಆದವು ಭಾರತೀಯರ