ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹೊಸ ಸಮಸ್ಯೆಗಳು ೫d ಔದ್ಯೋಗಿಕ ಕ್ರಾಂತಿಗೆ ಮುಂಚೆ ಭಾರತವು ಕೈಗಾರಿಕೆ, ವ್ಯಾಪಾರ, ಐಶ್ವರದಲ್ಲಿ ಪ್ರಪಂಚದ ಇತರ ಯಾವ ದೇಶಕ್ಕೂ ಕಡಮೆ ಇರಲಿಲ್ಲ, ಬಹುಕಾಲದಿಂದ ಭದ್ರವೂ, ಶಾಂತಿಯುತವೂ ಆದ ರಾಜ್ಯಾಡ ಳಿತವೂ ಮತ್ತು ವ್ಯಾಪಾರ ಮತ್ತು ಪ್ರಯಾಣಗಳಿಗೆ ಸುರಕ್ಷಿತವಾದ ಮಾರ್ಗಾನುಕೂಲವೂ ಇರದಿದ್ದರೆ ಈ ಬಗೆಯ ಪ್ರಗತಿಯು ಎಂದಿಗೂ ಸಾಧ್ಯವಿರುತ್ತಿರಲಿಲ್ಲ. ಭಾರತವು ತಯಾರಿಸುತ್ತಿದ್ದ ನಯವಸ್ತುಗಳ ಶ್ರೇಷ್ಠತೆಯಿಂದ ಅವುಗಳಿಗೆ ಯೂರೋಪಿನಲ್ಲಿ ಒಳ್ಳೆಯ ಗಿರಾಕಿ ಇತ್ತು. ಆದುದರಿಂದ ವಿದೇಶೀವರ್ತಕರು ಭಾರತಕ್ಕೆ ವ್ಯಾಪಾರಕ್ಕಾಗಿ ಬರುವ ಸಾಹಸಮಾಡಿದರು. ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಯ ಆರಂಭದ ದಿನಗಳಲ್ಲಿ ಯೂರೋಪಿಗೆ ಭಾರತೀಯ ವಸ್ತುಗಳನ್ನೊಯ್ದು ಮಾರುವುದೇ ಅವರ ಮುಖ್ಯ ಕೆಲಸವಾಗಿತ್ತು. ವ್ಯಾಪಾರವೂ ತುಂಬ ಲಾಭದಾಯಕವಿತ್ತು. ಭಾರತದಲ್ಲಿ ವಸ್ತು ನಿರ್ಮಾಣ ವ್ಯವಸ್ಥೆ ಯು ಬಹಳ ದಕ್ಷತೆಯಿಂದಲೂ ಉತ್ತಮ ರೀತಿಯಲ್ಲಿ ಕೆಲಸಮಾಡುತ್ತಿತ್ತು. ಭಾರತೀಯ ಕುಶಲಕರ್ಮಿಗಳ ಮತ್ತು ಉದ್ಯಮಿಗಳ ನೈಪುಣ್ಯವು ಇಂಗ್ಲೆಂಡಿನಲ್ಲಿ ಸ್ಥಾಪನೆಯಾಗುತ್ತಿದ್ದ ಯಂತ್ರೋಪಕರಣಗಳ ಉತ್ತಮ ವಸ್ತು ನಿರ್ಮಾಣ ಶಕ್ತಿಯೊಡನೆ ಯಶಸ್ವಿಯಾಗಿ ಪೈಪೋಟಿ ನಡೆಸುವಷ್ಟು ಉನ್ನತವಿತ್ತು. ಇಂಗ್ಲೆಂಡಿನಲ್ಲಿ ಮಹಾಯಂತ್ರ ಯುಗವು ಆರಂಭವಾಗಿದ್ದರೂ ಭಾರತೀಯ ವಸ್ತುಗಳು ರಾಶಿರಾಶಿಯಾಗಿ ಬಂದು ಬೀಳುತ್ತಿದ್ದವು. ವಿಶೇಷ ತೆರಿಗೆಯನ್ನು ಹಾಕಿ, ಇನ್ನು ಕೆಲವುವೇಳೆ ದೇಶದೊಳಗೆ ಪ್ರವೇಶಿಸದಂತೆ ನಿಷೇಧಮಾಡಿ ತಡೆ ಗಟ್ಟಬೇಕಾಯಿತು,

  • ಪ್ಲಾಸಿ ಕದನವಾದ ೧೭೫೭ರಲ್ಲಿ ಕೈವನು ಬಂಗಾಳದ ಮುರ್ಷಿದಾಬಾದ್ ನಗರವನ್ನು “ ಲಂಡನ್ ನಗರದಷ್ಟೆ ವಿಶಾಲವೂ, ಜನಸಾಂದ್ರತೆಯುಳ್ಳದ್ದೂ, ಸಂಪದ್ಯುಕ್ತವೂ ಆದ ನಗರ. ಆದರೆ ಒಂದು ವ್ಯತ್ಯಾಸವೆಂದರೆ ಮುರ್ಷಿದಾಬಾದಿನಲ್ಲಿ ಲಂಡನ್ ನಗರದಲ್ಲಿರುವುದಕ್ಕಿಂತ ಅತುಲೈಶ್ವರ್ಯ ಉಳ್ಳ ವ್ಯಕ್ತಿಗಳನೇಕರಿದ್ದಾರೆ.” ಎಂದು ಹೇಳಿದ್ದಾನೆ, ಪೂರ್ವ ಬಂಗಾಲದ ಢಾಕಾ ನಯವಾದ ಹತ್ತಿ ಬಟ್ಟೆಗೆ ಪ್ರಸಿದ್ಧವಾಗಿತ್ತು. ಈ ಎರಡು ನಗರಗಳೂ ಮುಖ್ಯ ನಗರಗಳಾದರೂ ಹಿಂದೂಸ್ಥಾನದ ಹೊರ ಅಂಚಿ ನಲ್ಲಿದ್ದವು. ವಿಶಾಲ ಭಾರತದ ಒಳಗಡೆ ಮಹಾನಗರಗಳೂ, ದೊಡ್ಡ ಕೈಗಾರಿಕಾ ಕೇಂದ್ರಗಳೂ, ವ್ಯಾಪಾರಸ್ಥಳಗಳೂ ಅನೇಕ ಇದ್ದು ವು. ಪೇಟೆಯ ಧಾರಣೆಗಳ ವರ್ತಮಾನವನ್ನೂ ಬೇಗ ಕಳುಹಿಸಲು ಒಂದು ಆಶ್ಚರ್ಯಕರವಾದ ವಾರ್ತಾಪದ್ದತಿ ಏರ್ಪಟ್ಟಿತ್ತು. ಈಸ್ಟ್ ಇಂಡಿಯ ಕಂಪನಿಯ ಅಧಿಕಾರಿ ಗಳಿಗೆ ಗೊತ್ತಾಗುವ ಮುಂಚೆಯೇ ಆಗ ನಡೆಯುತ್ತಿದ್ದ ಯುದ್ಧ ವರ್ತಮಾನವು ವಾಣಿಜ್ಯ ಸಂಸ್ಥೆಗಳಿಗೆ ದೊಡ್ಡ ದೊಡ್ಡ ವರ್ತಕರಿಗೆ ತಿಳಿಯುತ್ತಿತ್ತು. ಈ ರೀತಿ ಭಾರತದ ಆರ್ಥಿಕ ಉನ್ನತಿಯು ಔದ್ಯೋ ಗಿಕ ಕ್ರಾಂತಿಯ ಮೊದಲು ಎಷ್ಟರಮಟ್ಟಿಗೆ ಮುಂದುವರಿಯಬಹುದಾಗಿತ್ತೋ ಅಷ್ಟೂ ಮುಂದುವರಿ ದಿತ್ತು. ಅದರಲ್ಲಿ ಮುಂದಿನ ಪ್ರಗತಿಯ ಬೀಜವು ಇತ್ತೋ, ಅಥವ ಸುತ್ತಲಿನ ಸಮಾಜರಚನೆಯ ಬಂಧನದಲ್ಲಿಯೇ ಸಿಲುಕಿತ್ತೊ ಹೇಳುವುದು ಕಷ್ಟ. ಆದರೆ ಸಾಮಾನ್ಯ ಪರಿಸ್ಥಿತಿಯಲ್ಲಿ ವ್ಯತ್ಯಾಸ ಹೊಂದಿ ನೂತನ ಔದ್ಯೋಗಿಕ ಸನ್ನಿವೇಶಗಳಿಗೆ ಹೊಂದಿಕೊಳ್ಳುವ ಶಕ್ತಿಯು ಮಾತ್ರ ಇತ್ತೆಂದು ಧೈರ್ಯವಾಗಿ ಹೇಳಬಹುದು, ವ್ಯತ್ಯಾಸ ಹೊಂದಲು ಜೀರ್ಣವಾಗಿ ಸಿದ್ಧವಿದ್ದರೂ ಆ ವ್ಯತ್ಯಾಸವಾ ಗಲು ತನ್ನೊಳಗೇ ಒಂದು ಕ್ರಾಂತಿಯೇ ಆಗುವುದು ಅವಶ್ಯವಿತ್ತು. ಪ್ರಾಯಶಃ ಆ ವ್ಯತ್ಯಾಸವ ನ್ನುಂಟುಮಾಡಲು ಯಾವುದಾದರೊಂದು ಪ್ರಚೋದಕ ವಸ್ತು ಬೇಕಾಗಿತ್ತೋ ಏನೋ, ಔದ್ಯೋಗಿಕ ಕ್ರಾ೦ತಿಯುಗದ ಮುಂಚೆ ಭಾರತದ ಆರ್ಥಿಕ ಉನ್ನತಿಯು ಎಷ್ಟೇ ಉತ್ತಮ ವ್ಯವಸ್ಥೆ ಯಿಂದ ಮುಂದು ವರಿದಿದ್ದರೂ ಯ೦ತ್ರೀಕರಣವಾದ ದೇಶಗಳ ವಸ್ತು ನಿರ್ಮಾಣ ಶಕ್ತಿಯೊಡನೆ ಬಹುಕಾಲ ಪೈಪೋಟ ನಡೆಸುವುದು ಸಾಧ್ಯವಿರಲಿಲ್ಲ. ತಾನೇ ಯಂತ್ರೀಕರಣವಾಗಬೇಕಾಗಿತ್ತು ; ಅಥವ ವಿದೇಶೀಯರ ಆರ್ಥಿಕ ಬಂಧನದೊಳಗೆ ಸಿಕ್ಕು ರಾಜಕೀಯ ಪ್ರವೇಶಕ್ಕೆ ಅವಕಾಶವಾಗಬೇಕಾಗಿತ್ತು. ಆದರೆ ವಿದೇಶೀ ಯರ ರಾಜಕೀಯ ಪ್ರವೇಶವೇ ಮೊದಲು ಬಂದಿತು. ಇದರಿಂದ ಭಾರತದ ಆರ್ಥಿಕ ರಚನೆಯು ಕುಸಿದು ಬಿತ್ತು, ಅದರ ಸ್ಥಾನದಲ್ಲಿ ಯಾವ ದೃಢವಾದ ರಚನಾತ್ಮಕ ವ್ಯವಸ್ಥೆಯೂ ಬರಲಿಲ್ಲ. ಈಸ್ಟ್