ಸಮಿತಿಯನ್ನೂ ಏರ್ಪಡಿಸಿದನು. ಗ್ರೀಕ್, ಸಿರಿಯಾಕ್, ಜೆಂದ್, ಲ್ಯಾಟಿನ್ ಮತ್ತು ಸಂಸ್ಕೃತ ಭಾಷೆಗಳಿಂದ ಗ್ರಂಥಗಳನ್ನು ಭಾಷಾಂತರಿಸುತ್ತಿದ್ದರು, ಸಿರಿಯಾ, ಏಷ್ಯ ಮೈನರ್ ಮತ್ತು ಲೆವಾಂಟಿನ ಹಳೆಯ ಮಠಗಳನ್ನೆಲ್ಲ ಹಸ್ತ ಪ್ರತಿಗಳಿಗಾಗಿ ಶೋಧನೆಮಾಡಿದರು. ಕ್ರೈಸ್ತ ಗುರುಗಳು ಹಳೆಯ ಅಲೆಕ್ಸಾಂಡ್ರಿಯ ಶಾಲೆಗಳನ್ನು ಮುಚ್ಚಿದ್ದರು. ಅವುಗಳ ಅಧ್ಯಾಪಕರು ಕೆಲಸವಿಲ್ಲದೆ ನಿರಾಶ್ರಿತರಾಗಿ ದ್ದರು. ಈ ನಿರಾಶ್ರಿತರ ಅನೇಕರು ಪರ್ಷಿಯ ಮತ್ತು ಇತರ ಕಡೆಗಳಿಗೆ ಹೊರಟುಹೋಗಿದ್ದರು. ಅವರಿಗೆಲ್ಲ ಬಾಗ್ದಾದಿನಲ್ಲಿ ಸ್ವಾಗತವೂ ಆಶ್ರಯವೂ ದೊರೆಯಿತು. ಅವರೊಂದಿಗೆ ಗ್ರೀಕರ ತತ್ವಶಾಸ್ತ್ರ, ವಿಜ್ಞಾನ, ಗಣಿತ ಶಾಸ್ತ್ರಗಳು ಬಂದವು.-ಪ್ಲೇಟೊ, ಅರಿಸ್ಟಾಟಲ್, ತೋಲೆಮಿ ಮತ್ತು ಯೂಕ್ಲಿಡ್ ಪರಿಚಯವಾಯಿತು. ನೆಸ್ಟೋರಿಯನ್ ಮತ್ತು ಯಹೂದಿ ವಿದ್ವಾಂಸರಿದ್ದರು. ಭಾರತೀಯ ವೈದ್ಯರು, ದಾರ್ಶನಿಕರು, ಗಣಿತಶಾಸ್ತ್ರಜ್ಞರು ಇದ್ದರು. ಎಂಟು ಮತ್ತು ಒಂಭತ್ತನೆಯ ಶತಮಾನಗಳಲ್ಲಿ ಹರೂನ್ ಅಲ್ ರಷೀದ್, ಅಲ್ ಮಾಮೂನ್ ಖಲೀಫರ ರಾಜ್ಯಭಾರದಲ್ಲಿ ಇವೆಲ್ಲ ಮುಂದುವರಿದವು. ಬಾಗ್ದಾದ್ ನಗರವು ನಾಗರಿಕ ಪ್ರಪಂಚದ ಉನ್ನತ ಸಂಸ್ಕೃತಿಗೆ ಮಹಾಕೇಂದ್ರವಾಯಿತು.
ಈ ಕಾಲದಲ್ಲಿ ಭಾರತದೊಂದಿನ ಸಂಬಂಧಗಳು ಅನೇಕ ಇದ್ದವು. ಅರಬ್ಬಿ ಜನರು ಭಾರತೀಯ ಗಣಿತಶಾಸ್ತ್ರ, ಖಗೋಳಶಾಸ್ತ್ರ, ವೈದ್ಯಶಾಸ್ತ್ರಗಳಿಂದ ಬಹಳ ಜ್ಞಾನ ಸಂಪಾದನೆಮಾಡಿದರು. ಆದರೂ ಈ ಸಂಬಂಧಗಳಿಗೆಲ್ಲ ಮುಖ್ಯ ಕಾರಣರಾದವರು ಅರಬ್ಬಿ ಜನರು. ಭಾರತದಿಂದ ಅರಬ್ಬಿ ಜನರು ಬಹಳ ಜ್ಞಾನಲಾಭ ಪಡೆದರೂ ಭಾರತೀಯರು ಮಾತ್ರ ಅರಬ್ಬಿ ಜನರಿಂದ ಯಾವ ಜ್ಞಾನಲಾಭವನ್ನೂ ಪಡೆಯಲಿಲ್ಲ. ಭಾರತೀಯರು ತಮ್ಮ ಅಹಂಕಾರದಿಂದ, ತಮ್ಮೊಳಗೆ ತಾವು ಇದ್ದು ಮಡಿವಂತರಾಗಿಯೇ ಉಳಿದರು. ಇದರಿಂದ ಬಹಳ ಅನರ್ಥವಾಯಿತು. ಭಾರತೀಯ ಜನ ಮನಸ್ಸು ತನ್ನ ಸೃಷ್ಟಿ ಶಕ್ತಿ ಯನ್ನು ಬಹಳಮಟ್ಟಿಗೆ ಕಳೆದುಕೊಳ್ಳುತ್ತಿದ್ದಾಗ ಈ ಅರಬ್ಬಿ ಪುನರುಜ್ಜಿವನವು ಅದಕ್ಕೊಂದು ಹೊಸ ಚೈತನ್ಯವನ್ನು ಕೊಡುತ್ತಿತ್ತು. ಪ್ರಾಚೀನ ಕಾಲದ ಭಾರತೀಯರಾಗಿದ್ದರೆ ಆ ಜ್ಞಾನ ಕುತೂಹಲ ದೃಷ್ಟಿಯಲ್ಲಿ ತಲ್ಲೀನರಾಗಿ ಲಾಭ ಪಡೆಯುತ್ತಿದ್ದರು.
ಭಾರತೀಯ ವಿದ್ವತ್ತು ಮತ್ತು ವಿಜ್ಞಾನದ ಈ ಅಭ್ಯಾಸಕ್ಕೆ ಹರೂನ್ ಅಲ್ ರಷೀದನ ವಜೀರ್ ಮನೆತನದ ಬಾರ್ಮಕ್ (ಬಾರ್ಮೈಸೈಡೀಸ್) ವಂಶೀಕರು ಬಹಳ ಪ್ರೋತ್ಸಾಹಕೊಟ್ಟರು. ಪ್ರಾಯಶಃ ಆ ವಂಶೀಕರೆಲ್ಲ ಬೌದ್ಧರಾಗಿರಬೇಕು. ಹರೂನ್ ಅಲ್ ರಷೀದನಿಗೆ ಕಾಹಿಲೆಯಾದಾಗ ಭಾರತದಿಂದ ಮಾನಕ್ ಎಂಬ ವೈದ್ಯನನ್ನು ಕರೆತರಲು ದೂತರನ್ನು ಕಳುಹಿಸಿದ್ದರು. ಮಾನಕ್ ಬಾಗ್ದಾದಿನಲ್ಲಿಯೇ ನಿಂತು ಒಂದು ದೊಡ್ಡ ವೈದ್ಯಶಾಲೆಯ ಮುಖ್ಯ ಅಧಿಕಾರಿಯಾದನು. ಮಾನಕ್ ಅಲ್ಲದೆ ಬೇರೆ ಆರು ಜನ ಭಾರತೀಯ ವೈದ್ಯರಿದ್ದರೆಂದು ಅರಬ್ಬಿ ಗ್ರಂಥಕರ್ತರು ಹೇಳುತ್ತಾರೆ. ಖಗೋಳ ಶಾಸ್ತ್ರದಲ್ಲಿ ಅರಬ್ಬಿಗಳು ಭಾರತೀಯರನ್ನೂ, ಅಲೆಕ್ಸಾಂಡ್ರಿಯನರನ್ನೂ ಮೀರಿಸಿದರು. ಇದರಲ್ಲಿ ಒಂಭತ್ತನೆಯ ಶತಮಾ ನದ ಗಣಿತ ಮತ್ತು ಖಗೋಳಶಾಸ್ತ್ರಗಳಲ್ಲಿ ಪ್ರವೀಣನಾದ ಅಲ್ ಖೈರಿ ಮತ್ತು ಹನ್ನೆರಡನೆಯ ಶತ ಮಾನದ ಕವಿಯೂ, ಖಗೋಳ ಶಾಸ್ತ್ರಜ್ಞನೂ ಆದ ಉಮರ್ ಖಯ್ಯಾಮ್ ಪ್ರಮುಖರು, ವೈದ್ಯದಲ್ಲಿ ಅರಬ್ಬಿ ಭಿಷಜರೂ, ಶಸ್ತ್ರವೈದ್ಯರೂ ಏಷ್ಯ ಮತ್ತು ಯೂರೋಪಿನಲ್ಲಿ ಪ್ರಸಿದ್ಧರಿದ್ದರು, ಅವರಲ್ಲೆಲ್ಲ ಅತಿ ಪ್ರಾಮುಖ್ಯನೆಂದರೆ ವೈದ್ಯರಾಜನೆಂದು ಹೆಸರಾದ ಜೂಬಾರ ಪಟ್ಟಣದ ಇಬನ್ ಸೈನಾ (ಅವಿಸೆನ್ನ). ೧೦೩೭ ರಲ್ಲಿ ಆತನು ಕಾಲವಾದನು. ಅರಬ್ಬಿ ತತ್ವಶಾಸ್ತ್ರ ಮತ್ತು ದರ್ಶನಗಳಲ್ಲಿ ಅಬು ನಜರ್ ಫರಾಬಿ ಪ್ರಸಿದ್ಧನಾದವನು.
ತತ್ವಶಾಸ್ತ್ರದಲ್ಲಿ ಅರಬ್ಬಿ ಜನರಮೇಲೆ ಭಾರತವು ಹೆಚ್ಚು ಪ್ರಭಾವ ಬೀರಿದಂತೆ ತೋರುವುದಿಲ್ಲ. ತತ್ವಶಾಸ್ತ್ರ ಮತ್ತು ವಿಜ್ಞಾನಗಳೆರಡರಲ್ಲೂ ಅರಬ್ಬಿ ಜನರು ಗ್ರೀಸ್ ಮತ್ತು ಪ್ರಾಚೀನ ಅಲೆಕ್ಸಾಂಡ್ರಿಯದ ವಿದ್ಯಾಮಂದಿರಗಳಿಂದ ಸ್ಫೂರ್ತಿ ಪಡೆಯುತ್ತಿದ್ದರು. ಅರಬ್ಬಿ ಜನರ ಮನಸ್ಸಿನ ಮೇಲೆ ಆಗಲೂ ಮತ್ತು ಇಂದಿನವರೆಗೆ ಸಹ ಪ್ಲೇಟೋ ಮತ್ತು ಎಲ್ಲರಿಗೂ ಮುಖ್ಯವಾಗಿ ಅರಿಸ್ಟಾಟಲ್ ಬಹಳ ಪ್ರಭಾವ ಬೀರಿದ್ದಾರೆ. ಮೂಲಗ್ರಂಥಗಳಿಗಿಂತ ಹೆಚ್ಚಾಗಿ ಅರಬ್ಬಿ ಟೀಕಾ ಗ್ರಂಥಗಳ ಮೂಲಕ ಇಸ್ಲಾಂ