ಯರಿಗಿಂತ ಅವರು ಯಾವುದರಲ್ಲೂ ಕಡಮೆ ಇರುತ್ತಿರಲಿಲ್ಲ. ಭಿನ್ನ ತೆಯಲ್ಲಿ ಐಕ್ಯತೆಯನ್ನುಂಟುಮಾಡಿ ಈ ರೀತಿ ಸಾರ್ವತ್ರಿಕ ರಾಷ್ಟ್ರೀಯತ್ವವನ್ನು ಬೆಳೆಸುವ ಸನಾತನ ಭಾರತೀಯರ ಆದರ್ಶಕ್ಕೆ ಅಕ್ಷರ್ ಬಾದಶಹನೇ ಮಹಾ ಪ್ರತಿನಿಧಿಯಾದನು ; ಭಾರತದೊಂದಿಗೆ ಅವನು ಏಕೀಭವಿಸಿದುದರಿಂದಲೇ ಪರಕೀಯನಾದರೂ ಭಾರತವು ಅವನನ್ನು ಹಿಂಬಾಲಿಸಿತು. ಅದೇ ಕಾರಣದಿಂದಲೇ ಭದ್ರವಾದ ತಳಹದಿ ಯನ್ನು ಹಾಕಿ ಒಂದು ಮಹಾ ವೈಭವಯುಕ್ತ ಸಾಮ್ರಾಜ್ಯವನ್ನು ಕಟ್ಟಲು ಅವನಿಗೆ ಸಾಧ್ಯವಾಯಿತು. ಆತನ ವಂಶೀಕರು ಎಲ್ಲಿಯವರೆಗೆ ಈ ನೀತಿಯನ್ನು ತಮ್ಮ ದೃಷ್ಟಿ ಪಥದಲ್ಲಿಟ್ಟು ಕೊಂಡು ರಾಷ್ಟ್ರದ ಇಚ್ಛೆ ಗನುಸಾರವಾಗಿ ನಡೆದರೋ ಅಲ್ಲಿಯವರೆಗೆ ಆ ಚಕ್ರಾಧಿಪತ್ಯವು ಬೆಳೆದು ಉಳಿಯಿತು. ಆದರೆ ಆ ದಾರಿ ಯನ್ನು ಬಿಟ್ಟು ಅಡ್ಡ ದಾರಿಯನ್ನು ಎಂದಿನಿಂದ ಹಿಡಿದು ರಾಷ್ಟ್ರದ ಪ್ರಗತಿಗೆ ಅಡ್ಡ ಬಂದರೋ ಅಂದಿ ನಿಂದ ಅವರ ಶಕ್ತಿಯು ಕುಂದುತ್ತ ಬಂದಿತು. ಅವರ ಚಕ್ರಾಧಿಪತ್ಯವೂ ನುಚ್ಚು ನೂರಾಯಿತು. ಸಂಕುಚಿತ ದೃಷ್ಟಿ ಯಿದ್ದರೂ ಪುನರುಜ್ಜಿವಿತ ರಾಷ್ಟ್ರೀಯ ಭಾವನೆಯ ಹೊಸ ಚಳವಳಿಗಳೆದ್ದು ವು. ಶಾಶ್ವತವಾದ ರಾಜ್ಯವನ್ನು ಕಟ್ಟಲು ಅವುಗಳಿಗೆ ಶಕ್ತಿ ಸಾಲದಾದರೂ ಮೊಗಲರ ಸಾಮ್ರಾಜ್ಯವನ್ನು ನಾಶಮಾಡಿದವು. ಸ್ವಲ್ಪ ಕಾಲ ಯಶಸ್ಫೂ ದೊರೆಯಿತು. ಆದರೆ ಅವುಗಳ ದೃಷ್ಟಿ ಎಲ್ಲವೂ ಪ್ರಾಚೀನತೆಯಲ್ಲಿಯೇ ನೆಟ್ಟು ಪ್ರಾಚೀನ ವೈಭವವನ್ನೇ ಪುನರುತ್ಥಾನ ಗೊಳಿಸಬೇಕೆಂದು ಪ್ರಯತ್ನ ಪಟ್ಟು ವು. ಈ ಮಧ್ಯೆ ಶತ ಶತ ಮಾನಗಳಿಂದ ರಾಷ್ಟ್ರದಲ್ಲಿ ಬೇರೂರಿ ಬೆಳೆದು ಬಂದಿರುವ ಅನೇಕ ವಿಷಯಗಳನ್ನು ಅಲಕ್ಷ ಮಾಡಲು ಸಾಧ್ಯವಿಲ್ಲ, ಬದಿಗೊತ್ತಲಾಗುವುದಿಲ್ಲ. ಗತಕಾಲವೆಂದಿಗೂ ವರ್ತಮಾನಕಾಲವಾಗಲಾರದು ; ಅವರ ಕಾಲದ ಆ ವರ್ತಮಾನಕಾಲ ಸಹ ಕೊಳೆತು ಪಾಚಿಗಟ್ಟಿದ್ದ ಕ್ರಿಯಾಶೂನ್ಯ ಕಾಲ ಎನ್ನು ವುದನ್ನು ಮರೆತರು. ಪಶ್ಚಿಮ ದೇಶಗಳಲ್ಲಿ ಹೊಸ ದೃಷ್ಟಿ ಮತ್ತು ಹೊಸ ಮಾರ್ಗಗಳನ್ನವಲಂಬಿಸಿದ ಒಂದು ಹೊಸ ಜೀವಂತ ಪ್ರಪಂಚ ಉದ್ಭವಿಸುತ್ತಿದೆ ; ಬ್ರಿಟಿಷರು ಆ ಹೊಸ ಪ್ರಪಂಚದ ಪ್ರತಿನಿಧಿಗಳು ಎನ್ನು ವುದು ಅವರಿಗೆ ತಿಳಿಯದಾಯಿತು. ಬ್ರಿಟಿಷರು ಜಯಶೀಲರಾದರು. ಆದರೆ ಉತ್ತರ ಭಾರತದಲ್ಲಿ ಇನ್ನೂ ನೆಲೆಸಿರಲಿಲ್ಲ; ಅಷ್ಟರಲ್ಲಿಯೇ ಮಹಾ ದಂಗೆ ಎದ್ದು ಸ್ವಾತಂತ್ರ ಸಂಗ್ರಾಮವಾಗಿ ಪರಿಣಮಿಸಿತು ಮತ್ತು ಬ್ರಿಟಿಷ್ ರಾಜ್ಯಭಾರವೂ ಕೊನೆಗಾಣುವುದರಲ್ಲಿಯೂ ಇತ್ತು. ಸ್ವಾತಂತ್ರಾಭಿಲಾಷೆ, ಪರಮಾಧಿಕಾರದ ಆಶೆ, ಪರದಾಸ್ಯಕ್ಕೆ ತಲೆಬಾಗಬಾರದೆಂಬ ಹಟ ಸದಾ ಇದ್ದೆ ಇದ್ದವು.
೬. ಪ್ರಗತಿಯೋ ? ಶಾಂತಿಯೋ?
ನಮ್ಮ ಜನದ ದೃಷ್ಟಿ ಸಂಕುಚಿತ ದೃಷ್ಟಿ, ನಮ್ಮ ಪುರಾತನ ಸಂಸ್ಕೃತಿಯಲ್ಲಿ, ಗತ ವೈಭವದಲ್ಲಿ ಬಹಳ ಹೆಮ್ಮೆ, ಅದನ್ನು ಉಳಿಸಿಕೊಳ್ಳಲೆಂದು ಅಡ್ಡ ಗೋಡೆಗಳನ್ನು ಕಟ್ಟಿ ಒಂದು ಚಕ್ರವ್ಯೂಹವನ್ನೇ ರಚಿಸಿದ್ದೇವೆ. ಈ ರೀತಿ ಕುಲದ ಭಾವನೆ ದಿನ ದಿನಕ್ಕೂ ಬಿಗಿಯಾಗುತ್ತಿದ್ದರೂ ಜಾತಿಮತಗಳ ಕಟ್ಟು ಬಲಗೊಳ್ಳುತ್ತಿದ್ದರೂ ಇತರರಂತೆ ನಮ್ಮ ಕುಲಗೋತ್ರಗಳ ಪಾರಿಶುದ್ಧತೆಯಲ್ಲಿ ಹೆಮ್ಮೆಗೊಳ್ಳುತ್ತ ಇದ್ದರೂ ನಮ್ಮಲ್ಲಿ ಅನೇಕ ಬುಡಕಟ್ಟಿನ ಜನರು ಬೆರೆತು ಹೋಗಿದ್ದಾರೆ- ಆರರು, ದ್ರಾವಿಡರು, ತುರೇನಿಯನರು, ಸೆಮೆಟಿಕ್ ಜನರು ಮತ್ತು ಮಂಗೊಲಿಯನರು. ಆರ್ಯರು ಮೇಲಿಂದ ಮೇಲೆ ಅಲೆಯಲೆಯಾಗಿ ಇಲ್ಲಿಗೆ ಬಂದು ದ್ರಾವಿಡರೊಂದಿಗೆ ಬೆರೆತರು. ಅವರ ನಂತರದ ಸಹಸ್ರಾರು ವರ್ಷಗಳಲ್ಲಿ ಅನೇಕ ಜನಾಂಗಗಳು, ಪಂಗಡಗಳು ಮೇಲಿಂದ ಮೇಲೆ ವಲಸೆ ಬಂದಿದ್ದಾರೆ- ಮೂಾಡಿಯನರು, ಇರಾನಿಗಳು, ಗ್ರೀಕರು, ಬ್ಯಾಕ್ಟ್ರಿಯನರು, ಪಾರ್ಥಿಯನರು, ಶಕರು ಅಥವ ಸಿಥಿಯನರು, ಕುಶಾನರು ಅಥವ ಯುಯೇಚಿಗಳು, ತುರ್ಕಿ ಜನರು, ಮಂಗೋಲಿರ್ಯ, ತುರುಕರು ಮತ್ತು ಇತರರು ಸಣ್ಣ ದೊಡ್ಡ ಗುಂಪುಗಳಲ್ಲಿ ಬಂದು ಭಾರತದಲ್ಲಿ ನೆಲೆಸಿ ಮನೆಮಾಡಿಕೊಂಡರು. ಡಾಡೈಲ್- ಇ೦ಡಿಯ ” ಎಂಬ ಗ್ರಂಥದಲ್ಲಿ ಮಹಾ ಕ್ರೂರಿಗಳೂ, ಯುದ್ದ ಸಾಹಸಿಗಳೂ ಆದ ಜನರು ಪದೇ ಪದೇ ಭಾರತದ ಮೈದಾನ ಪ್ರದೇಶಗಳ ಮೇಲೆ ದಂಡೆತ್ತಿ ಬಂದರು, ಅಲ್ಲಿನ ರಾಜರನ್ನು ಸೋಲಿಸಿದರು, ಅವರ ನಗರ ಗಳನ್ನು ಹಿಡಿದು ನಾಶಮಾಡಿದರು, ಹೊಸ ರಾಜ್ಯಗಳನ್ನು ಸ್ಥಾಪಿಸಿ ತಮ್ಮದೇ ನೂತನ ರಾಜಧಾನಿಗಳನ್ನು ನಿರ್ಮಿಸಿದರು; ಅನಂತರ ಮಾನವ ಕುಲದ ಮತ್ತೊಂದು ಮಹಾ ಅಲೆಯಲ್ಲಿ ನಿರ್ನಾಮ