ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಹೊಸ ಸಮಸ್ಯೆಗಳ
೨೦೧

ಅನಂತರವಾಗಲಿ ಅವರು ಭಾರತದಲ್ಲಿ ಸಿಂಧೂದೇಶದಿಂದ ಮುಂದೆ ಬರಲಿಲ್ಲ. ದಂಡೆತ್ತಿಬಂದ ಪರಕೀಯರನ್ನು ಹಿಮ್ಮೆಟ್ಟಿಸುವ ಶಕ್ತಿಯು ಇನ್ನೂ ಭಾರತಕ್ಕೆ ಇದ್ದಿತೆಂದು ತೋರುತ್ತದೆ. ಇದ್ದಿರಬೇಕು; ಏಕೆಂದರೆ ನಿಜವಾದ ಮುತ್ತಿಗೆಯಾಗಲು ಅನೇಕ ಶತಮಾನಗಳು ಹಿಡಿದಿದ್ದರಿಂದ ಬೇರೆ ಕಾರಣವನ್ನು ಹೇಳವುದು ಕಷ್ಟ. ಅರಬ್ಬಿ ಜನರಲ್ಲಿದ್ದ ಅಂತಃ ಕಲಹಗಳೂ ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು. ಬಾಗ್ದಾದಿನ ಕೇಂದ್ರ ಆಡಳಿತದಿಂದ ಸಿಂಧುದೇಶವು ಪ್ರತ್ಯೇಕವಾಗಿ ಸ್ವತಂತ್ರ ಮುಸ್ಲಿಂ ರಾಜ್ಯವಾಯಿತು. ಮುತ್ತಿಗೆ ನಡೆಯದಿದ್ದರೂ ಭಾರತಕ್ಕೂ, ಅರಬ್ಬಿ ಜನರಿಗೂ ಪರಸ್ಪರ ಸಂಪರ್ಕ ಬೆಳೆಯಿತು, ಯಾತ್ರಿಕರು ಬಂದು ಹೋಗುತ್ತಿದ್ದರು, ರಾಯಭಾರಿಗಳನ್ನು ಕಳುಹಿಸುತ್ತಿದ್ದರು, ಗಣಿತಶಾಸ್ತ್ರ ಮತ್ತು ಖಗೋಳ ಶಾಸ್ತ್ರದ ಭಾರತೀಯ ಗ್ರಂಥಗಳನ್ನು ಅರಬ್ಬಿ ಭಾಷೆಗೆ ಅನುವಾದ ಮಾಡಿದರು. ಅನೇಕ ಭಾರತೀಯ ವೈದ್ಯರು ಬಾಗ್ದಾದಿಗೆ ಹೋದರು. ಈ ವ್ಯಾಪಾರ ಮತ್ತು ಸಾಂಸ್ಕೃತಿಕ ಸಂಬಂಧವು ಉತ್ತರ ಹಿಂದೂಸ್ಥಾನಕ್ಕೆ ಮಾತ್ರ ಅನ್ವಯಿಸಲಿಲ್ಲ. ದಕ್ಷಿಣ ಭಾರತದ ರಾಜ್ಯಗಳೂ ಭಾಗವಹಿಸಿದ್ದವು. ಪಶ್ಚಿಮ ತೀರದ ರಾಷ್ಟ್ರ ಕೂಟರೂ ಅರೇಬಿಯದೊಂದಿಗೆ ವ್ಯಾಪಾರ ನಡೆಸಿದವರಲ್ಲಿ ಅತಿಮುಖ್ಯರು.

ಈ ರೀತಿ ಸತತ ಸಂಪರ್ಕ ಬೆಳೆದಕಾರಣ ಭಾರತೀಯರಿಗೆ ಹೊಸ ಇಸ್ಲಾಂ ಧರ್ಮದ ಪರಿಚಯ ವಾಯಿತು. ಈ ಧರ್ಮವನ್ನು ಹರಡಲು ಬಂದ ಪ್ರಚಾರಕರಿಗೆ ಸ್ವಾಗತ ದೊರೆಯಿತು. ಮಸೀದಿ ಗಳನ್ನು ಕಟ್ಟಿದರು. ರಾಜರುಗಳಾಗಲಿ, ಜನರಾಗಲಿ ಯಾವ ಅಡ್ಡಿ ಯನ್ನೂ ಮಾಡಲಿಲ್ಲ. ಮತೀಯ ಘರ್ಷಣೆಗಳೂ ಹುಟ್ಟಲಿಲ್ಲ. ಸರ್ವ ಧರ್ಮಗಳಿಗೆ, ಪೂಜಾ ವಿಧಾನಗಳಿಗೆ ಸಹನೆ ತೋರುವುದೇ ಭಾರತ ಸಂಪ್ರದಾಯದ ವೈಶಿಷ್ಟ, ರಾಜಕೀಯ ಶಕ್ತಿಯಾಗಿ ಬಂದ ಅನೇಕ ಶತಮಾನಗಳ ಮುಂಚೆಯೇ ಈ ರೀತಿ ಇಸ್ಲಾಂ ಧರ್ಮಕ್ಕೆ ಭಾರತದಲ್ಲಿ ಮನ್ನಣೆ ದೊರೆಯಿತು.

ಉಮ್ಮೆಯ ಖಲೀಫರ (ಉಮ್ಮೆಯಾದೆ ಖಲೀಪ್) ಹೊಸ ಅರಬ್ಬಿ ಚಕ್ರಾಧಿಪತ್ಯಕ್ಕೆ ಡಮಾಸ್ಕಸ್ ರಾಜಧಾನಿಯಾಗಿ ಅದು ಒಂದು ಮಹಾನಗರವಾಗಿ ಬೆಳೆಯಿತು. ಆದರೆ ಸ್ವಲ್ಪ ಕಾಲದಲ್ಲಿ ಕ್ರಿ. ಶ. ೭೫೦ರಲ್ಲಿ ಅಬ್ಬಾಸಿಯ (ಅಬ್ಬಾ ಸೀದೆ) ಖಲೀಫರು ರಾಜಧಾನಿಯನ್ನು ಬಾಗ್ದಾದಿಗೆ ವರ್ಗಾಯಿಸಿದರು. ಅಂತಃಕಲಹಗಳು ಹುಟ್ಟಿದವು, ಸ್ಪೇನ್ ದೇಶವು ಚಕ್ರಾಧಿಪತ್ಯದಿಂದ ಹೊರಬಿದ್ದಿತು. ಆದರೂ ಅನೇಕಕಾಲ ಮುಸ್ಲಿಂರಾಜ್ಯವಾಗಿಯೇ ಉಳಿಯಿತು. ಕ್ರಮೇಣ ಬಾಗ್ದಾದ್ ಚಕ್ರಾಧಿಪತ್ಯವೂ ಶಕ್ತಿ ಗುಂದಿ, ಒಡೆದು ಚೂರಾಯಿತು. ಮಧ್ಯ ಏಷ್ಯಾದಿಂದ ಸೆಕ್ ತುರ್ಕಿ ಜನರು ಬಂದು ಬಾಗ್ದಾದಿನಲ್ಲಿ ತಮ್ಮ ಸ್ವಾಮ್ಯವನ್ನು ಸ್ಥಾಪಿಸಿ ಖಲೀಫನನ್ನು ತಮ್ಮ ಕೈಗೊಂಬೆಯನ್ನಾಗಿ ಮಾಡಿಕೊಂಡರು. ಆಫ್ಘಾನಿ ಸ್ಥಾನದಲ್ಲಿ ತಲೆಯೆತ್ತಿದೆ ಮಹಾಯೋಧನೂ, ಪ್ರಸಿದ್ದ ಸೇನಾನಾಯಕನೂ ಆದ ಘಜಿ ಸುಲ್ತಾನ್ ಮಹಮ್ಮದನು ಖಲೀಫನನ್ನು ನಿರ್ಲಕ್ಷಿಸಿ ಹಾಸ್ಯ ಮಾಡುತ್ತಿದ್ದನು. ಆದರೂ ಬಾಗ್ದಾದ್ ಇನ್ನೂ ಇಸ್ಲಾಂ ಸಂಸ್ಕೃತಿಯ ಕೇಂದ್ರವಾಗಿ ಉಳಿಯಿತು. ದೂರದ ಸ್ಪೇನ್ ಸಹ ಬಾಗ್ದಾದಿನಿಂದ ಸ್ಫೂರ್ತಿ ಪಡೆಯುತ್ತಿದ್ದಿತು. ವಿದ್ಯೆ, ವಿಜ್ಞಾನ, ಕಲೆ ಮತ್ತು ಜೀವನ ಸೌಕಯ್ಯದಲ್ಲಿ ಆಗ ಯೂರೋಪ್ ಬಹಳ ಹಿಂದೆ ಬಿದ್ದಿತ್ತು. ಯೂರೋಪಿನ ಈ ಅಂಧಕಾರಯುಗದಲ್ಲಿ ಜ್ಞಾನದೀಪವನ್ನು ಬೆಳಗಿಸಿ ಜ್ಞಾನ ಪಿಪಾಸೆಯನ್ನು ಬೆಳೆಸಿಕೊಂಡು ಬಂದದ್ದು ಅರಬ್ಬಿ ಸ್ಪೇನ್. ಅದರಲ್ಲೂ ಮುಖ್ಯವಾಗಿ ಕಾರ್ಡೊಬ ವಿಶ್ವವಿದ್ಯಾನಿಲಯ, ಅದರ ಕೆಲವು ಕಿರಣಗಳು ಯೂರೋಪಿನ ಗಾಡಾಂಧಕಾರದಲ್ಲಿ ತೂರಿದವು.

ಕ್ರಿ. ಶ. ೧೦೯೫ ರಿಂದ ಆರಂಭವಾದ ಕ್ರೈಸ್ತ ಧರ್ಮ ಯುದ್ದಗಳು ಸುಮಾರು ಒಂದೂವರೆ ಶತಮಾನಗಳ ಕಾಲ ನಡೆದವು. ಇವು ಕೇವಲ ಶಿಲುಬೆ ಮತ್ತು ಚರಿತ್ರೆ ಅಥವ ಎರಡು ಧರ್ಮಗಳ ಮಧ್ಯದ ಯುದ್ಧಗಳಾಗಿರಲಿಲ್ಲ. ಪ್ರಸಿದ್ಧ ಇತಿಹಾಸಕಾರನಾದ ಪ್ರೊಫೆಸರ್ ಜಿ. ಎಮ್. ಟ್ರೆವೆಲಿನ್ ಈ ಧರ್ಮ ಯುದ್ದಗಳು, ಯೂರೋಪಿನ ಪುನರುಜ್ಜಿವನ ಶಕ್ತಿಗಳು, ಪೌರ್ವಾತ್ಯವನ್ನು ತಮ್ಮ ಅಧೀನ ಪಡಿಸಿಕೊಳ್ಳಬೇಕೆಂಬ ಹಂಬಲದ ಸೈನಿಕಸಾಹಸದ ಮತ್ತು ಧರ್ಮಶ್ರದ್ದೆಯ ಫಲ. ಈ ಧರ್ಮ ಯುದ್ಧಗಳಿಂದ ಯೂರೋಪಿಗೆ ದೊರೆತ ಫಲ ಕ್ರಿಸ್ತನ ಸಮಾಧಿಯ ಬಿಡುಗಡೆ ಅಥವ ಕ್ರೈಸ್ತರಾಷ್ಟ್ರ ಗಳ ಒಕ್ಕೂಟವಲ್ಲ. ಆ ದೃಷ್ಟಿಯಿಂದ ಈ ಯುದ್ಧಗಳೆಲ್ಲ ನಿಷ್ಪಲ. ಅದಕ್ಕೆ ಪ್ರತಿಯಾಗಿ, ಸಂತಪೀಟಿ