ಪುಟ:ಭಾರತ ದರ್ಶನ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧೨

ಭಾರತ ದರ್ಶನ

ಮಾಡಲಿಲ್ಲ. ಈ ಜನತೆಗೂ ಉನ್ನತ ಮುಸ್ಲಿಮ ವರ್ಗಕ್ಕೂ ಬಹಳ ಅಂತರಏತ್ತು, ಹಿಂದೂ ಜನತೆಗೂ ಅವರಿಗೂ ಸಮೀಪ ಬಾಂಧವ್ಯವಿತ್ತು. ಮುಸ್ಲಿಮ್ ಉನ್ನತವರ್ಗದ ಕೆಲವರು ಮೊಗಲರ ಕಾಲದ ರಾಜಮನೆತನಗಳ ಸಂಬಂಧೀಕರಿದ್ದರು. ಮುಸ್ಲಿಮ್ ಜನತೆಗೆ ಅಂತಹ ಹಿನ್ನೆಲೆ ಅಥವ ಸಂಪ್ರ ದಾಯ ಯಾವುದೂ ಇರಲಿಲ್ಲ. ಅವರಲ್ಲನೇಕರು ಹಿಂದೂ ಸಮಾಜದ ಕೆಳಮಟ್ಟದಿಂದ ಮತಾಂತರ ಹೊಂದಿದ ಬಡವರೂ ಜೀತದಾಳುಗಳೂ ಆದ ಜನರಾಗಿ ಬಹುಕಷ್ಟದಲ್ಲಿದ್ದರು.

ಸರ್ ಸೈಯದ್ ಸಂಗಡ ಕೆಲವು ದಕ್ಷರೂ ಪ್ರತಿಭಾಶಾಲಿಗಳೂ ಆದ ಸಹಾಯಕರಿದ್ದರು. ಆತನ ತರ್ಕಬದ್ಧ ಧರ್ಮವಿವರಣೆಯಲ್ಲಿ ಸೈಯದ್ ಜೈರಾಗ್ ಆಲಿ ಮತ್ತು ನವಾಬ್ ಮೊಹಸೀನ್ ಉಲ್‌ಮುಲ್‌ ಬೆಂಬಲನಿಂತರು. ಆತನ ವಿದ್ಯಾ ಪ್ರಚಾರ ಕಾವ್ಯದಲ್ಲಿ ಮುನ್ನಿ ಕರಾಮತ್ ಆಲಿ, ದೆಹಲಿಯ ಮು೩ ಜಕಉಲ್ಟಾ, ಡಾಕ್ಟರ್ ನಜೀರ್ ಅಹಮದ್, ಮೌಲಾನ ಒಬ್ಬನುಮಾನಿ ಉರ್ದು ಸಾಹಿತ್ಯದಲ್ಲಿ ಉನ್ನತ ವ್ಯಕ್ತಿಯಾದ ಕವಿಹಾಲಿ ಅವನಿಗೆ ಸಹಾಯಕರಾದರು. ಮುಸ್ಲಿಮ ರಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸದ ಅಭಿರುಚಿಯನ್ನು ಹುಟ್ಟಿಸುವುದರಲ್ಲಿ ಮತ್ತು ಅವರನ್ನು ರಾಜಕೀಯ ಚಳುವಳಿಯಿಂದ ದೂರ ಇಡುವುದರಲ್ಲಿ ಸರ್ ಸೈಯದ್ ಕೃತಕೃತ್ಯನಾದನು. ಮುಸ್ಲಿ೦ ಶಿಕ್ಷಣ, ಸಮ್ಮೇಳನ ಆರಂಭಿಸಿ ಮುಸ್ಲಿಂ ಮಧ್ಯಮವರ್ಗದ ಯುವಕರನ್ನು ಸರಕಾರದ ಕೆಲಸಕ್ಕೆ ಮತ್ತು ಇತರ ಉದ್ಯೋಗಗಳ ಕಡೆ ಆಕರ್ಷಿಸಿದನು.

ಆದರೂ ಅನೇಕ ಪ್ರಮುಖ ಮುಸ್ಲಿಂ ವ್ಯಕ್ತಿಗಳು ರಾಷ್ಟ್ರೀಯ ಮಹಾ ಸಭೆಯನ್ನು ಸೇರಿದರು. ಬ್ರಿಟಷ್ ನೀತಿ ಸ್ಪಷ್ಟ ಮುಸ್ಲಿ೦ಪರವಾಯಿತು. ರಾಷ್ಟ್ರೀಯ ಚಳವಳಿ ವಿರೋಧಿಸಿದ ಮುಸ್ಲಿಮರೆಲ್ಲರೂ ಬ್ರಿಟಿಷರ ಕೃಪಾಕಟಾಕ್ಷಕ್ಕೆ ಪಾತ್ರರಾದರು. ಇಪ್ಪತ್ತನೆಯ ಶತಮಾನದಲ್ಲಿ ಮುಸ್ಲಿಮ್ ಯುವಕ ವರ್ಗದಲ್ಲಿ ರಾಷ್ಟ್ರೀಯ ಭಾವನೆ ಮತ್ತು ರಾಜಕೀಯ ಜಾಗ್ರತಿ ಹೆಚ್ಚು ಬೆಳೆಯಿತು. ಇದನ್ನು ತಡೆಗಟ್ಟ, ಸುರಕ್ಷಿತಮಾರ್ಗದಲ್ಲಿ ಅದನ್ನು ಒಯ್ಯಲು ಬ್ರಿಟಿಷರ ಪ್ರೋತ್ಸಾಹದಿಂದ ಬ್ರಿಟಿಷರ ಮುಖ್ಯ ಸಹಾಯಕನಾದ ಆಗಾಖಾನನ ನೇತೃತ್ವದಲ್ಲಿ ೧೯೦೬ ರಲ್ಲಿ ಮುಸ್ಲಿಂಲೀಗ್ ಸ್ಥಾಪನೆಯಾಯಿತು. ಬ್ರಿಟಿಷ್ ಸರ್ಕಾರದಲ್ಲಿ ರಾಜಭಕ್ತಿ ಮತ್ತು ಮುಸ್ಲಿಮರ ಹಿತರಕ್ಷಣವೆ ಲೀಗಿನ ಎರಡು ಮುಖ್ಯ ಉದ್ದೇಶಗಳು.

ದಂಗೆಯ ನಂತರ ಕಾಲದ ಪ್ರಮುಖ ಮುಸ್ಲಿಂ ವ್ಯಕ್ತಿಗಳೆಲ್ಲರೂ ಹಿಂದಿನ ಪದ್ದತಿಯಂತೆ ಶಿಕ್ಷಣ ಪಡೆದು ಅನಂತರ ಸ್ವಲ್ಪ ಇಂಗ್ಲಿಷ್ ಕಲಿತು ಹೊಸಭಾವನೆಗಳ ಪ್ರಭಾವಕ್ಕೆ ಒಳಗಾದವರು. ಆದ್ದರಿಂದ ಹೊಸ ಇಂಗ್ಲಿಷ್ ವಿದ್ಯಾಭ್ಯಾಸಪದ್ದತಿಯ ಫಲವಾಗಿ ಅವರಲ್ಲಿ ಪ್ರಮುಖ ವ್ಯಕ್ತಿಗಳು ಯಾರೂ ಹುಟ್ಟಿರಲಿಲ್ಲ, ಆ ಶತಮಾನದ ಶ್ರೇಷ್ಠ ಸಾಹಿತಿ ಮತ್ತು ಮುಖ್ಯ ಕವಿ ಘಲಿಬ್. ಆದರೆ ದಂಗೆಗೆ ಮುಂಚೆಯೇ ಆತನು ಮಧ್ಯವಯಸ್ಸಿನವನಾಗಿದ್ದನು.

ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಮುಸ್ಲಿಂ ವಿದ್ಯಾವಂತರಲ್ಲಿ ಎರಡು ಮಾರ್ಗಾನುಸರಣೆ ಕಂಡುಬಂದುವು. ಯುವಕರು ಮುಖ್ಯವಾಗಿ ರಾಷ್ಟ್ರೀಯ ಭಾವನೆಯಕಡೆ ತಿರುಗಿದುದು ಒಂದು; ಹಿಂದಿನ ಭಾರತೀಯ ಸಂಸ್ಕೃತಿಯನೆಲ್ಲ ಕಿತ್ತೊಗೆದು ಇಂದಿನದನ್ನೂ ಸ್ವಲ್ಪ ಬಿಟ್ಟು ತುರ್ಕಿಯ ಖಲೀಫ ಮತ್ತು ಇತರ ಇಸ್ಲಾಂ ದೇಶಗಳ ಕಡೆ ನೋಡುವ ದೃಷ್ಟಿ ಇನ್ನೊ೦ದು. ತುರ್ಕಿಯ ಸುಲ್ತಾನ ಹಮೀದನಿಂದ ಪ್ರೋತ್ಸಾಹಪಡೆದ ಈ ಬೃಹವಿಸ್ಸಾಂ ಚಳವಳಿಗೆ ಭಾರತೀಯ ಮುಸಲ್ಮಾನರಲ್ಲಿ ಉನ್ನತವರ್ಗದವರಿಂದ ಸ್ವಲ್ಪ ಪ್ರೋತ್ಸಾಹ ದೊರೆಯಿತು. ಆದರೂ ಸರ್ ಸೈಯದ್ ಇದನ್ನು ವಿರೋಧಿಸಿ ಭಾರತೀಯರು ಯಾರೂ ತುರ್ಕಿಯಲ್ಲಾಗಲಿ, ಸುಲ್ತಾನಪದವಿಯಲ್ಲಾಗಲಿ ಆಸಕ್ತಿ ರಚಾರದಂದು ಬರೆದನು, ತುರ್ಕಿಯ ಯುವಕ ಚಳವಳಿಯು ಭಾರತದಲ್ಲಿ ಭಿನ್ನ ಪರಿಣಾಮ ಮಾಡಿತು, ಭಾರತದ ಮುಸ್ಲಿಮರು ಅನೇಕರು ಮೊದಲು ಮೊದಲು ಅದನ್ನು ಸಂಶಯದೃಷ್ಟಿಯಿಂದ ಕಂಡರು. ಯುರೋಪಿಯನ್ ಕುತಂತ್ರಗಳಿಗೆ ಸುಲ್ತಾನನು ಬಲಿಬೀಳದೆ ಬಲವಾದ ಕೂಟಿಯಂತಿ ದಾನೆಂದು ಆತನಲ್ಲಿ ಇನ್ನು ಕೆಲವರು ಸಹಾನುಭೂತಿ ತೋರಿದರು, ಆದರೆ ಇತರರು-ಮುಖ್ಯವಾಗಿ