ಅವರ ಜೊತೆಯಲ್ಲಿ ಅಲ್ಲ ; ಆದರೆ ಸಾಫೋಕ್ಲಿಸ್, ವರ್ಜಿಲ್ ಮತ್ತು ಮಿಲ್ಟನ್ರ ಜೊತೆಯಲ್ಲಿ ” ಎಂದು ಹೇಳಿದ್ದಾನೆ.
ಪ್ರಾಯಶಃ ಕಾಳಿದಾಸನಿಗೂ ಬಹುದಿನಗಳ ಹಿಂದೆಯೇ ಶೂದ್ರಕನ ಮೃಚ್ಛಕಟಕ ಅಥವಾ ಮಣ್ಣಿನಗಾಡಿ ' ಎಂಬ ಇನ್ನೊಂದು ಪ್ರಸಿದ್ಧ ಕೋಮಲ ಕಲ್ಪನಾನಾಟಕವು ಹುಟ್ಟಿತ್ತು. ಕಲ್ಪನೆ ಯಾದರೂ ನಮ್ಮ ಮನಸ್ಸನ್ನು ಕಲಕುವ ಮತ್ತು ಅಂದಿನ ಜನರ ಮನಸ್ಸು ಮತ್ತು ನಾಗರಿಕತೆಯನ್ನು ತೋರಿಸುವ ಒಂದು ವಾಸ್ತವಿಕತೆ ಇದೆ. ಎರಡನೆ ಚಂದ್ರಗುಪ್ತನ ಕಾಲದಲ್ಲಿ ಅದೇ ಸುಮಾರಿನಲ್ಲಿ ಇನ್ನೊಂದು ಅದ್ಭುತವಾದ ನಾಟಕವು ಹುಟ್ಟಿತು. ವಿಶಾಖದತ್ತನ • ಮುದ್ರಾರಾಕ್ಷಸ' ಅಥವಾ ' ರಾಜ ಮುದ್ರೆ ' ಇದೊಂದು ರಾಜಕೀಯ ನಾಟಕ, ಇದರಲ್ಲಿ ಶೃಂಗಾರರಸವಾಗಲಿ ಪುರಾಣ ಕಥೆಯಾಗಲಿ ಯಾವುದೂ ಇಲ್ಲ, ಚಂದ್ರಗುಪ್ತ ಮೌಯ್ಯನ ಕಾಲವನ್ನು ಚಿತ್ರಿಸುತ್ತದೆ. ಅವನ ಮುಖ್ಯ ಪ್ರಧಾನಿಯೂ, ಅರ್ಥಶಾಸ್ತ್ರದ ಗ್ರಂಥಕರ್ತನೂ ಆದ ಚಾಣಕ್ಯನೇ ನಾಟಕದ ಕಥಾನಾಯಕ. ಈಗಿನ ಕಾಲಕ್ಕೆ ಬಹಳ ಸಮಯೋಚಿತ ನಾಟಕವಾಗಿದೆ.
ಏಳನೆಯ ಶತಮಾನದ ಆದಿಯಲ್ಲಿ ಒಂದು ಹೊಸ ಸಾಮ್ರಾಜ್ಯವನ್ನು ಸ್ಥಾಪಿಸಿದ ಹರ್ಷಚಕ್ರ ವರ್ತಿಯು ಸ್ವತಃ ನಾಟಕಕರ್ತನಾಗಿದ್ದ. ಅವನು ಬರೆದ ನಾಟಕಗಳಲ್ಲಿ ಮೂರುಮಾತ್ರ ದೊರಕಿವೆ. ಸುಮಾರು ಏಳನೆಯ ಶತಮಾನದಲ್ಲಿ ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧನಾದ ಇನ್ನೊಬ್ಬ ಕವಿ ಭವಭೂತಿಯು ನಾಟಕಗಳನ್ನು ಬರೆದ, ಭಾಷಾಲಾಲಿತ್ಯವೇ ಅವನ ಮುಖ್ಯಗುಣವಾದ್ದರಿಂದ ಅವನ ನಾಟಕಗಳ ಅನುವಾದ ಸುಲಭಸಾಧ್ಯವಲ್ಲ. ಆದರೂ ಕಾಳಿದಾಸನನ್ನು ಬಿಟ್ಟರೆ ಜನರ ಮನಸ್ಸನ್ನು ಸೂರೆಗೊಂಡಿರುವವರಲ್ಲಿ ಎರಡನೆಯವನೇ ಭವಭೂತಿ. ಆಕ್ಸ್ ಫರ್ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕನಾಗಿದ್ದ ವಿಲ್ಸನ್ ಇವರಿಬ್ಬರ ವಿಷಯವಾಗಿ “ ಭವಭೂತಿ ಕಾಳಿದಾಸರ ಕಾವ್ಯಗಳಲ್ಲಿ ತುಂಬಿ ತುಳುಕುವಷ್ಟು ಗಾನಮಾಧುರವನ್ನೂ, ಭಾಷಾಸೌ೦ದರವನ್ನೂ, ಅತ್ಯುನ್ನತ ಭಾವನೆ ಗಳನ್ನೂ ಬೇರೊಂದು ಭಾಷೆಯಲ್ಲಿ ಊಹಿಸುವುದು ಅಸಾಧ್ಯ” ಎಂದಿದ್ದಾರೆ.
ಈ ರೀತಿ ಸಂಸ್ಕೃತ ನಾಟಕವಾಹಿನಿಯೂ ಅನೇಕ ಶತಮಾನಗಳ ಕಾಲ ಅವಿಚ್ಛಿನ್ನವಾಗಿ ಪ್ರವಹಿಸಿತು. ಆದರೆ ಒಂಭತ್ತನೆಯ ಶತಮಾನದಲ್ಲಿ ಮುರಾರಿಯನಂತರ ಕಾವ್ಯಗುಣವು ಬಹಳ ಕೆಳಮಟ್ಟಕ್ಕೆ ಇಳಿಯಿತು. ಈ ಇಳಿಮುಖ ಮತ್ತು ಕ್ರಮಾನುಗತ ಅವನತಿಯನ್ನು ಜೀವನದ ಎಲ್ಲ ಕಾರ್ಯ ಚಟುವಟಿಕೆಗಳಲ್ಲೂ ಕಾಣಬಹುದು. ಇಂಡೋ ಆಫೈನರು ಮತ್ತು ಮೊಗಲರ ಕಾಲದಲ್ಲಿ ರಾಜಾಶ್ರಯವು ತಪ್ಪಿದ್ದರಿ೦ದಲೂ ರಾಷ್ಟ್ರದ ಧರ್ಮಕ್ಕೂ ನಾಟಕಕ್ಕೂ ಸವಿಾಪ ಸಂಬಂಧವಿದ್ದುದರಿಂದ ಲೂ ಕಲಾರೂಪದಲ್ಲಿ ನಾಟಕಕ್ಕೆ ಇಸ್ಲಾಂ ಧರ್ಮದಿಂದ ತಿರಸ್ಕಾರ ಬಂದುದರಿಂದಲೂ ಸ್ವಲ್ಪ ಮಟ್ಟಿಗೆ ನಾಟಕ ಕಲೆ ಹಿಂದೆ ಬಿದ್ದಿತೆಂದು ಕೆಲವರ ಮತ. ಜನಪದ ನಾಟಕಗಳು ಮುಂದುವರಿದೇ ಬಂದವು. ಆದರೆ ಈ ಸಾಹಿತ್ಯ ಪ್ರಧಾನ ನಾಟಕವು ಬಹಳ ಪಂಡಿತರಂಜಕವೂ, ಕೃತಕವೂ ಆಗಿ ರಾಜಾಶ್ರಯ ದಿಂದಲೇ ಬೆಳೆದು ಬಂದಿತು. ಆದ್ದರಿಂದ ರಾಜಕೀಯ ವಿಪ್ಲವಗಳಿಂದ ಮೇಲೆ ಸ್ವಲ್ಪ ಅಪ್ರತ್ಯಕ್ಷ ಪರಿಣಾಮವಾದರೂ ಮೂಲತಃ ಈ ವಾದದಲ್ಲಿ ಯಾವ ತಿರುಳೂ ಇಲ್ಲ. ನಿಜವಾಗಿ ನೋಡಿದರೆ ಈ ರಾಜಕೀಯ ವಿಪ್ಲವಗಳಿಗೆ ಬಹಳ ಮುಂಚೆಯೇ ಸಂಸ್ಕೃತ ನಾಟಕವು ಕೆಳಮಟ್ಟಕ್ಕೆ ಬರಲಾರಂಭಿಸಿ ರುವುದನ್ನು ನೋಡಬಹುದು. ಈ ರಾಜಕೀಯ ವಿಪ್ಲವಗಳು ಸಹ ಕೆಲವು ಶತಮಾನಗಳ ಕಾಲ ಉತ್ತರ ಹಿಂದೂಸ್ಥಾನದಲ್ಲಿ ಮಾತ್ರ ಸಂಭವಿಸಿದವು. ಈ ನಾಟಕದಲ್ಲಿ ನಿಜವಾದ ಅಂತಃಸತ್ವವಿದ್ದರೆ ದಕ್ಷಿಣ ಭಾರತದಲ್ಲಿ ಮುಂದುವರಿಯಬಹುದಾಗಿತ್ತು. ಅಲ್ಲಲ್ಲಿ ಕೆಲವು ಮತಾಂಧತೆಯ ಕಾಲವನ್ನು ಬಿಟ್ಟರೆ ಇಂಡೋ ಆಫೈನ್, ತುರ್ಕಿ ಮತ್ತು ಮೊಗಲ್ ರಾಜರುಗಳು ಸ್ವಲ್ಪ ಹೆಚ್ಚು ಕಡಮೆ ಸಾಮಾನ್ಯ ವಾಗಿ ಭಾರತೀಯ ಸಂಸ್ಕೃತಿಗೆ ಪ್ರೋತ್ಸಾಹ ಕೊಡುತ್ತಲೇ ಬಂದಿದ್ದಾರೆ. ಕೆಲವು ವೇಳೆ ಸ್ವಲ್ಪ ಮಾರ್ಪಾಟಾಗಿ ಇನ್ನು ಕೆಲವು ವೇಳೆ ಪುಷ್ಟಿಗೊಂಡಿದೆ. ಮುಸ್ಲಿಂ ರಾಜಾಸ್ಥಾನಗಳಲ್ಲಿ, ಶ್ರೀಮಂತ ಮನೆತನಗಳಲ್ಲಿ ಭಾರತೀಯ ಸಂಗೀತಕ್ಕೆ ಪೂರ್ಣ, ಉತ್ಸಾಹಪೂರಿತ ಆಶ್ರಯ ದೊರೆಯಿತು. ಮುಸ್ಲಿ
ಪುಟ:ಭಾರತ ದರ್ಶನ.djvu/೧೫೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೩೫