ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯುಗಾಂತರಗಳು
೧೩೩

ಜನಿಕ ಪ್ರದರ್ಶನಗಳು ಸರ್ವಸಾಮಾನ್ಯವಾದಾಗ ಮಾತ್ರ ಅಂತಹ ಗ್ರಂಥವು ಹೊರಬೀಳಲು ಸಾಧ್ಯ. ಎಷ್ಟೋ ಗ್ರಂಥರಾಶಿಯು ಅದರ ಮೊದಲೇ ಹುಟ್ಟಿರಬೇಕು ಮತ್ತು ಅದರ ಹಿಂದೆ ಅನೇಕ ಶತಮಾನಗಳ ಕ್ರಮಾನುಗತ ಪ್ರಗತಿಯಾಗಿರಬೇಕು. ಚೋಟಾನಾಗಪುರದ ರಾಮಘಡ ಬೆಟ್ಟಗಳಲ್ಲಿ ಕ್ರಿಸ್ತಪೂರ್ವ ಎರಡನೆಯ ಶತಮಾನದಲ್ಲಿದ್ದು ಭೂಗತವಾಗಿದ್ದ ಒಂದು ಪುರಾತನ ನಾಟಕಮಂದಿರವು ದೊರೆತಿದೆ. ನಾಟ್ಯಶಾಸ್ತ್ರದಲ್ಲಿ ವರ್ಣಿತವಾಗಿರುವ ನಾಟಕ ಮಂದಿರಗಳ ಸಾಮಾನ್ಯ ವರ್ಣನೆಯನ್ನು ಅನುಸರಿಸಿಯೇ ಈ ನಾಟಕ ಮಂದಿರವಿದೆ.
ಕೆಲವು ವಿದ್ವಾಂಸರು ಸಂಸ್ಕೃತ ನಾಟಕದ ಉತ್ಸಾ೦ತಿ ಕಾಲವು ಐದನೆಯ ಶತಮಾನವೆಂದು ಅಭಿಪ್ರಾಯ ಪಟ್ಟರೂ ಕ್ರಿಸ್ತಪೂರ್ವ ಮೂರನೆಯ ಶತಮಾನದ ಹೊತ್ತಿಗೆ ಸಂಸ್ಕೃತ ನಾಟಕವು ಒಂದು ಸಂಪೂರ್ಣ ಸ್ವರೂಪವನ್ನು ತಾಳಿತ್ತೆಂದು ನಂಬಲಾಗಿದೆ, ನಮಗೆ ದೊರೆತಿರುವ ನಾಟಕಗಳಲ್ಲಿ ಪೂರ್ವದ ಕವಿಗಳ ಮತ್ತು ಇನ್ನೂ ದೊರೆಯದ ಅವರ ನಾಟಕಗಳ ಪ್ರಶಂಸೆ ಇದೆ. ಈಚಿನ ಅನೇಕ ನಾಟಕಕರ್ತರು ಸ್ಮರಿಸಿ ಗೌರವಿಸಿರುವ ಭಾಸಕವಿ ಅ೦ತಹ ಕವಿಗಳಲ್ಲೊಬ್ಬನಾಗಿದ್ದ, ಈ ಶತಮಾನದ ಆದಿಯಲ್ಲಿ ಅವನ ಹದಿಮೂರು ನಾಟಕಗಳು ದೊರೆತವು. ಪ್ರಾಯಶಃ ಅದುವರೆಗೆ ದೊರೆತಿರುವ ಸಂಸ್ಕೃತ ನಾಟಕಗಳಲ್ಲಿ ಅತಿ ಹಿಂದಿನವೆಂದರೆ ಕ್ರಿಸ್ತಾ ಬಿ ಯ ಸಮಿಾಪದಲ್ಲಿ ಅಥವ ಆದಿಭಾಗದಲ್ಲಿದ್ದ ಅಶ್ವಘೋಷನ ನಾಟಕಗಳು. ಇವು ತಾಳೆಯಗರಿಯ ಮೇಲೆ ಬರೆದ ಹಸ್ತ ಪ್ರತಿಯ ಚೂರುಗಳು ಮಾತ್ರ. ಗೋಬಿ ಮರುಭೂಮಿಯ ಅಂಚಿನಲ್ಲಿರುವ ತುರ್ಫಾನ್ ನಗರದಲ್ಲಿ ಅವು ಸಿಕ್ಕಿದ್ದು ಒಂದು ವಿಚಿತ್ರ, ಅಶ್ವಘೋಷನು ಒಬ್ಬ ಬೌದ್ದ ಸಾಧು, ಇಂಡಿಯ, ಚೀನಾ ಮತ್ತು ತಿಬೆಟ್ ದೇಶಗಳಲ್ಲಿ ಬಹುಕಾಲ ಜನಪ್ರಿಯವಾಗಿದ್ದು ಪ್ರಸಿದ್ದವಾಗಿದ್ದ : ಬುದ್ದ ಚರಿತ' ಎಂಬ ಜೀವನ ಚರಿತೆಯನ್ನು ಬರೆದಿದ್ದ. ಹಿಂದಿನ ಕಾಲದ ಚೀನೀ ಭಾಷಾಂತರ ಒಂದನ್ನು ಒಬ್ಬ ಭಾರತೀಯ ವಿದ್ವಾಂಸನು ಮಾಡಿದ್ದಾನೆ.
ಪ್ರಾಚೀನ ಭಾರತ ನಾಟಕಕಲೆಯ ಇತಿಹಾಸಕ್ಕೆ ಈ ಸಂಶೋಧನೆಗಳು ಹೊಸದೊಂದು ಯಥಾ ದೃಷ್ಟಿಯನ್ನು ಕೊಟ್ಟ ವೆ; ಪ್ರಾಯಶಃ ಹೊಸ ಶೋಧನೆಗಳು ಗಳಿಕೆಗಳು ಭಾರತೀಯ ಸಂಸ್ಕೃತಿಯ ಈ ಮನಮೋಹಕ ಬೆಳವಣಿಗೆಯ ಮೇಲೆ ಹೊಸ ಬೆಳಕನ್ನು ಬೀರಬಹುದು. ಏಕೆಂದರೆ ಸಿಲ್ವಿನ್ ಲೆವಿಯವರು ತಮ್ಮ ಭಾರತೀಯ ರ೦ಗಮ೦ಟಪ ಎಂಬ ಗ್ರಂಥದಲ್ಲಿ “ಈ ನಾಟಕಗಳಲ್ಲಿ ಮಾನವ ನಾಗರಿಕತೆಯ ಉದಯದ ಮಹಾ ವ್ಯಕ್ತಿತ್ವವು ಚಿತ್ರಿತವಾಗಿದೆ. ಉತ್ತಮ ಜೀವನದ ದೃಶ್ಯವನ್ನು ಅಲ್ಲಿ ಕಾಣುತ್ತೇವೆ. ಬಹಳ ಚಮತ್ಕಾರರೂಪದಲ್ಲಿ, ಗಂಭೀರ ಸಂಭಾಷಣೆಯಲ್ಲಿ, ರಸಘಟ್ಟಗಳಂತ ಈ ನಾಟಕಗಳನ್ನು ನೋಡುತ್ತೇವೆ. ಈ ನಾಟಕಗಳಲ್ಲಿ ಚಿತ್ರಿತವಾಗಿರುವ ಭಾರತೀಯ ಸಂಪ್ರದಾಯ ಗಳ, ಸಿದ್ಧಾಂತಗಳ ಮತ್ತು ಸಂಸ್ಥೆಗಳ ಸ್ವರೂಪದರ್ಶನದಿಂದ ಅಂದಿನ ಭಾರತೀಯ ಜೀವನದ ಅಮೂಲ್ಯ ಚಿತ್ರವನ್ನು ಈ ನಾಟಕಕಲೆಯಲ್ಲಿ ಚಿತ್ರ ವಿನ್ಯಾಸದಲ್ಲಿ ಕಾಣುತ್ತೇವೆ” ಎಂದು ಹೇಳಿದ್ದಾರೆ.
ಮೊಟ್ಟಮೊದಲು ಪುರಾತನ ಭಾರತೀಯ ನಾಟಕದ ವಿಷಯ ಯೂರೋಪಿಗೆ ಪರಿಚಯವಾದದ್ದು ೧೬೮೯ ರಲ್ಲಿ, ಸರ್ ವಿಲಿಯಂ ಜೋನ್ಸ್ನ ಕಾಳಿದಾಸನ ಶಾಕುಂತಲ ನಾಟಕದ ಅನುವಾದದಿಂದ. ಈ ಹೊಸ ಶೋಧನೆಯಿಂದ ಯೂರೋಪಿನ ಭಾರತೀಯ ವಿದ್ವಾಂಸರಲ್ಲಿ ಒಂದು ಹೊಸ ಕ್ರಾಂತಿಯ ಆಯಿತು. ಗ್ರಂಥದ ಮುದ್ರಣಗಳು ಒಂದರ ಹಿಂದೆ ಒಂದು ಬಂದವು. ಸರ್ ವಿಲಿಯಂ ಜೋನ್ಸನ ಇಂಗ್ಲಿಷ್ ಭಾಷಾಂತರದಿಂದ ಜರ್ಮ೯, ಫ್ರೆಂಚ್, ಡೇನಿಷ್‌ ಮತ್ತು ಇಟಾಲಿರ್ಯ ಭಾಷೆಗಳಲ್ಲಿ ಭಾಷಾಂತರಗಳು ಬಂದವು. ಈ ಅನುವಾದವನ್ನು ಓದಿದ ಗೈಟೆಯ ಮೇಲೆ ಅದ್ಭುತ ಪರಿಣಾಮವಾಯಿತು ; ಆತನು ಶಾಕುಂತಲ ನಾಟಕವನ್ನು ಮುಕ್ತ ಕಂಠದಿಂದ ಹೊಗಳಿದನು. ಸಂಸ್ಕೃತ ನಾಟಕದ ಸಾಮಾನ್ಯ ಸಂಪ್ರದಾಯದಂತೆ ಬರೆದ ಕಾಳಿದಾಸನ ಪ್ರಸ್ತಾವನೆಯನ್ನು ಓದಿ ಅದರಂತೆ ತನ್ನ ' ಫಾಸ್ಟ್ ' ಗ್ರಂಥಕ್ಕೆ ಸಹ ಪ್ರಸ್ತಾವನೆಯನ್ನು ಬರೆಯಬೇಕೆಂದು ನಿರ್ಧರಿಸಿದನಂತೆ.
ಸಂಸ್ಕೃತ ಸಾಹಿತ್ಯದಲ್ಲಿ ಕಾಳಿದಾಸನೇ ಮಹಾಕವಿ, ಶ್ರೇಷ್ಠ ನಾಟಕ ಕರ್ತ ಎಂದು ಎಲ್ಲರೂ