ಗ್ರೀಕರಂತೆ ಚೀನೀಯರು ಮತ್ತು ಅರಬ್ಬಿ ಜನರಂತೆ ಭಾರತೀಯರು ಹಿಂದಿನ ಕಾಲದಲ್ಲಿ ಚರಿತ್ರ ಕಾರರಾಗಿರಲಿಲ್ಲ, ಅದು ನಮ್ಮ ದುರದೃಷ್ಟ, ನಿಕರವಾಗಿ ಕಾಲವನ್ನಾಗಲಿ ವಂಶಪರಂಪರೆಯನ್ನಾಗಲಿ ನಮ್ಮಲ್ಲಿ ಕಂಡು ಹಿಡಿಯಲು ಸಾಧ್ಯವಿಲ್ಲ; ಒಂದರೊಳಗೊಂದರ ಘಟನೆಗಳ ಕಲಸುಮೇಲೋಗರ, ಒಂದರ ಮೇಲೊಂದರ ವ್ಯಾಪನೆ; ಎಲ್ಲವೂ ಬಂದು ದೊಡ್ಡ ಗೊಂದಲ, ಭಾರತೀಯ ಇತಿಹಾಸದ ಈ ಗೊಂಡಾ ರಣ್ಯದಿಂದ ಭಾರತೀಯ ಇತಿಹಾಸ ಸಂಶೋಧಕರು ಬಹು ತಾಳ್ಮೆಯಿಂದ ಈಚೀಚಿಗೆ ಕ್ರಮೇಣ ನಾಡನ್ನು ಕಾಣುತ್ತಿದ್ದಾರೆ. ಇತಿಹಾಸವೆನ್ನ ಬಹುಹಾದರೆ ೧೨ ನೆಯ ಶತಮಾನದಲ್ಲಿ ಕಲ್ಲಣನು ಬರೆದ ಕಾಶ್ಮೀರದೇಶದ ಚರಿತ್ರೆ - ರಾಜತರಂಗಿಣಿ ' ಒ೦ದೆ. ಉಳಿದುದಕ್ಕೆಲ್ಲ ಮಹಾಕಾರ್ಯಗಳ ಕಾಲ್ಪನಿಕ ಇತಿಹಾಸ ಮತ್ತು ಇತರ ಗ್ರಂಥಗಳು, ಆಗಿನ ಕಾಲದ ಕೆಲವು ಕಡತಗಳು, ಶಾಸನಗಳು, ಶಿಲ್ಪ ಮತ್ತು ಕಲಾಕೃತಿಗಳು, ನಾಣ್ಯಗಳು ಮತ್ತು ಸಂಸ್ಕೃತ ಸಾಹಿತ್ಯ ಭಂಡಾರದಲ್ಲಿ ಅಲ್ಲಲ್ಲಿ ಕಾಣುವ ಚಾರಿತ್ರಕ ವಿಷಯಗಳಿಗೇ ಹೋಗಬೇಕು. ಇವುಗಳಲ್ಲದೆ ಹಿಂದಿನ ಕಾಲದಲ್ಲಿ ಪ್ರವಾಸ ಬಂದ ಗ್ರೀಸ್ ಮತ್ತು ಚೀನಿ ಯಾತ್ರಿಕರು ಮತ್ತು ಈಚಿನ ಅರಬ್ಬಿ , ಪ್ರವಾಸಿಗಳು ಬರೆದಿರುವ ಅನೇಕ ಪ್ರವಾಸ ಸಾಹಿತ್ಯಗಳಿವೆ.
ಈ ಐತಿಹಾಸಿಕ ದೃಷ್ಟಿ ಯ ಅಭಾವ ಜನತೆಯ ಮೇಲೆ ಯಾವ ಪರಿಣಾಮವನ್ನೂ ಮಾಡಲಿಲ್ಲ. ಇತರ ದೇಶಗಳಂತೆ, ಏಕೆ ಅದಕ್ಕೂ ಹೆಚ್ಚಾಗಿ, ಭಾರತೀಯರು ತಲೆತಲಾಂತರದಿಂದ ಹರಿದು ಬಂದ ಜನಜನಿತ ಪ್ರತೀತಿಗಳಿಂದ, ಪುರಾಣಗಳಿಂದ, ಕತೆಗಳಿಂದ ತಮ್ಮ ಪುರಾತನ ಐತಿಹ್ಯವನ್ನು ರಚಿಸಿ ಕೊಂಡರು, ಈ ಕಾಲ್ಪನಿಕ ಇತಿಹಾಸ ಮತ್ತು ವಾಸ್ತವಿಕತೆ ಮತ್ತು ಕತೆಯ ಮಿಶ್ರಣವೇ ಎಲ್ಲರಲ್ಲೂ ಹರಡಿ ಜನತೆಗೆ ಒಂದು ಭದ್ರವೂ, ಶಾಶ್ವತವೂ ಆದ ಸಂಸ್ಕೃತಿಯ ಹಿನ್ನೆಲೆಯನ್ನು ಕೊಟ್ಟವು. ಆದರೆ ಐತಿಹಾಸಿಕ ದೃಷ್ಟಿಯನ್ನು ಅಲಕ್ಷ ಮಾಡಿದುದರಿಂದ ಆದ ದುಷ್ಪರಿಣಾಮ ಅಧಿಕವಾಗಿದೆ. ವಾಸ್ತವಿ ಕತೆಯ ಎದುರಿನಲ್ಲಿ ದೃಷ್ಟಿ ಕೋಣದ ಅಸ್ಪಷ್ಟತೆ, ಜೀವನದ ವಾಸ್ತವಿಕತೆಯಿಂದ ದೂರ ಇರುವಿಕೆ, ಮೂಢನಂಬಿಕೆ ಮತ್ತು ಮನಸ್ಸಿನ ಅಸ್ಥಿರತೆಗಳು ತಲೆದೋರಿದವು. ಆದರೆ ಅದೇ ಮನಸ್ಸು ಬಹು ಕಷ್ಟ ತಮವಾದ ಆದರೆ ಸ್ವಭಾವತಃ ಅಸ್ಪಷ್ಟವೂ ಅನಿರ್ದಿಷ್ಟವೂ ಆದ ದರ್ಶನ ಪ್ರಪಂಚದಲ್ಲಿ ಸ್ವಲ್ಪವೂ ಅಸ್ಪಷ್ಟತೆಯನ್ನು ಕಾಣಲಿಲ್ಲ. ಅಲ್ಲಿ ವಿಭಾಜಕವೂ ಆಗಿತ್ತು, ಸಂಯೋಜಕವೂ ಆಗಿತ್ತು ; ಅನೇಕವೇಳೆ ವಿಮರ್ಶಾತ್ಮಕವಿತ್ತು ಮತ್ತು ಸಂದೇಹಾತ್ಮಕವೂ ಇತ್ತು. ಆದರೆ ವಾಸ್ತವಿಕತೆಯನ್ನು ಅರಿತುಕೊಳ್ಳುವ ದರಲ್ಲಿ ಮಾತ್ರ ವಿಮರ್ಶಾರಹಿತವಾಗಿತ್ತು ; ಪ್ರಾಯಶಃ ವಾಸ್ತವಿಕತೆಗೆ ಪ್ರಾಮುಖ್ಯತೆ ಇಲ್ಲದುದೇ ಅದಕ್ಕೆ ಕಾರಣವಿರಬಹುದು,
ವಿಜ್ಞಾನ ಮತ್ತು ಆಧುನಿಕ ಪ್ರಪಂಚದ ಸಂಪರ್ಕದಿಂದ ಹೆಚ್ಚು ವಿಮರ್ಶಾತ್ಮಕ ದೃಷ್ಟಿ, ಸಾಕ್ಷಾಧಾರ ತೋಲನದೃಷ್ಟಿ, ಸಂಪ್ರದಾಯವೆಲ್ಲ ಸಂಪ್ರದಾಯವಾದ್ದರಿಂದಲೇ ಅನುಸರಣೀಯ ಯೋಗ್ಯವೆಂದು ಒಪ್ಪದ ತಿರಸ್ಕಾರ ದೃಷ್ಟಿ ಬೆಳೆದು ವಾಸ್ತವಿಕತೆಗೆ ಉತ್ತಮ ಬೆಲೆ ದೊರೆತಿದೆ. ಅನೇಕ ದಕ್ಷರಾದ ಚರಿತ್ರಕಾರರು ಕಾರ್ಯನಿರತರಾಗಿದ್ದಾರೆ. ಅವರು ತಪ್ಪು ಮಾಡಿದರೂ ವಾಸ್ತವಿಕತೆಯ ಪಕ್ಷಪಾತಿಗಳಾಗಿ ಮಾಡುತ್ತಾರೆ, ಅವರ ಕಾರ್ಯ ಜೀವಂತ ಚರಿತ್ರೆಗಿಂತ ಹೆಚ್ಚು ವಾಸ್ತವವಿದೆ. ಆದರೂ ಈಗಲೂ ಸಹ ಸಂಪ್ರದಾಯಗಳಿಗೆ ನಾವು ಏಕಾಏಕಿ ಹೇಗೆ ಶರಣು ಹೋಗುತ್ತೇವೆ ; ನಮ್ಮಲ್ಲಿ ತುಂಬ ಬುದ್ದಿ ಕುಶಲರು ಎನ್ನುವವರ ವಿಮರ್ಶಾತ್ಮಕ ದೃಷ್ಟಿ ಸಹ ಹೇಗೆ ಕುರುಡಾಗುತ್ತದೆ ಎನ್ನು ವು ದನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಪ್ರಾಯಶಃ ಇಂದಿನ ದಾಸ್ಯ ಜೀವನದಲ್ಲಿ ಕುದಿಯುವ ನಮ್ಮ ರಾಷ್ಟ್ರೀಯ ಭಾವನೆ ಅದಕ್ಕೆ ಕಾರಣವಿರಬಹುದು. ರಾಜಕೀಯ ಆರ್ಥಿಕ ಸ್ವಾತಂತ್ರ್ಯ ನಮಗೆ ದೊರೆತಾಗ ಮಾತ್ರ ನಮ್ಮ ಮನಸ್ಸು ಸಾಮಾನ್ಯ ರೀತಿಯಲ್ಲಿ, ವಿಮರ್ಶಾತ್ಮಕ ದೃಷ್ಟಿಯಿಂದ ಕೆಲಸ ಮಾಡಬಲ್ಲದು.
ಇತ್ತೀಚೆಗೆ ನಡೆದ ಒಂದು ಮುಖ್ಯ ಘಟನೆಯಿಂದ ವಿಮರ್ಶನ ದೃಷ್ಟಿ ಗೂ, ರಾಷ್ಟ್ರೀಯ ಶಿಷ್ಟಾ ಚಾರಕ್ಕೂ ಹೇಗೆ ಘರ್ಷಣೆ ಬರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ಭಾರತದ ಬಹುಭಾಗದಲ್ಲಿ