ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೦೮
ಭಾರತ ದರ್ಶನ

ನಂಬಿದ್ದಾರೆ” ಎಂದೂ ಬರೆದಿದ್ದಾನೆ. ಪ್ರಾಯಶಃ ಆಗಿನ ಜನರ ಮನೋಭಾವನೆಯ ನಿಜವಾದ ವರ್ಣನೆಯೇ ಇರಬೇಕು,

ರಾಜಕೀಯ ದೃಷ್ಟಿಯಿಂದ ಇಡೀ ಭಾರತದಲ್ಲಿ ಮಹಮ್ಮದನ ದಂಡಯಾತ್ರೆಗಳಿಂದ ಹೆಚ್ಚು ಹಾನಿಯಾಗದೆ ಭಾರತದ ನಡುಗಡ್ಡೆಯನ್ನು ಸಹ ಮುಟ್ಟಲು ಸಾಧ್ಯವಾಗದಿದ್ದರೂ ಇಂಡಿಯದ ಇತಿ ಹಾಸದಲ್ಲಿ ಮಹಮ್ಮದನ ದಂಡಯಾತ್ರೆಗಳು ಒಂದು ದೊಡ್ಡ ಘಟನೆ. ಉತ್ತರ ಹಿಂದೂಸ್ಥಾನದ ದೌರ್ಬಲ್ಯ ಮತ್ತು ಹೀನಸ್ಥಿತಿಯನ್ನು ಅದು ವ್ಯಕ್ತಗೊಳಿಸುತ್ತದೆ. ಉತ್ತರ ಮತ್ತು ಪಶ್ಚಿಮ ಭಾರತದ ಆಗಿನ ರಾಜಕೀಯ ಛಿದ್ರತೆಯ ಮೇಲೆ ಅಲ್ಪೆರುನಿಯು ಹೆಚ್ಚು ಬೆಳಕನ್ನು ಬೀರಿದ್ದಾನೆ. ಮೇಲಿಂದ ಮೇಲೆ ವಾಯವ್ಯದ ಗಡಿಯಿಂದ ಬಂದ ಈ ದಂಡಯಾತ್ರೆಗಳಿಂದ ಇಂಡಿಯದ ಕಾರ್ಪಣ್ಯ ಭಾವನೆ ಮತ್ತು ಆರ್ಥಿಕ ನೀತಿಯಲ್ಲಿ ಹೊಸ ಸಮಸ್ಯೆಗಳು ಉದ್ಭವಿಸಿದವು. ಕ್ರೂರ ಸೈನಿಕ ಧಾಳಿ ಮತ್ತು ವಿಜಯಯಾತ್ರೆಯ ಹಿಂದೆಯೇ ಇಸ್ಲಾಂ ಧರ್ಮದ ಪ್ರಥಮ ಪ್ರವೇಶವಾಯಿತು. ಇದುವರೆಗೆ ಮೂರು ನೂರು ವರ್ಷಗಳಿಂದ ಇಸ್ಲಾಂ ಶಾಂತರೀತಿಯಲ್ಲಿ ಒಂದು ಮತಧರ್ಮವಾಗಿ ಬಂದಿತ್ತು ಮತ್ತು ಇಂಡಿಯದಿಂದ ಅನೇಕ ಧರ್ಮಗಳ ಜೊತೆಯಲ್ಲಿ ಯಾವ ತೊಂದರೆ ಅಥವ ವಿರೋಧಕ್ಕೂ ಎಡೆಗೊಡದೆ ಅದೂ ಒಂದು ಧರ್ಮವಾಗಿತ್ತು. ಆದರೆ ಈ ನೂತನ ಮಾರ್ಗವು ಜನರಲ್ಲಿ ದೊಡ್ಡ ಮಾನಸಿಕ ಪರಿಣಾಮವನ್ನುಂಟುಮಾಡಿ ಜನರಲ್ಲೊಂದು ರಚ್ಚು ತುಂಬಿತ್ತು. ಹೊಸ ಧರ್ಮಕ್ಕೆ ಯಾವ ವಿರೋಧವೂ ಇರಲಿಲ್ಲ. ಆದರೆ ಬಲಾತ್ಕಾರದಿಂದ ಪ್ರವೇಶಮಾಡಿ ಅವರ ಜೀವನರೀತಿಗೆ ಅಡ್ಡ ಬರುವು ದನ್ನು ಜನರು ಪ್ರಬಲವಾಗಿ ವಿರೋಧಿಸಿದರು.

ಭಾರತದಲ್ಲಿ ಹಿಂದೂ ಧರ್ಮವು ಅನೇಕ ರೂಪಗಳಲ್ಲಿ ಅನೇಕ ವಿಧವಾಗಿ ಮುಖ್ಯ ಧರ್ಮ ವಾದರೂ ಇಂಡಿಯದಲ್ಲಿ ಅನೇಕ ಧರ್ಮಗಳಿದ್ದವು. ಬಹುಮಟ್ಟಿಗೆ ಅಳಿಸಿಹೋಗಿದ್ದ ಜೈನ ಧರ್ಮ, ಬೌದ್ಧ ಧರ್ಮಗಳಲ್ಲದೆ ಕ್ರೈಸ್ತ ಮತ್ತು ಹೀಬ್ರ ಧರ್ಮಗಳೂ ಆಚರಣೆಯಲ್ಲಿದ್ದವು. ಪ್ರಾಯಶಃ ಇವೆರಡೂ ಕ್ರಿಸ್ತಶಕೆಯ ಒಂದನೆಯ ಶತಮಾನದಲ್ಲಿ ಇಂಡಿಯಕ್ಕೆ ಬಂದು ನೆಲೆಸಿದ್ದವು. ದಕ್ಷಿಣ ಇಂಡಿಯದಲ್ಲಿ ಸಿರಿರ್ಯ ಕ್ರಿಶ್ಚಿಯನರೂ, ನೆಸ್ಟೋರಿಯನರೂ ಇದ್ದರು. ಇತರರಂತೆ ಅವರೂ ದೇಶದ ಅಂಗವಾಗಿದ್ದರು. ಇದರಂತೆ ಯಹೂದಿಗಳಿದ್ದರು. ಇರಾಣದಿಂದ ಏಳನೆಯ ಶತಮಾನದಲ್ಲೇ ಬಂದ ಜೋರಾಯನರೂ ಇದ್ದರು. ಅದೇ ರೀತಿ ಪಶ್ಚಿಮ ತೀರ ಮತ್ತು ವಾಯವ್ಯದಲ್ಲಿ ಅನೇಕ ಮುಸ್ಲಿಮರಿದ್ದರು.

ಮಹಮ್ಮದ್ ದೇಶವನ್ನು ಗೆಲ್ಲಲು ಬಂದನು. ಪಂಜಾಬ್ ಅವನ ರಾಜ್ಯದ ಕೊನೆಯ ಗಡಿ ಯಾಯಿತು. ಅವನು ಅಲ್ಲಿ ರಾಜ್ಯವನ್ನು ಕಟ್ಟಿದ ಮೇಲೆ ಸ್ವಲ್ಪ ಮಟ್ಟಿಗಾದರೂ ದೇಶದ ಜನರನ್ನು ಒಲಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ತನ್ನ ಹಿಂದಿನ ಕ್ರೌರ್ಯವನ್ನು ಸ್ವಲ್ಪ ಸೌಮ್ಯ ಮಾಡಲು ಯತ್ನ ಮಾಡಿದನು. ಹಿಂದೂಗಳ ಆಚಾರ ವ್ಯವಹಾರದಲ್ಲಿ ಪ್ರವೇಶ ಮಾಡುವುದನ್ನು ಕಡಮೆ ಮಾಡಿದನು. ಸೈನ್ಯದಲ್ಲಿ ಮತ್ತು ಆಡಳಿತ ವರ್ಗದಲ್ಲಿ ಹಿಂದೂಗಳಿಗೆ ಉನ್ನತ ಸ್ಥಾನಗಳನ್ನು ಕೊಟ್ಟನು. ಈ ನೀತಿಯು ಮೊದಲು ಆರಂಭವಾದದ್ದು ಮಹಮ್ಮದನ ಕಾಲದಲ್ಲಿ ; ಆದರೆ ಬೆಳೆದದ್ದು ಅನೇಕ ದಿನಗಳ ನಂತರ.

೧೦೩೦ ರಲ್ಲಿ ಮಹಮ್ಮದ್ ಕಾಲವಾದನು, ಅನಂತರ ಒಂದುನೂರ ಅರುವತ್ತು ವರ್ಷಗಳವರೆಗೆ ಭಾರತದ ಮೇಲೆ ಯಾವ ಮುತ್ತಿಗೆಯೂ ಆಗಲಿಲ್ಲ. ಪಂಜಾಬನ್ನು ದಾಟಿ ಯಾವ ತುರ್ಕಿಯ ರಾಜನೂ ಬರಲಿಲ್ಲ. ಷಹಬುದ್ದೀನ ಘೋರಿ ಎಂಬ ಆಫ್ಘನನು ಘಜ್ಜೆ ನಗರವನ್ನು ಹಿಡಿದು ಘಜ್ಞೆ ಸಂತತಿಯನ್ನು ನಾಶಮಾಡಿದನು. ಲಾಹೋರ್ ನಗರವನ್ನು ಆಕ್ರಮಿಸಿ ದೆಹಲಿಗೆ ಬಂದನು. ಆದರೆ ದೆಹಲಿಯ ದೊರೆಯಾದ ಪೃಥ್ವಿರಾಜ ಚೌಹನನು ಅವನನ್ನು ಸಂಪೂರ್ಣವಾಗಿ ಸೋಲಿಸಿದನು. ಸಹಬುದ್ದೀನ್‌ ಆಫ್ಘಾನಿಸ್ಥಾನಕ್ಕೆ ಹಿಂದಿರುಗಿ, ಒಂದು ವರ್ಷದ ನಂತರ ಪುನಃ ದಂಡೆತ್ತಿ ಬಂದನು. ಈ ಬಾರಿ ಜಯಶಾಲಿಯಾಗಿ ೧೧೯೨ ರಲ್ಲಿ ದೆಹಲಿ ಸಿಂಹಾಸನ ಏರಿದನು.