ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೧೭ ಬಂದುಬುಟ್ಟವನೆ. ಗುಡ್ಲು ವಳೀಕೆ ಬಂದೋನೆ ಬಂದ. ತಣಿಗೆ ಮಡಿಕ್ಕಂಡು ಕುಂತ. 'ಕಲ್ಯಾಣಿ' ಅಂತ ಗರ್ಜುಸ್ಥ, ಕಾದು ಕಾದು ಸುಸ್ತಾಗಿ ವಕ್ಕಡೆ ಮೂಲೆಗೆ ಬಿದ್ದಿದ್ದ ಅವ್ವ, ಮಯ್ಯ ಮುರುದು ಯೇಳ. “ರೋಜಿನ ಇದೇ ಕೊಳೆ ಪಂಚಾತಿ ಆಗೋಯ್ತು. ಒಂಜಿನ ಆದೂವೆ ಗ್ರಾಸ್ತರಂಗೆ ಬಂದು ವೊತ್ತಿಗೆ ಮುಂಚೆ ಉಂಡು ಮನಗಾನ ಅನ್ನಾ ಬುದ್ಯ ಕ್ಲಷ್ಟೇ ಇಲ್ವಲ್ಲ ಆ ದ್ಯಾವರು?” ಅಂದುಕೊತ್ತ ಬಂದು ಇಟ್ಟಿನ ಮುದ್ದ ಅಯ್ಯನ ತಣಿಗೆಗೆ ನೀಡಿದಳು. ಲಕ್ಕನೂ ಅಯ್ಯನ ಎದರಾಬದುರು ಉಣ್ಣಕ್ಕೆ ಕುಂತಿದ್ದ, ಅವ್ವನ ಮಾತು ಹಸಿಗಂಡು ಬಂದಿದ್ದ ಅಯ್ಯನ ಕಚ್ಚಿದಂಗಾಗಿ ಕ್ಯಾಣ ಇಸ ಏರಿದಂಗೆ ಅವನ ಮೊಖದಲ್ಲಿ ಮುಕ್ಕಳುಸ್ತು. “ಉದಕ ಯಾತರದ?-ಬಾಡಿನ ಎಸರ?” ಕ್ಯಾಳಿದ ಅಯ್ಯ, “ಊ, ಬಾಡಿನೆಸರ ರೋಜಿನ ಮಾಡಕ್ಕೆ ನೀನು ತಂದು ಮಡಗಿದ್ದೀಯಲ್ಲ ಗೆಖ್ಯ?... ಸಮ್ಮೆ ಉಣ್ಣು. ವಳುಗಿಲ್ಲ ಮಗಳ ದೊಗದಿಕ್ಕು ಅಂದ್ರೆ, ನಾ ಇನ್ಯಾವ ಬೂಮಂಡಲದಿಂದ ತಂದು ವದುಗಿಸ್ಲಿ? ಅನ್ತಾ ಅನ್ತಾ ಉಪ್ಪು ಸಾರ ತಂದು ನೀಡಿದ್ದು. ಇಟ್ಟಿನ ಮುದ್ದೆ ಮ್ಯಾಲೆ ಕಯ್ಯಾಡಿಸ್ತಿದ್ದ ಅಯ್ಯ, ಉಪ್ಪು ಸಾರ ಮರದ ಸೊಟಗದಿಂದ ಬುಡುವಾಗ ಬಕ್ಕಂಡಿದ್ದ ಅವ್ವನ ಕೆನ್ನೆಗೆ ಚಟ್ಟನೆ ಅಯ್ತು ಬೆಳ್ಳೂ ಮೂಡೊ ತರ ಬಡ್ಡ, “ಕೆಟ್ಟೆನೆಲ್ಲಷ್ಟೊ” – ಚಿರಿ, ಕುಕ್ಕನೆ ಕುಂತು, ಅವ್ವ ಎದೆ ಎದೆ ಬಡುಕುತ್ತ, “ನಾ ನಿನ್ನೆದುರೆ ಇರೆ ತಾನೆ ನಿಂಗೆ ಕ್ಯಾಣಸರ. ನಾ ಕಣ್ಮುಚ್ಚಿಗಂದ್ರೆ, ಆಗೇನ ಮಾಡೀ?... ಆಗ ನಿನ್ನ ಕ್ಯಾಣ ಒಂದೆ ಕುಂತು ಈ ಗುಡ್ಡು ನೆರಿಕೆ ಪಸೀಬೇಕು, ವೋಟೇಯ” ಅಂದೋಳೆ, ಜಟ್ಟನೆದ್ದು ಗುಡ್ಡು ಮಂಚೂರಿ ತಡಿಕೆ ಕದಾವ ತಳ್ಳಿ, ಕೆರೆ ದಿಕ್ಕ ನಡೀತಿದ್ದು. ತಾನೆದ್ದು ಮುಲುಕಾಡೊ ವೋಟಲ್ಲಿ, ಅಯ್ಯ ದಡನೆದ್ದ “ನಿಂತುಗಣೆ... ಕಲ್ಯಾಣಿ-ನಿಂತುಗಣೆ...” ಕೂಗ್ಯ, ಅವ್ವನ ಇಂದಿಂದೆ ಓಡ್ಡ, ತಾನು ಗುತ್ತು ಮುಂದಕೆ ಬಂದು ನಿಂತೋನು, ತಾನು ಅವರ ಹಿಂದೆ ವೋಗೋದೊ ಬ್ಯಾಡದೊ ಚಿಂತಿಸ್ತಾ ಇರೋನೂವೆ ಕೆರೆ ಓಣಿ ತಲೆಕೊಟ್ಟಲ್ಲೆ ಅವನ್ನ ಇಡುದು ನಿಲ್ಲುಸಿ, ದಮ್ಮಯ್ಯ ಅಂದು, ದತ್ತಯ್ಯ ಅಂದು, ನಾ ಇನ್ನು ಕ್ವಾಪ ಮಾಡಿಕಂಡ್ರೆ ನಿನ್ನ ಅಳೆ ಪಾಪಾಸ ತಕ್ಕಂಡು ಹೃಡಿ- ಅಂತ ಬೆಣ್ಣೆ ಮಾತಾಡಿ, ಅಯ್ಯ ಅವ್ವನ್ನ ಇಂದ್ರೆ ಕರಕೊಂಬಂದಿದ್ದ. &