ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨೬ ವೈಶಾಖ ಜನ ಸ್ವಾಡುತ್ತಲೆ ಇದ್ರಂತೆ. ಈಗ ಜ್ವರೀಕೆ ಬತ್ತಾನೆ, ಆಗ ಜ್ವರೀಕೆ ಬತ್ತಾನೆ ಅಂತ ಬೋ ವೊತ್ತಿಗಂಟ ಆಸೆ ಇಟ್ಟುಗಂಡೆ ನಿಂತಿದ್ರಂತೆ. ಆದ್ರೆ ಏಟೋತ್ಪಾದೂವೆ ಮ್ಯಾಕೆ ಅವನು ಬರದೇ ವೋದೆ ಮ್ಯಾಲೆ, ಗಂಗಮ್ಮ ತಾಯಿ ಅವನ್ನ ವಳೀಕೆ ಎಳಕಂಡ್ರು ಅಂತ ಖಾತ್ರಿ ಆಯ್ತಂತೆ! | ಆ ಕಿವಿಂದ ಈ ಕಿವಿಗೆ ಸುದ್ದಿ ಓಡಾಡಿ, ಮದ್ಯೆ ಅಟ್ಟಿಗೂವೆ ಸುದ್ದಿ ಮುಟ್ಟಿತಂತೆ. ತಕ್ಷಣ ಕೆಂಗನ್ನಪ್ಪ, ಅಮ್ಮ ನೆಂಟರುಯೆಲ್ಲಾರು ಓಡಾಡಿಕಂಡು ಮೊಲಿಸು ಟೇಸನ್ ಕಂಪ್ಲೇಂಟು ಕ್ವಡಾದರ ಸ್ವತ್ತತೆ, ನಮ್ಮಲ್ಲೂ ಒಬ್ಬ ಆಳ ಓಡಿಸಿದ್ರು... ಮಾರನೆ ಜಿನ, ನಮ್ಮ ಅತ್ತಿರದ ನೆಂಟರು ಇಸ್ಪರುಯೆಲ್ಲಾರು ಕರಕಂಡು ತಲಪೋದು ಏಳು ಮದ್ದಿನ್ನವೇ ಆಗಿತ್ತು. ಆವೊತ್ತೆಲ್ಲ ಸಂದೆವ ಉಡುಕಿದ್ದಲ್ಲಿ, ನಾನಾಗೂ ಲಾಟೀನು ಬೆಳುಕಿನಲ್ಲಿ ಹೊಳೆ ಉದ್ದಕೂ ಉಡುಕಿ ಉಡುಕಿ ಸಾಕಾಗೊಯ್ತು. ಅದರ ಮಾರನೆಗೆ ಸಿವನಸಮುದ್ರದಿಂದ ತಲಕಾಡ ವೋಲೀಸು ಟೇಸ ಸುದ್ದಿ ಬಂದಿತ್ತು. ನಮ್ಮ ಗೆಜ್ಜುಗಣ್ಣನ ದೇಯಾವ ಕಾವೇರಿ ಹೊಳೆ ನೀರು ಮಾಲಂಗಿ ಮಡುವಿನಿಂದ್ದೂ ವಳಗೇ ಉಲ್ಲಿಸಿಕಂಡೋಗಿ, ಸಿವನಸಮುದ್ರದ ಕಟಕಟೆಲಿ ಸಿಕ್ಕಾಕಿಸಿತ್ತು... ಇಲ್ಲಿ ಟೇಸನ್ನೋರು ನಮಗೆ ಇಸ್ಯ ತಿಳಿಸುದು, ಆ ಸುದ್ದಿ ವಂದಿಗುಟ್ಟೆ ನಾವಲೂವೆ ಸಿವನಸಮುದ್ರಕ್ಕೋಗಿ, ಪೊಲೀಸು ಮಾಜರು ಮುಗುದು ಅಣ್ಣನ ದೇಯವ ಅವರು ನಮಗೊಪ್ಪಿಸ್ಥ ಮ್ಯಾಲೆ, ಹೊಳೆ ತೀರದಲ್ಲೇಯ ಗುಂಡಿ ತಗುದು, ಅಮ್ಮ ಅಲ್ಲೆ 'ಒಪ್ಪ' ಮಾಡಾಯ್ತು... ಅವ್ವ ತನ್ನೆದೆ ಬಡಕತ್ತ, “ಹಯ್ಯೋ, ನನ್ನ ಕಂಡಂಗೆ ಇಂತಾ ಅಪಮುರ್ತ್ಯು ಕಾದಿತ್ತ... ಕಾವೇರಿ ತಾಯಿ, ಅವನ್ನ ನಿನ್ನೋಳೀಕೆ ತಕ್ಕಂಡು ತುರುಪ್ತಿ ಪಟ್ಯಾ?” ಗೋಳುಗರೀತಿದ್ರೂವೆ, ಅಯ್ಯನ ಕಣ್ಣಲ್ಲಿ ಒಂದು ತೊಟ್ಟುನೀರು ಬಂದಿರನಿಲ್ಲ.... ಅಯ್ಯ ಇಗ್ರದಂಗೆ ಕುಂತೇಇದ್ದ. ಯೆಸ್ಕೊ ವ್ಯಾಲ್ಯ ಕಳುದಮ್ಯಾಲೆ, “ನನ್ನ ಕಣ್ಣಲ್ಲಿ ಒಂದನಿ ನೀರಾದ್ರೂ ಸುರೀತಾ ಇಲ್ವಲ್ಲ-ಹಯ್ಯೋ, ಈ ಆಳುಗೇರಿ ಕಣ್ಣಾದ್ರು ಯಾಕಿರಬೇಕು-ಬಿರನೆ ಇಂಗೋಗಬಾರ?”- ಬೇಲುಗರೆದದ್ದು ಬೇಳುಗರೆದದ್ದೇಯ... ಅಣ್ಣನೆ ಇಲ್ಲದಿದ್ದ ಮ್ಯಾಲೆ, ಇನ್ನು ಅವನ ಲಗೃಕ್ಕೆ ಅಂತ ಕೆಂಗಣ್ಣಪ್ಪ ಆತ್ರ ಸಾಲ ಮಾಡ್ಡ ದುಡ್ಡಲ್ಲಿ ನುರು ರಾಪಾಯ ಬುಂಡಮ್ಮಾರಿಗೆ ಕ್ವಟ್ಟು ಮೊಧೇ ನನ್ನ ಜೀತ ಬುಡಿಸದ್ದಾಗಿತ್ತು. ಇನ್ನೊಂದು ನೂರು ರೂಪಾಯಿ ನಮ್ಮಣ್ಣನ ಸೊರ್ಗ ಸೇರುಸಕ್ಕೆ ಕರ್ಚಾಯ್ತು. ಬುಂಡಮಾರಿಗೆ ಅಣ ಇಂದಿರುಗಿದ್ದಾಗ, ಬುಂಡಮಾರದು ಒಂದೇ ವಾಕ್‌ಸ: