ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ಮಾರೆ ಬೆಳಿಗ್ಗೆ ನಾನು ಕಿಸ್ಥಸಾಸ್ತಿಗಳ ತ್ವಾಟಕ್ಕೆ ಕಂಬಳಕ್ಕೊಗಿದ್ದೆ.... ಬುಂಡಮ್ಮಾರ ಅಟ್ಟಿ ಜೀತ ತಪ್ಪಿದ ಜಿನದಿಂದ್ಲವೆ ನಾನು ಸಾಸ್ತಿಗಳ ತ್ಯಾಟಕೇ ಇಸೇಸ್ವಾಗಿ ಕೂಲಿಕಂಬಳಕ್ಕೆ ವೋಯ್ತಿದ್ದದ್ದು. ಸಾಸ್ತಿಗಳೂವೆ, ನಾನು ಕೆಲಸದಲ್ಲಿ ತೋರಿದ್ದ ಮುತುವರ್ಜಿ ಕಂಡು ತಾಟಕೆ ಬಂದೋರನ ಸಂಗಾಟ "ಈ ಹೈದ್ರ ಕೆಲ್ಸ ನಂಗೆ ತುಂಬಾ ಇಡುಸ್ತು... ದಾನ ಧಡಿಯರೂ ಇವನ ಸಮ ಕೆಲ್ಪ ಮಾಡನಾರು”- ಅಂತ ಯೋಳಿ, ನನ್ನ ಮೆಚ್ಚಿಗಂಡಿದ್ರು... ಅವೊತ್ತು ಕೆಲ್ಸಕ್ಕೆ ಬತ್ತೀನಿ ಅಂದಿದ್ದ ಕೂಲಿ ಆಳುಗಳು, ಬ್ಯಾರೆ ತಾವು ಕಂಬಳಕೋಗಿ ಸಾಸ್ತಿಗಳೆ ಗಸ್ತು ಕಟ್ಟಿದ್ರು, ಆಗ ತ್ವಾಟದಲ್ಲಿ ಸಾಸ್ತಿಗಳು ನಾನು ಏಡು ಆಳೇಯ. ಅವೋತ್ತೆ ಮೂರು ವರುಸಕೆ ಅತ್ತತ್ರ ಬೆಳುದ ಈಳ್ಯದೆಲೆ ಹಂಬ, ಅಡಿಕೆಮರದ ಕೆಳುಗೆ ಗುಂಡಿ ತೋಡಿ, ಅದರೊಳೀಕೆ ಆಕಬೇಕು ಅನ್ಮಾದು ಸಾಸ್ತಿಗಳ ಇರಾದೆ... ಮನಸ್ಸಿಗೆ ಬಂದ ಯೇನೇ ತೊಂಟಿ ಬಂದರೂವೆ ಮಾಡೇ ಮುಗಸೀನಿ ಅನ್ನಾ ಸೋಬಾವ ಅವರದ್ದು!... “ಈ ಅಡಿಕೆಮರದ ಬೊಡ್ಡೆ ಗುಂಡಿ ತೋಡ್ತೀಯೇನ್ದ?” ಕ್ಯಾಳಿದ್ರು. “ಆಗ್ಲಿ” ಅಂದಿದ್ದೆ ನಾನು. “ಹಂಗಾರೆ ಅಡಿಕೆಮರದಿಂದ ಹಂಬ ನಾನಿಳುಸ್ತೀನಿ. ನೀನು ಒಂದಡಿ ಆಳಕೆ ಗುಂಡಿ ತೋಡು ಮತ್ತೆ” ಅಂದ್ರು. “ನಾನು ಹಲ್ಲೆಕರ ಆಗಿ ಓಡಾಡ, ಗುದ್ದಿ ಹಾರೆ ತಕ್ಕಂಬಂದು ಗುಂಡಿ ಅಗೆಯಕ್ಕೆ ಸುರುಮಾಡ್ಡೆ, ಸಾಸ್ತಿಗೊಳು-ನನ್ನೊಂದಿಗೆ ಅಂದಂಗೆ ಬಿದಿರೇಣೆ ತಂದು ಹಂಬ ಇಳುಸೆ- ಇನ್ನೊಂದು ಅಡಿಕೆಮರದ ಅಡೀಲಿ ತಾವೋವೆ ಗುಂಡ ತಗಿಯಕ್ಕೆ ಮುಟ್ಟುಗಂಡು... ನಾವು ಏಡಾಳು ಸೇರಿ ಏಳೆಂಟು ಗುಂಡಿ ತಗುದಾಗಿತ್ತು. ಸಾಸ್ತಿಗಳು ನನ್ನ ಕರುದು, “ಲಕ್ಕ, ಬಾರೋ ಇಲ್ಲಿ, ಆ ಬಿದಿರೇಣಿ ತಲ್ಲಿಕಂಡು ಬರಾವ” ಅಂದಿದ್ರು. ಏಡು ಆಳೂವೆ ಕಯಾಕಿ ವೋಟು ದೂರದಲ್ಲಿದ್ದ ಬಿದಿರೇಣಿಯ ನೂಕ್ತ ನೂಕ್ತ ಅವರು ಯೋಳ ಜಾಕ್ಕೆ ತಂದೆ. ಸುಮಾರು ಇಪ್ಪತ್ತು ಇಪ್ಪತ್ತೈದು ಅಡಿ ಎತ್ತರ ಇತ್ತು ಆ ಬಿದಿರೇಣಿ. ಅದ್ರ ಇಂದ್ರೆ ತಿಕಡಿ ಕಾಲು. ಆ ಬಿದಿರೇಣಿಗೆ ಒಂದೊಂದು ಮೊಳ ಅಂತಕ್ಕೆ ಒಂದೊಂದು ಕಾಲು. ಅದರ ಮ್ಯಾಕ್ಕೆ ಸರಸರ ಏರೋದ ಸಾಸ್ತಿಗೋಳು ಬಲಿತಿದ್ದ ಹಂಬ ಇಳುಕಿದಾಗ, ಅಸುರು ಹಂಬು ಜಾರದಂಗೆ, ಬಾಳೆ ನಾರಿಂದ ಅರ್ದಡೀಗೆ ಒಂದು ಕಟ್ಟು, ಇನ್ನೊಂದೆರ್ದ