ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೬ ವೈಶಾಖ ಎನ್ನುವಷ್ಟರಲ್ಲಿ ಅವಳ ಹಿಂದೆ ದೂರದಲ್ಲಿ ಹಿಂಬಾಲಿಸಿ ಬರುತ್ತಿದ್ದ ಲಕ್ಷ್ಯ “ರುಕ್ಕೂ... ರುಕ್ಕೂ...” ಎಂದು ಕೂಗುತ್ತ ಬಂದು ರುಕ್ಕಿಣಿಯ ತರ್ನಯತೆಯನ್ನು ಕದಡಿದಳು. ಇನ್ನು ಅಲ್ಲಿ ನಿಂತು ಸಫಲವಿಲ್ಲವೆಂದು ರುಕ್ಕಿಣಿ ಅಲ್ಲಿಂದ ಮುಂದೆ ಅಡಿಯಿಡುತ್ತ. - “ಯಾಕೆ ಲಕ್ಷಮ್ಮನೋರೆ, ಏನು ಸಮಾಚಾರ?” ಎಂದು ಪ್ರಶ್ನಿಸುವಾಗ ಬೇಸರ ತುಳುಕಿತ್ತು. ಲಕ್ಷ್ಮಮ್ಮ ಏದುತ್ತ ಬಂದವಳು. “ಏನಿಲ್ಲ ರುಕ್ಕು, ನಮ್ಮ ಮನೇಲಿ ಅವಲಕ್ಕೆ ಮುಗಿದಿತ್ತು. ಸೀತಾಲಕ್ಷ್ಮೀನ ಕೇಳೋಣಾಂತ ಬಂದೆ. ಆದರೆ ಪಗಡೆ ಆಟದಲ್ಲಿ ಅವಳು ಮುನಿಸಿಕೊಂಡು ಎದ್ದು ಹೋದಾಗ, ಅವಳನ್ನ ಕೇಳೋದಾದರೂ ಹೇಗೆ?- ನೀನೇ ಹೇಳು?... ಅವಳೇನೋ ಕೇಳಿದರೆ ಯಾವುತ್ತೂ ಇಲ್ಲ ಅನ್ನುವ ಹೆಂಗಸಲ್ಲ. ಅಲ್ಲದೀರ ನಾನೇನು ಯಾರನ್ನೂ ಬಿಟ್ಟಿ ಕೊಡಿ ಎಂದು ಕೇಳವಲ್ಲವಲ್ಲ!- ಕಡ ಈಸಿಕೊಳ್ತಿನಿ. ವಾಯಿದೆಗೆ ಸರಿಯಾಗಿ ಹಿಂದುರುಗಿಸಿಬಿಡ್ತೀನಿ” ಎಂದರೆ ರುಕ್ಕಿಣಿಗೆ. “ಮಹಾರಾಯಿತಿ, ನನ್ನಿಂದ ಸಾಲಾಗಿ ಪಡೆದ ಎಷ್ಟು ಪದಾರ್ಥಗಳನ್ನ ವಾಪಸು ಕೊಟ್ಟಿದ್ದೀರಿ?” ಎಂದು ಕೇಳಬೇಕೆನ್ನಿಸಿ, ಮರುಕ್ಷಣವೆ, 'ಇಂಥ ಭಂಡ ಸಂಗಡ ವಾದ ಮಾಡುವುದು ಮೂರ್ಖತನದ ಪರಮಾವಧಿ' ಎಂದುಕೊಳ್ಳುತ್ತ ಸಾಗುತ್ತಿರುವಂತೆ, “ರುಕ್ಕು, ನಿನ್ನಲ್ಲಿದ್ದರೆ- ಒಂದು ಅಚ್ಚೇರು ಕೊಟ್ಟಿರು, ನಾಳೆ ನಾಳಿದ್ದರಲ್ಲಿ ವಾಪಸು ಮಾಡ್ತೀನಿ” ಎಂದು ಕೇಳೇಬಿಟ್ಟಳು! ಲಕ್ಷ ಮ್ಯನ ಸ್ವಭಾವವೇ ಹಾಗೆ, ಕೇಳುವಾಗ ತನಗೆ ಅಗತ್ಯವಾದುದಕ್ಕಿನ್ನ ಹೆಚ್ಚಾಗಿ ಕೇಳಿಬಿಡುವುದು. ಕೊಡುವವರು ಅದರ ಅರ್ಧಷ್ಟನ್ನಾದರೂ ಕೊಡುವುದಿಲ್ಲವೆ?- ಎನ್ನುವ ಲೆಕ್ಕಾಚಾರ! ರುಕ್ಕಿಣಿಯು ಒಳಗೇ ನಕ್ಕಳು. “ಅಕ್ಟೇರಿನಷ್ಟು ಇರಲಾರದು. ಇರುವಷ್ಟನ್ನು ಕೊಡ್ತೀನಿ, ಬನ್ನಿ.” “ಇನ್ನೇನು ಮಾಡುವುದು?- ಲಭ್ಯ ಇದ್ದಷ್ಟು... ಹುಂ, ಹಾಗೇ ಮಾಡು” ಎನ್ನುತ್ತ ರುಕ್ಕಿಣಿಯನ್ನು ಹಿಂಬಾಲಿಸಿದಳು ಲಕ್ಷ್ಮಮ್ಮ. ಮನೆ ಸೇರುತ್ತಲೂ, ಒಂದು ಪಾವು ಅವಲಕ್ಕಿಯನ್ನು ತಂದಿತ್ತು, “ನಾಳೆ, ತಪ್ಪಿದರೆ ನಾಳಿದ್ದು ತಂದುಕೊಡ್ತೀರಿ ತಾನೆ?” ತಾತ್ಸಾರದಿಂದಲೇ ಕೇಳಿದಳು. “ಓ, ಭೇಷಕ್ಕಾಗಿ ನಾಳೆ ಬೃಹಸ್ಪತಿವಾರ ಅಲ್ಲವೆ? ಸಂತೆಯಿಂದ ತರಿಸಿ,