ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೫೫ ತಲೆ ತುಂಬ ಕಯ್ಯಣ್ಣ, ಅಣೆಗೆ ಪಾವಲಿ ಅಗಲಕೆ ಕುಂಕುಮ ಇಡುದವಳೆ ಈ ಚಮಾಚಾರನೆಲ್ಲಾ ಅಯ್ಯನ ಬೆಂಟಿ ಬೆಂಟಿ ವಸಿವಸ್ಕಾಗಿ ಲಕ್ಕ ಜಮಾಯಿಸಿದ್ದ. ಆ ಪಡಖತೆ ವಳುಗಡೆ ಜಮಾಯಿಸಿರೊ ಅತ್ತಾರು ಮಂದೀಲಿ ಸುತ್ತಾಮುತ್ನ ಊರೋರೆ ಜಾಸ್ತಿ, ಆ ಕುಡಿಯೊರ ಗುಂಡ್ನಲ್ಲಿ ನಾಕಾರು ಎಂಗಸರೂ ಇದ್ದರು. ವಸಿ ಜನ ಸ್ವಾರೆ ಬುಂಡೆ, ಸಣ್ಣ ಸಣ್ಣ ಗಡಿಗೇಲಿ ತುಂಬಿಸಿಕಿದೆ, ಇನೊಸಿ ಜನ ಮುತ್ತುಗದ ಎಲೇಲಿ ಹಿರಿಬಾಡು, ಚಾಪೀಸು, ಬೇಯಿದ ಮೊಟ್ಟೆ-ಇವ ಅಕಿಸಿಕತ್ತಿದ್ದು, ಇವು ತಿಂದು ಎಸ್ ಮೂಳೆ ಚೂರುಗಳ ನಾಯಿಗಳು ಬೊಗಳ ಒಂದರ ಮ್ಯಾಲೊಂದು ಬಿದ್ದು ಕಚ್ಚಾಡಿ ತಿಂತಿದ್ದೊ... “ನೀವಿಟ್ಟಿರಾ ಲಾಟೀನ ಬೆಳಕು ಯಾತಯಾರಕು ಸಾಲು. ಇನ್ನೊಂದು ಏಡು ಲಾಟೀನ ತಂದಿಡಪ್ರೊ” ಅಂತ ರಾಚನಿಗೆ ತೂರಾಡ್ಡ ಯೋಳ ಚೆಳ್ಳೆ ಒಂದು ಎಂಗಸಿನ ತಾವಿಕೋಗಿ “ತಕ್ಕ, ಕುಡಿಯಮ್ಮಿ” ಅಂದು ಎಡತಿಗೂ ಮಿಂಡಗಾತಿಗೊ ಸಣ್ಣ ಗಡಿಗೆ ತುಂಬ ಎಂಡ ನೀಡುದ್ದೆ ತಡ, ಅವುಳು ಅಮ್ಮ ಒಂದೇ ಸಲಕೆ ಗಟಗಟ್ಟೆ ಈರಿಬುಟ್ಟು... ಅಯ್ಯ ಸಿನೇಮಿತಗಾರ ಜ್ವತೇಲಿ ಹಕಳೆ ವೊಡೀತ ರಾಚ ಸ್ವಾರೆ ಬುಂಡೇಲಿ ವೊಗದು ಕ್ಲಟ್ಟ ಎಂಡವ ಸೊಲ್ಪಸೊಲ್ಪಾಗಿ ಹೀರ, ಒಂದಾಣೆ ಅವನಕ್ಕೆ ಹಸಿ ಮುತ್ತುಗದೆಲೇಲಿ ಆಕ್ಕೊಟ್ಟ ಹುರಿಬಾಡ ನೆಂಜಕತ್ತ, “ನೀನೂ ಒಂದೇಟು ರುತಿ ಕ್ವಾಡ್ತೀಯೇನ್ನ, ಮೊಗ?” ಅಂತ ಲಕ್ಕನ್ನ ಕೇಳ. ಎಂಡದ ದುರ್ವಾಸಣದ ಸೈಸನಾಗ್ಗೆ ಮೂಗು ಮುಚ್ಚುತ್ತಿದ್ದ ಲಕ್ಕ “ವಲ್ಲೆ, ವಲ್ಲೆ” ಅಂತಿದ್ದಂಗೆ “ವೋಗ್ಲಿ, ವಸಿ ಹುರಿಬಾಟ್ನಾರೂ ತಿನ್ನು” ಅಂದು, ಅಯ್ಯ ಆರು ಕಾಸಿಗೆ ಹುರಿಬಾಡ ತಗುದು ಕಟ್ಟಿದ್ದ. ಲಕ್ಕ ಆದ ಬಾಯಿಗೆ ಅಕ್ಕ ಇರೋನೂವೆ, ಮಾರಿಗುಡಿ ಅಣ್ಣನೀರು ಆಗ್ಗೆ ಕುಡುದು ಮುಗಿಸಿ, ಸ್ವಾರೆ ಬುಂಡೆಗಳ ತುಂಬ ಪುನಾ ಎಂಡ ಸುರುಸ್ಕಂಡು ಊರ ದಿಕ್ಕೆ ವೊಂಟಿದ್ದರು... ಸೇಂದಿ ಮನೇಲಿ ಗುಲ್ಲೋ ಗುಲ್ಲು. ಒಬ್ಬರಿಗೊಬ್ರು ವಾಗ್ವಾದ ಮಾಡಾದೇನು! ಯಾವದೊ ಚಿಲ್ಲರೆ ಮಾತ ತಕ್ಕಂಡು ಕದ್ದ ಮಾಡಾದೇನು! ಗಮ್ಮಂದ ಪದ ಯೋಳಾದೇನು!... ಅದರಲ್ಲೂ ಒಬ್ಬ ಯೋಳ್ತಿದ್ದ ಪದ ಲಕ್ಕಂಗೆ ಇನ್ನೂ ಗ್ಯಾಪಕ, ಅದ ಯೋಳ್ತಿದ್ದೋನು ಚೊಳ್ಳೆಯೇ ಇರಬೈದು!ಗಟ್ಯಾಗಿ ಪಕ್ಕದಾಗೆ ಇದ್ದ ಅಮ್ಮಿ ತೊಡೆ ತಟ್ಟಿಕೊಂಡು ಯೋಳಿದ್ದ: ಹಳ್ಳಿವಾಸ | ನಾನೂ ಸಂತೋಸ