ದಲ್ಲಿ ಅಲ್ಲೋಲಕಲ್ಲೋಲವನ್ನೂ, ರಾಜಕೀಯ ವಿಪ್ಲವಗಳನ್ನೂ ಉಂಟುಮಾ
ಡಿವೆ. ಸಮಾಜವನ್ನು ಅವ್ಯವಸ್ಥೆಯಿಂದ ಪಾರುಮಾಡುವುದು ವಿಚಾರವೇತ್ತರ
ಮುಖ್ಯ ಕರ್ತವ್ಯವಾಯಿತು. ಯಾವ ವಿಧವಾದ ಕಲಹ ವೈಷಮ್ಯವಿಲ್ಲದ
ಸಮಾಜ ವ್ಯವಸ್ಥೆಯ ಬಗ್ಗೆ ಚಿಂತನೆ ನಡೆದು ಅಂತಹ ಸಮಾಜವ್ಯವಸ್ಥೆ
ಅತ್ಯಂತ ಪ್ರಾಚೀನ ಕಾಲದಲ್ಲಿ ಇತ್ತೆಂಬ ಭಾವನೆ ಬೇರೂರಿತು. ಪ್ರಾಚೀನ
ಕಾಲವನ್ನು ಸ್ವರ್ಣಯುಗದ ಕಾಲವೆಂದು ಕರೆದರು. ಸ್ವರ್ಣಯುಗದ
ಕಾಲದಲ್ಲಿ ಸುವ್ಯವಸ್ಥಿತ ಸಮಾಜವೂ ಸುಖಶಾಂತಿಗಳೂ ಇದ್ದವೆಂದು ನೆನೆದು
ಕೊಂಡರು. ಸುಖಶಾಂತಿಗಳಿಂದ ಕೂಡಿದ ಸುವ್ಯವಸ್ಥಿತ ಸಮಾಜ
ವೊಂದರ ದರ್ಶನಕ್ಕಾಗಿ ಹಂಬಲಿಸಿದರು. ಇಂತಹ ಆದರ್ಶಸಮಾಜದ
ರಚನೆಗೆ ಸಿದ್ಧರಾದವರಲ್ಲಿ ಗ್ರೀಸ್ ದೇಶದ ರಾಜಕಾರಣಿ ಮತ್ತು ತತ್ತ್ವ
ವೇತನಾದ ಪ್ಲೇಟೋ ಎಂಬುವನು ಬಹು ಮುಖ್ಯನಾದವನು.
ಪ್ಲೇಟೋ ತಾನು ವಾಸಿಸುತ್ತಿದ್ದ ಆಥೆನ್ಸ್ ನಗರದ ರಾಜಕೀಯ
ವೈಪರೀತ್ಯ ಕಲಹ ಮತ್ತು ದೊಂಬಿಗಳನ್ನು ನೋಡಿ ಸರಿಪಡಿಸಲೋಸುಗ
ಆದರ್ಶರಾಜ್ಯದ ಚಿತ್ರವೊಂದನ್ನು
“ ರಿಪಬ್ಲಿಕ್ ”ಎಂಬ ಗ್ರಂಥದಲ್ಲಿ ಚಿತ್ರಿಸಿ
ದನು. ರಾಜ್ಯವನ್ನು ಉತ್ತಮ ಸ್ಥಿತಿಯಲ್ಲಿಡಬೇಕಾದರೆ ತತ್ತ್ವವೇತ್ತರಾದ
ಆಳುವ ವರ್ಗದಿಂದ (Philosopher Kings) ಮಾತ್ರ ಸಾಧ್ಯವೆಂದು
______________
(1) ಭಾರತದಲ್ಲಿ ಸ್ವರ್ಣಯುಗದ ಭಾವನೆ : ಕಾಮರಾಜ್ಯ' ದ ನೆನಪಿನ
ರೂಪವನ್ನು ತಾಳಿದೆ, ಭಾರತವು ಸ್ವಾತಂತ್ರ್ಯ ಗಳಿಸಿದ ನಂತರ ರಾಮರಾಜ್ಯ
ದೋಪಾದಿಯ ಸಮಾಜ ವ್ಯವಸ್ಥೆಯನ್ನು ಸ್ಥಾಪಿಸುವುದು ಹಲವು ರಾಜಕೀಯ
ಪಕ್ಷಗಳ ಹೆಗ್ಗುರಿಯಾಗಿದೆ. ರಾಮರಾಜ್ಯದೊ ಹಾದಿಯ ಸಮಾಜ ವ್ಯವಸ್ಥೆಯ
ಸ್ಥಾಪನೆಗಾಗಿ ಗಾಂಧೀಜಿ ಅವರು ಪ್ರಥಮವಾಗಿ ಕರೆ ಕೊಟ್ಟರು. 'ರಾಮರಾಜ್ಯ'
ದಲ್ಲಿ ಸುಖ ಶಾಂತಿಗಳು ಇದ್ದವೆಂದು ವಿವರಣೆ ಇದೆಯೇ ಹೊರತು ಆ ಕಾಲದಲ್ಲಿ
ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಹೇಗಿಂಬುದರ ಬಗ್ಗೆ
ವಿವರಣೆಯಿಲ್ಲ, ಅಂದಿನ ವ್ಯವಸ್ಥೆಯ ಮೂಲಕ ಸುಖ ಶಾಂತಿಗಳು ಸಾಧ್ಯ
ನೆನ್ನು ವುದಾದರೆ ಇಂದಿನ ವ್ಯವಸ್ಥೆಯನ್ನು
ಅಳಿಸಿ ಹಿಂದಿನ ವ್ಯವಸ್ಥೆಯನ್ನು ತರಬೇಕೇ ಅಥವ ಆಧುನಿಕ ವ್ಯವಸ್ಥೆಯಂತೆ
ರಾಮರಾಜ್ಯದ ವ್ಯವಸ್ಥೆಯಂತೆ ಮಾಡಬೇಕೇ ಎಂಬುದರ ವಿಚಾರವಾಗಿ ವಿವರಣೆ ಯಿಲ್ಲ, ಯಾವ ಮಾರ್ಪಾಡು
ಗಳು ಆಗಬೇಕಾಗಿದೆ. ಕೇವಲ ಧಾರ್ಮಿಕ ಪರಿವರ್ತನೆ ಯ ಅಥವ ವ್ಯವಸ್ಥೆ
ಯಲ್ಲೂ ಪರಿವರ್ತನೆಯ-ಎಂಬುದರ ಬಗ್ಗೆ ಖಚಿತವಾದ ವಿವರಣೆಯಿಲ್ಲ.
ಎಲ್ಲವೂ ಭಾವನಾ ಮತ್ತು ಕಾಲ್ಪನಿಕ ಪ್ರಪಂಚವಾಗಿದೆ.