ವಿಷಯಕ್ಕೆ ಹೋಗು

ಪುಟ:ಕನ್ನಡ ರಾಮಾಯಣ ಕಿಷ್ಕಿಂಧಾಕಾಂಡ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ, ಯನ್ನು ಕರೆದುಕೊಂಡು ಬರುವನು ; ಮಹತ್ತಾದ ಏಳು ವರಗಳನ್ನು ಒಂದೇ ಬಾಣದಿಂದ ಹರಿಯುಲೆಚ್ಚಿದ ಆ ಮಹಾತ್ಮನಿಗೆ ಮತ್ತೊಬ್ಬರ ಸಹಾಯ ದಿಂದ ಆಗುವ ಕಾರವೇನು ! ಆತನ ಬಿಲ್ಲನಾರಿಯ ಜವಡೇ ಧ್ವನಿಯಿಂದಲೇ ಸಮಸ್ತ ಪರ್ವತಸಹಿತವಾದ ಭೂಮಿಯು ನಡುಗುವದು ; ಆತನಿಗೆ ನನ್ನ ಸಹಾಯದಿಂದ ಆಗುವ ಕಾರೈವೇನು ! ಸಮಸ್ತ ಬಲಸಹಿತನಾದ ರಾವಣನನ್ನು ಸಂಹಾರಮಾಡುವದಕ್ಕೆ ಹೋಗುವ ಶ್ರೀರಾಮನ ಹಿಂದೆ ಹೋಗಿ ನಾನು ಆತನ ಕಾರಕ್ಕೆ ಸಹಾಯವಾದೆನೆಂಬ ಮಹಾ ಕೀರ್ತಿಯನ್ನು ಪಡೆಯುವೆನು ! ಎಲೈ ಲಕ್ಷಣ, ನಿನ್ನ ಉಾಳಗದವ ನಾದ ನನ್ನ ಅಪರಾಧವನ್ನು ಸಹಿಸು ; ಲೋಕದಲ್ಲಿ ಅಪರಾಧವಾಡದ ಸೇವಕರಾರು ! ” ಎಂದು ನುಡಿದನು. ಆ ಮಾತನ್ನು ಕೇಳಿ ಲಕ್ಷಣನು ಅತಿ ಹರ್ಷಬಟ್ಟು ಪ್ರೀತಿಯಿಂದ ಸುಗ್ರೀವನನ್ನು ಕುರಿತು ಎಲೈ ಸು ಗ್ರೀವನೆ, ನನ್ನ ಅಣ್ಣನಾದ ಶ್ರೀರಾಮನು ಇದು ಪರ್ಯಂತರ ಒಡೆಯನಿಲ್ಲದವನಾಗಿದ್ದು ಅತ್ಯಂತ ವಿನಯಗುಣಸಂದ ನ್ನನಾದ ನಿನ್ನೊಡನೆ ಸ್ನೇಹವನ್ನು ಮಾಡಿಕೊಂಡು ಈಗ ಒಡೆಯನುಳ್ಳವನಾದನು ! ಎಲೈ ಸುಗ್ರೀವನೆ, ನಿನ್ನ ಸತ್ಯ ಈ ವಹಿವ.ಗೂ ಸರಿಯುಂಟೆ ! ನೀನು ಕಪಿರಜಾಧಿಪತ್ಯಕ್ಕೆ ಯೋಗ್ಯನು ; ನೀನು ಹೇಳಿದ ಮಾತುಗಳೆಲ್ಲವು ಸತ್ಯವಾದವು ; ತನ್ನನ್ನು ತಾನೇ ಕೊಂಡಾಡಿಕೊಂಡರೆ ದೋಷವೆಂಬದು ಪರಾಕ್ರಮವಿಲ್ಲದ ಹೇಡಿಗೆ ಸಲ್ಲುವದಲ್ಲದೆ ನಿನ್ನಂಥಾ ಪರಾಕ್ರಮಿಗೆ ಸಲ್ಲದು ; ಈ ಲೋಕದಲ್ಲಿ ನೀನೊಬ್ಬನೇ ಶ್ರೀರಾಮನ ಪರಾಕ್ರಮಕ್ಕೂ ಬಲಕ್ಕೂ ಸಮಾ ನವಾದವನಲ್ಲದೆ ಮತ್ಯಾರುಂಟು ! ದೈವಗತಿಯಿಂದ ನನಗೆ ನಿನ್ನ ಮಿತಕವು ದೊರೆಕಿ ಸಹಾಯವುಂಟಾಯಿತು ; ಇನ್ನು ನೀನು ಪ್ರಯಾಣವಾಗಿ ಹೊರಟು ನನ್ನ ಕಡೆ ತೆರಳಿ ನಿನ್ನ ಸಖನಾದ ಶ್ರೀರಾಮನ ದುಃಖವನ್ನು ಪರಿಹ ರಿಸಿ ಆತನನ್ನು ಸಂತವಿಡು ; ನಾನು ವಿಂಹಶೋಕದಿಂದ ಕಂಗೆಟ್ಟ ಶ್ರೀರಾಮನನ್ನು ನೋಡಿ ನಿನ್ನ ನ್ನು ನಿಷ್ಟುರವಾಗಿ ನುಡಿದೆನು; ಅದನ್ನು ಸಹಿಸಿಕೊ” ಎಂದು ಒಡಂಬಡಿಕೆಯನ್ನು ಹೇಳದನು. - -- ೩೭ ನೆ ಅ ಧ್ಯಸ್ತ್ರೀ ಯ . ಸು ವ ನ ಕ ಪಿ ಸ್ ನ ಗ ಳ ನು ಕೂ ಡಿ ಸಿ ದ್ದು . ಈ ಮರಾದೆಯಲ್ಲಿ ಮಹಾತ್ಮನಾದ ಲಕ್ಷಣನು ಸಂತವಿಡಲು ಸುಗ್ರೀವನು ಸವಿಾಪದಲ್ಲಿದ್ದ ಹನುಮಂತನ ನ್ನು ಕರೆದು “ಎಲೈ ಹನುಮಂತನೆ, ಮಹೇಂದ್ರ ಪರ್ವತ ಹಿಮವತ್ಸರ್ವತ ವಿಂಧ್ಯಪರ್ವತ ಕೈಲಾಸಪರ್ವತ ಬಿಳು ಪಾದ ಕಡುಗಲ್ಲುಗಳುಳ್ಳ ಮಂದರಗಿರಿ ಬಾಲಸೂರ್ಯನ ಕಾಂತಿಯಂತೆ ಒಪ್ಪುವ ಪಂಚಶೈಲಗಳು ಹಸು ಚಲ ಪದ್ಮಾಚಲ ಅಂಜನಗಿರಿ ಧೂಮಗಿರಿ ಮೊದಲಾದ ಪರ್ವತಗಳ ಗುಹೆಗಳಲ್ಲಿಯ ಇತರ ಸ್ಥಾನಗಳಲ್ಲಿ ವಾಸವಾ ಡುತ ನಾನಾವರ್ಣವಾಗಿ ಮಹಾಬಲವುಳವಾಗಿ ಆನೆಗಳಿಗೂ ಮೇಘಗಳಿಗೂ ಸಮಾನವಾದ ಶರೀರಾಕಾರವಳವಾಗಿ ಮಧುಪಾನಮಾಡಿಕೊಂಡಿರುವ ಕಪಿಗಳನ್ನು ಕರೇಕಳುಹಿಸು ; ನಾನು ಮೊದಲು ಕಳುಹಿಸಿದ ಕಪಿನಾಯಕರು ತತ್ತ ಸ್ಥಾನದಲ್ಲಿರುವ ಕಪಿಗಳನ್ನು ಕರೆದುಕೊಂಡು ಶೀಘ್ರದಲ್ಲಿ ಬರುವಹಾಗೆ ಇನ್ನೂ ಕೆಲವು ಕವಿನಾಯಕರನ್ನು ಕಳುಹಿಸು ; ಕೆಲವರನ್ನು ಸಮಸ್ತ ದಿಕ್ಕುಗಳಲ್ಲಿರುವ ಕಪಿಗಳನ್ನೂ ಕರೆದುಕೊಂಡು ಶೀಘ್ರವಾಗಿ ಬರುವಹಾಗೆ ಕಟ್ಟುಮಾಡಿ ಕಳುಹಿಸು ” ಎಂದು ಹೇಳಿದನು. ಆ ಮಾತನ್ನು ಕೇಳಿ ಹನುಮಂತನು ಅತಿವೇಗವುಳ ಕಪಿ ನಾಯಕರನ್ನು ಕಳುಹಿಸಲು ಅವರು ಆಕಾಶದಲ್ಲಿ ಪಕ್ಷಿಗಳು ಅತಿವೇಗದಿಂದ ಹೋಗುವಂತೆ ಅತಿ ಶೀಘ್ರವಾಗಿ ಹೋಗಿ ಸಮುದ್ರದ ತಡಿಗಳಲ್ಲಿಯ ವನಗಳಲ್ಲಿಯ ಪರ್ವತ ಗುಹೆಗಳಲ್ಲಿಯೂ ಇದ್ದ ಕಪಿನಾಯಕರಿಗೆ ಕಾಲಮೃತ್ಯುವಿಗೆ ಸಮಾನವಾದ ಸುಗ್ರೀವನ ಆಜ್ಞೆಯನ್ನು ತಿಳಿಸಿದರು ; ಅದನ್ನು ಕೇಳಿ ನಾನಾದಿಕ್ಕುಗಳಲ್ಲಿದ್ದ ಕವಿನಾಯಕರು ತಮ್ಮ ತಮ್ಮ ಸೇವೆಗಳನ್ನು ಕೂಡಿಕೊಂಡು ಅತಿ ಶೀಘ್ರವಾಗಿ ಬರುತ್ತಿದ್ದರು ! ಅಂಜನಗಿರಿಯಿಂದ ಬಂದ ಮಹಾ ಬಲವಂತರಾದ ಕಪಿಗಳು ಮರುಕೋಟಿ ;