ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೧೭೭ ನಾಳೆ ರಾತ್ರಿ, ತಪ್ಪಿದರೆ ನಾಳಿದ್ದು ಬೆಳಿಗ್ಗೆ ಖಂಡಿತವಾಗಿಯೂ ತಂದುಕೊಡೇನೆ” ಎಂದವಳು, ಏನೋ ಉಪಕಾರ ಮಾಡುವವಂತೆ ಸಮೀಪಕ್ಕೆ ಬಂದು, ದನಿ ತಗ್ಗಿಸಿ ನುಡಿದಳು: “ರುಕ್ಕು, ಆ ಕೇಶವಯ್ಯನ ಮನೆಗೆ ವಿಶೇಷವಾಗಿ ಹೋಗಬೇಡಮ್ಮ. ನೆರೆಮನೆ ಹೆಂಗಸಿಗೆ ನೆಗೆದು ಮುತ್ತು ಕೊಡುವ ಜಾತಿ!... ನಾನು ಹೀಗೆ ಹೇಳಿದೆ ಅಂದು ಬೇಸರಪಟ್ಟುಕೊಬೇಡಮ್ಮ.” ಮಡಿಲಿಗೆ ತುಂಬಿದ ಅವಲಕ್ಕಿಯನ್ನು ಭದ್ರ ಮಾಡಿಕೊಳ್ಳುತ್ತ ಲಕ್ಷಮ್ಮ ಬೀದಿಗೆ ಇಳಿದಳು.ಯಾವುದಾದರೂ ಪದಾರ್ಥವನ್ನು ಈಸಿಕೊಳ್ಳುವಾಗ ಇಂಥದೊಂದು ಉಪಚಾರ ಮಾತಾಡುವುದು ಲಕ್ಷ ಮೃನಿಗೆ ರೂಢಿಯಾಗಿತ್ತು! ಐದಾರು ದಿನಗಳ ಹಿಂದೆ ಇದೇ ಲಕ್ಷಮ್ಮ ಬೆಲ್ಲದಚ್ಚು ಕೇಳಲು ಬಂದಾಗ, ತಾನು ಊಟ ಮುಗಿಸಿ, ಒಂದು ಬೆಳ್ಳಿಯ ಲೋಟದ ತುಂಬ ಹಾಲು ಕುಡಿಯುತ್ತಿದ್ದಳು. ಬಾಲ್ಯದಿಂದಲೂ ಹಾಲು-ಅದರಲ್ಲೂ ಹಸುವಿನ ಹಾಲ ರುಕ್ಕಿಣಿಗೆ ತುಂಬ ಪ್ರಿಯವಾದ ಪಾನೀಯ! ಬೆಲ್ಲದಚ್ಚು ತೆಗೆದುಕೊಂಡು ಲಕ್ಷ ಮ್ಮ ಗಮ್ಮನೆ ಹೋಗಬಾರದಿತ್ತೆ?... ನಾಚಿಕೆ ಕೆಟ್ಟ ಹೆಂಗಸು. “ಹಾಲು ಕುಡಿಯಬೇಡವೆ, ರುಕ್ಕು-ಹಾದರ ಮಾಡುವ ಹಾಗಾಗುತ್ತೆ” ಅಂದುಬಿಡುವುದೆ? ೧೬ ಸಂತೆಯಿಂದ ಬಂದ ಮಾರನೆಗೇ ಮರಿ ಕಡಿದು ತುಪ್ಪಟ ಮಾರಿದರು. ಆ ರಾತ್ರಿ ಅವರ ಗುಡ್ಡಿನಲ್ಲಿ ಹಬ್ಬದ ಅಡಿಗೆಯ ಸಡಗರ. ಆ ರಾತ್ರಿಯ ಔತಣಕ್ಕೆ ನಿಂಗಯ್ಯನ ಅಣ್ಣ ಕುಳುವಾಡಿ ಕುಂದೂರಯ್ಯನನ್ನೂ ಕರೆದಿದ್ದರು. ಅಣ್ಣನ ಮುಂದೆ ಕುಡಿಯುವುದಕ್ಕೆ ನಿಂಗಯ್ಯ ಹೆದರುತ್ತಿದ್ದ. ಆ ಕಾರಣದಿಂದಲೇ ಅಣ್ಣ ತಮ್ಮ ಗುಡ್ಲಿಗೆ ಬರುವುದಕ್ಕೆ ಮುನ್ನವೇ ಸೋರೆಬುರುಡೆಯಲ್ಲಿ ತುಂಬಿಸಿ ರಾಚನ ಸೇಂದಿ ಅಂಗಡಿಯಿಂದ ತರಿಸಿದ್ದ ಹೆಂಡವನ್ನೆಲ್ಲ ಹೀರಿ ಮುಗಿಸಿದ್ದ. ಕುಂದೂರಯ್ಯ ತಮ್ಮನ ಗುಡ್ಡು ತಡಿಕೆಬಾಗಿಲಿನಲ್ಲಿ ಬಗ್ಗೆ ಒಳಗೆ ಬರುವ ವೇಳೆಗಾಗಲೆ, ಗುಡ್ಡಿಗೊಳಗೆ ದೀವಿಗೆ ಹೊತ್ತಿಸಿ ಎಷ್ಟೋ ಸಮಯ ಕಳೆದಿತ್ತು. ಆಗಲೆ- ಅಷ್ಟು ಹೊತ್ತಿನ ತನಕ ಕಿಲಿಕಿಲಿ ನಗುತ್ತು ಆಡುತ್ತಿದ್ದ ಕೂಸಿಗೆ ಮೊಲೆಯೂಡಿ ಸಿವುನಿ, ಒಂದು ಪಕ್ಕದಲ್ಲಿ ಹಾಸಿದ್ದ ದುಪ್ಪಟಿ ಮೇಲೆ ಉರುಳಿಸಿ, ಮಲಗಿದ್ದಳು...