________________
೧೮೬ ವೈಶಾಖ ಕ್ಯಾಳೇಬುಟ್ನಂತೆ. “ಆಗ ರೋಸಯ್ಯ ಗುರುಗಳು “ಯಾನೊ ಅದ್ದು ಆಗೋಯ್ತು... ಈಗ ಇವುರ ಸಂಸಾರ ಎಡಗೋಲು ವಕ್ಕಡೆ ತೊದರೆ ಬಲಗೋಲು ಇನ್ನೊಕ್ಕಡೆ ತೂಯಾ ಅದೆ... ಇದು ಇನ್ನೂ ಬಿಗಡಾಯಿಸ್ಕಂಡು ಹಡ ರಂಪ ಅಗಕ್ಕೆ ಮುಂದೇಯ, ಇವರಿಬ್ಬರೂ ಬ್ಯಾರೆ ಮಾಡದೆ ಇವೇ...”- ಅಂದು, ಸಿಕ್ಕ ಬುಡುಸಕ್ಕೆ ಪರ್ಯತ್ನ ಮಾಡುದ್ರಂತೆ. ಆಗ ಇನ್ನೊಬ್ಬ ಪಂಚಾತಿದಾರ; - “ಸರಿ ಗುರುಗಳೆ, ಹೈಟೆಲ್ಲಿರೊ ಕೂಸಿನ ಗತ್ಯೇನು?- ಅದುಕೆ ಪರಿಯಾರ ಕ್ವಡುಸಬ್ಯಾಡದ?” ನ್ಯಾಯ ಅಡಿದನಂತೆ. ಆಗ ಸೂಸಾನಮ್ಮ ತಟಕ್ಕನೆ "ಅವುನು ಪರಿಯಾರ ಊಡೂದು ಬ್ಯಾಡ ಯಾನೂ ಬ್ಯಾಡ. ಮೊದಲು ನಮ್ಮ ಹಟ್ಟಿಂದ ಕಡದೋಗ್ಲಿ” ಅಂದ್ಲಂತೆ. “ಸರಿ ಗಂಡ ಎಡತೀರ್ ವೊಂದಾಣಿಕೆ ಆಗನಿಲ್ಲ ಅಂದ್ರೆ, ಇನ್ನೇನ ಉಳುದಿರಾದು-ಇವರಿಬ್ರೂ ಬ್ಯಾರೆ ಆಗೋದೇ ಸಮ” -ದೊಡ್ಡಿ ಪಂಚಾತಿದಾರೆಲ್ಲ ತೀರ್ಪು ಕ್ವಿಟ್ಟರಂತೆ... ಅಣ್ಣ ಮಾತ್ರ ತಾನು ಮಾತ ಕಟ್ಟಿದ್ದ ಉಳುಸುದ್ದಂತೆ. ರೋಸಯ್ಯ ಗುರುಗಳ ಬೀದ್ದೆ ಎಳಿನಿಲ್ವಂತೆ. ವಸಿ ಜಿನ ಅವಂಗೆ ಅಷ್ಟರಾಗೆ ಸಿನೇಯ್ತ ಆಗಿದ್ದ ಯೇಸುದಾಸ ಅನ್ನೋನ ಅಟ್ಟೇಲಿ, ಅಣ್ಣ ಕಾಲ ನೂಕಿದಂತೆ... ಅದಾದ ಮುಂದಿನ ಬೇಸ್ತವಾರ ಹುಣಸೂರು ಸಂತೇಲಿ ಸಿಕ್ಕಿ ವಕ್ಕಡಿಂದ ನಡುದುದೆಲ್ಲ ನನ್ನ ಕುಟ್ಟೆ ಅಂಗಾಲು ಸುಳಿಸುದ್ದು ಒಂದು ತಪಸೀಲ್ಲೂ ಬುಡದೆ ತೊಡಿಕಂಡಿದ್ದ. ಅವನ ಜ್ವತೆ ಯೇಸುದಾಸನೂ ಇದ್ದ. ಆಗ ನಾನು, “ಮುಂದೇನು ಮಾಡೀಯಣ್ಣ?' ಕಣ್ಣೀರು ತುಂಬಿಕ ಕ್ಯಾಳಿದ್ದಕ್ಕೆ, “ನಮ್ಮ ಈ ಯೇಸುದಾಸರ ತಮ್ಮ ಮೊಸಸು ಅನ್ನೋರು ಸೈನ್ಯಕೆ ಸೇರಿ ಕಂಡವೆ, ನಾನು ಸೇರಿಕಣಿ. ನಮ್ಮಯ್ಯಂಗೆ ಯೋಳಿಬುಡು-ಇಂಗೆಲ್ಲ ಆಗೋಯ್ತು, ಸಾಯದೆ ಬದುಕಿದ್ರೆ ಯಾವತ್ತಾದ್ರೂವೆ ಬಂದು ಸ್ವಾಡ್ತೀನಿ ಅಂತಾ....” ಅಣ್ಣನ ಮಾತ ಕ್ಯಾಳಿ ಗೋಳೋ ಅಂತ ಅತ್ತೆ, ಮುಟ್ಟಾರಿ ನನ್ನ ತಬ್ಬಿಕಂಡು ತಾನೂ ಅಲ್ಲ, “ಅಳಬೇಡ ಕಣ್ಣ, ತಮ್ಮ, ಸುಮ್ಕಿರು... ನಸೀಬಿದ್ರೆ ಸೈನ್ಯದಿಂದ ಬದುಕಿ ಬತ್ತೀನಿ. ಇಂದೈ ಬರೂನಾಗ ಸುಮಾರಾಗಿ ಅಣ ಉಳುಸ್ಕಂಬತ್ತೀನಿ. ಆ ಅಣದಿಂದ ಸೊಂತಕೆ ಜಮೀನ ತಕ್ಕತ್ತೀನಿ. ಆಗ ಈ ಊರಿನಾಗೆ ನಾನೂ ಒಬ್ಬ ಮನುಸಾಂತ ಆಗಕ್ಕಿಲ್ವ?- ಅಣ ಇರೋರೆ ತಾನೆ ಈ ಊರನಾಗೆ ಮದ್ವಾದೆ...” ಅಂದ.