ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೯೦ ವೈಶಾಖ y ಭಕ್ತಿಯಿಂದ ದ್ಯಾವರಯೆಸರ ಯೋಳಾದು ಅದೇಯ. ಇನ್ನೊಬ್ರ ಈಯಾಳುಸಿ ಅವರ ತಿಕ ನೆಕ್ಕಕ್ಕೆ ವೋಗಾದು ಅದೇಯ...” ಆ ರಾತ್ರಿ ಮಲಗಿದಾಗಲೂ ಇದೇ ಚಿಂತೆ ತೀವ್ರವಾಗಿ, ಒಳಗೆ ಆಳದಲ್ಲಿ ಕುಟ್ಟುವ ಕೊಟ್ಟಣವಾಗಿ, ರುಕ್ಕಿಣಿಯನ್ನು ಕಾಡಿತು. ಎಷ್ಟು ಪ್ರಯತ್ನಿಸಿದರೂ ತನಗೆ ನಿದ್ರೆ ಬರುತ್ತಿಲ್ಲ... ಹಾಳು, ಮಧ್ಯಾಹ್ನ ಆ ಲಕ್ಷಮ್ಮ ಬಂದು ಇಲ್ಲದ್ದನ್ನು ತನ್ನ ಮನಸ್ಸಿನೊಳಗೆ ಬಿತ್ತಿಹೋದದರಿಂದಲೆ ತನಗೆ ಈ ಚಿಂತೆ! ಅನಿಷ್ಟದವಳು, ಅವಳು ಎತ್ತಲಾದರೂ ಹಾಳಾಗಿಹೋಗಬಾರದೆ? ಛ, ಆದರೂ ತಾನೇಕೆ ಈ ಸಣ್ಣ ವಿಷಯವನ್ನು ವಿಪರೀತ ಭಾವಿಸಿ ಕೊರಗಬೇಕು?- ಅತ್ತಲಿಂದ ಇತ್ತ, ಇತ್ತಲಿಂದ ಅತ್ತ ಹೊರಳಾಡಿ ಇದನ್ನು ಮರೆಯಲು ಯತ್ನಿಸಿದಳು. ಆದರೆ, ಕಮ್ಮಿಂದ ಎಷ್ಟು ಬಾರಿ ಹೊಡೆದೋಡಿಸಿದರೂ ಮತ್ತೆ ಮತ್ತೆ ಸುಯ್ಯೋಂದು ಮುಖವನ್ನು ಮುತ್ತಿ ಬಾಧಿಸುವ ಹೇಸಿಗೆಯ ಮೇಲಿನ ನೊಣಗಳಂತೆ ಮರೆಯಲು ಪ್ರಯತ್ನಿಸಿದಷ್ಟೂ ಈ ಚಿಂತೆ ದೂರವಾಗದೆ ಮನಃ ದಾಳಿಯಿಡುತ್ತಲೇ ಇತ್ತು. - ಬಹಳ ಸಮಯ ರುಕ್ಕಿಣಿಯ ಮನಸ್ಸು ಈ ಪರಿ ಒದ್ದಾಡಿರಬೇಕು. ಕಡೆಗೊಮ್ಮೆ ಇನ್ನೇನು ನಿದ್ದೆಯ ಸೆಳಕು ಅವಳನ್ನು ಆಕ್ರಮಿಸಬೇಕು-ಅಷ್ಟರಲ್ಲಿ ಅವಳು ಕೇಳಿದ್ದೇನು?... ಹೆಜ್ಜೆಯ ಸಪ್ಪಳ... ಯಾರೋ ನಡೆದು ಬರುತ್ತಿರುವಂತೆ.... ಅವಳ ಎದೆ ಡವಡವ ಬಡಿಯಲುಪಕ್ರಮಿಸಿತು. ಮನುಷ್ಯರ ಹೆಜ್ಜೆಯ ಸಪ್ಪಳ..... ಅದರಲ್ಲಿ ಯಾವ ಅನುಮಾನವೂ ಇಲ್ಲ.... ಅಂಗಳದಿಂದ ತಾನು ಮಲಗಿರುವ ಕೋಣೆಯ ಕಡೆಗೇ ಬರುತ್ತಿರುವಂತಿದೆ! ಯಾರಿರಬಹುದು?... ಮಾವಯ್ಯ ತಾನು ಹಾಲಿಗೆ ಹೆಪ್ಪು ಹಾಕಿ ಬರುವಾಗಲೆ ಹಜಾರದ ಕೊನೆಗೆ ಮಲಗಿ ನಿದ್ದೆ ಹೋಗಿದ್ದರು... ಬೀದಿಯ ತಾಪಾಳನ್ನು ತಾನೇ ಹಾಕಿ ಭದ್ರಪಡಿಸಿ, ನಿತ್ಯದ ಅಭ್ಯಾಸದಂತೆ ತಾನೇ ಮತ್ತೊಮ್ಮೆ ಹಿಂತಿರುಗಿ ಹೋಗಿ, ಸರಿಯಾಗಿ ತಾಪಾಳು ಹಾಕಿರುವುದನ್ನು ಖಾತರಿ ಮಾಡಿ ಬಂದಿದ್ದಳಲ್ಲ?... ಆದ್ದರಿಂದ ಕಳ್ಳಕಾಕರು ಯಾರೂ ಬೀದಿಯ ಬಾಗಿಲಿನಂದ ಒಳಗೆ ಪ್ರವೇಶಿಸುವ ಸಾಧ್ಯತೆಯೇ ಇಲ್ಲ.... ಒಂದು ಪಕ್ಷ ಅವರೇನಾದರೂ ಮನೆಯ ಮೇಲುಗಡೆಗೆ ಹತ್ತಿ ಅಂಗಳದೊಳಗೆ ಇಳಿಯಲು ಯತ್ನಿಸಿದರೆ, ಬಿದಿರು ಗಳುಗಳ ಮೇಲೆ ಹೊದ್ದಿಸಿದ್ದ ನಾಡ ಹೆಂಚುಗಳನ್ನು ಒಂದರ ಮೇಲೊಂದು ತೆಗೆದಿಡುವ ಸದ್ದು ಕೇಳಿಬರಬೇಕು. ತರುವಾಯ ಬಿದಿರುಗಳನ್ನು ಕತ್ತಿರಿಸುವಾಗಿನ ಲಟಲಟ ಸದ್ದು ಕೇಳಿರಬೇಕು. ಆದರೆ ಅಂಥ ಶಬ್ದವಾವುದೂ ಇಲ್ಲಿನ ತನಕ ತನ್ನ