ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ YI - 134 - ಬುದ್ಬುದಾದಯಶ್ಚೋದಕವಿಶೇಷಾ ಏವ | ವಾತಾದೀನಾಂ ಜ್ವರಾದೀ ನಾಂ ಚ ನಾಪ್ಯೆಃವಂ ಸಂಶ್ಲೇಷೋ ನ ಪರಿಚ್ಛೇದಃ ಶಾಶ್ವ​​ತಿಕಃ | ಅಧ ಚ ನಿಮಿತ್ತತ​ ಏವೋತ್ಪತ್ತಿರಿತಿ | (ಸು 95-6.)

ಇಲ್ಲಿ ಪುನಃ ಒಂದು ಶಂಕೆ ಉಂಟಾಗತಕ್ಕದ್ದು ವಾತಾದಿ ದೋಷಗಳು ಮತ್ತು ಜ್ವರಾದಿ ರೋಗಗಳು ನಿತ್ಯವಾಗಿ ಕೂಡಿರುತ್ತವೋ ಅಧ​ವಾ ನಿತ್ಯವಾಗಿ ಅಗಲಿರುತ್ತವೋ? ನಿತ್ಯವಾಗಿ ಕೂಡಿರುವದಾದರೆ, ಪ್ರಾಣಿಗಳೆಲ್ಲಾ ನಿತ್ಯದಲ್ಲೂ ರೋಗಿಗಳಾಗಿರಬೇಕಷ್ಟೆ ಪ್ರತಿ ಪಕ್ಷದಲ್ಲಿ, ಪ್ರತ್ಯೇಕವಿರುವ ವಾತಾದಿ ದೋಷಗಳ ಮತ್ತು ಜ್ವರಾದಿ ರೋಗಗಳ ಬೇರೆಬೇರೆ ಕುರುಹು ಕಾಣುವದಿಲ್ಲ. ಆದ್ದರಿಂದ, ವಾತಾದಿಗಳು ಜ್ವರಾದಿಗಳಿಗೆ ಮೂಲಗಳಂಬದು ಸರಿಯಲ್ಲ. ಇದಕ್ಕೆ ಸಮಾಧಾನವೇನಂದರೆ ದೋಷಗಳನ್ನು ಬಿಟ್ಟು ಜ್ವರಾದಿಗಳು ಉಂಛಾಗುವದಿಲ್ಲ. ಆದರೆ ನಿತ್ಯಸಂಬಂಧಎಲ್ಲ. ಮಿಂಚು, ಗಾಳಿ, ಸಿಡಿಲು, ಮತ್ತು ಮಳೆ ಆಕಾಶವನ್ನು (ಮೇಘ ವನ್ನು) ಬಿಟ್ಟು ಆಗುವದಿಲ್ಲ ಆಕಾಶವಿದ್ದಾಗ್ಯೂ, ಕೆಲವು ವೇಳೆ ಅವುಗಳು ಉಂಟಾಗುವದಿಲ್ಲ. ನಿಮಿತ್ತ ದೊರಕಿದಾಗ್ಗೆ, ಅದರಿಂದಲೇ ಉತ್ಪತ್ತಿಯಾಗುತ್ತದೆ ಹ್ಯಾಗೋ, ಹಾಗೆ ತೆರೆಗಳು, ನೀರಮೇಲಣ ಗುಳ್ಳೆಗಳು, ಮುಂತಾದವು ನೀರಿನ ವಿಕಾರಗಳೇ. ಹಾಗೆಯೇ ವಾತಾದಿಗಳ ಮತ್ತು ಜ್ವರಾದಿಗಳ ಯೋಗವಾಗಲಿ, ವಿಯೋಗವಾಗಲಿ ಶಾಶ್ವತವಾಗಿರುವದಿಲ್ಲ, ನಿಮಿತ್ತ ಕಾರಣದಿಂದಲೇ ಉತ್ಪತ್ತಿಯಾಗುವದಾಗಿರುತ್ತದೆ

16 ತತ್ರ ವ್ಯಾಧಯೋಽಪರಿಸಂಖ್ಯೆೇಯಾ ಭವಂತ್ಯ​ತಿಬಹುತ್ವಾದ್ದೋಷಾಸ್ತು ವ್ಯಾಧಿಗಳು ಪರಿಸಂಖ್ಯೆೇಯಾ ಅನತಿಬಹುತ್ವಾತ್ ತಸ್ಮಾದ್ಯಧೋಚಿತಂ ವಿಕಾರಾ ಅಸಂಖ್ಯೆೇಯ ಉದಾಹರಣಾರ್ಧಂ ಅನವಶೇಷೇಣ ಚ ದೋಷಾ ವ್ಯಾಖ್ಯಾಸ್ಯಂತೇ | ಆದರೆ ದೋಷಾ (ಚ. 264 ) ಪರಿಸಂಖ್ಯೇಯ

ವ್ಯಾಧಿಗಳು ಅತಿ ಬಹಳ ಇರುವದರಿಂದ, ಅವು ಇಂತಿಷ್ಟೇ ಎಂತ ಗಣನೆ ಮಾಡಲಿಕ್ಕೆ ಸಾಧ್ಯವಿಲ್ಲ ದೋಷಗಳಾದರೆ ಅತಿ ಬಹುವಲ್ಲದ್ದರಿಂದ ಪರಿಮಿತ ಸಂಖ್ಯೆಯವಾಗಿವೆ ಆದ್ದ ರಿಂದ ದೋಷಗಳನ್ನು ನಿಶ್ಶೇಷವಾಗಿ ವರ್ಣಿಸಿ, ಉದಾಹರಣಾರ್ಧವಾಗಿ ವಿಕಾರಗಳನ್ನು ಯಧೋಚಿತವಾಗಿ ವಿವರಿಸಲಾಗುತ್ತದೆ

17. ಹೊಸ ವ್ಯಾಧಿ ನಾಸ್ತಿ ರೋಗೋ ವಿನಾ ದೋಷೈರ್ಯಸ್ಮಾತ್ತಸ್ಮಾದ್ವಿಚಕ್ಷಣಃ | ಯ ಉಪಚಾರ ಅನುಕ್ತಮಪಿ ದೋಷಾಣಾಂ ಲಿಂಗೈರ್ವ್ಯಾಧಿಮುಪಾಚರೇತ್ || ರೀತಿ (ಸು. 130.)

 ದೋಷಗಳಿಂದ ವಿನಾ ರೋಗವು ಹುಟ್ಟುವದಿಲ್ಲವಾದ್ದರಿಂದ, ಹೇಳದೆ ಇದ್ದ ರೋಗ ವನ್ನಾದರೂ ದೋಷಗಳ ಲಕ್ಷಣಗಳಿಂದ ಬುದ್ಧಿವಂತನು ಉಪಚರಿಸಬೇಕು.

18. ನ ಹಿ ಸರ್ವ ವಿಕಾರಾಣಾಂ ನಾಮತೋಽಸ್ತಿ ಧ್ರುವಾ ಸ್ಥಿತಿಃ | ಸ ಏವ ಕುಪಿತೋ ದೋಷಃ ಸಮುತ್ಥಾನವಿಶೇಷತಃ ||