03 11 - 60
ಆಮಾಶಯ ಮಟ್ಟಿಗೆ ದೊಡ್ಡ ಮಲ್ಗೋವಾ ಮಾವಿನ ಕಾಯಿಯ ಆಕಾರವೆನ್ನಬಹುದು.) -ಎಡದಲ್ಲಿ ತೋರವಾದ ಬುಡ, ಬಲದಲ್ಲಿ ಸಪೂರವಾದ ಕೊನೆ, ಮೇಲಕ್ಕೆ ಸಪೂರ ಬದಿ, ಅದು ಸಾಧಾರಣವಾಗಿ ತುಂಬಿದಾಗ್ಗೆ 1೦-12 ಇಂಚು ಉದ್ದ, 4-5 ಇಂಚು ಅಗಲವಿರುತ್ತದೆ. ಖಾಲಿಯಾದಾಗ್ಗೆ ಕೃಶವಾಗಿ ಬೆನ್ನಿಗೆ ಸಮಿಪದಲ್ಲಿರುವದರಿಂದ ಎದೆಯ ಗುಳಿ ತಗ್ಗಾಗಿ ಕಾಣುತ್ತದೆ. ಆಗ್ಗೆ ಪಿತ್ತಕೋಶದ ಎಡಭಾಗವು ಅದಕ್ಕೆ ಅಡ್ಡವಾಗಿರುವದು. ಒಳ್ಳೇದಾಗಿ ತುಂಬಿದಾಗ್ಗೆ ಎದುರಿಗ ಉಬ್ಬಿ, ಹತ್ತರ ಇದ್ದ ಅಂಗಗಳನ್ನು ಒತ್ತುತ್ತದೆ. ಅದರಿಂದ ಅದಕ್ಕೆ ಮೇಲ್ಗಡೆ ಎದೆಯಲ್ಲಿರುವ ಹೃದಯ ಮತ್ತು ಎಡದ ಶ್ವಾಸಕೋಶಗಳ ವ್ಯಾಪಾರಗಳಿಗೆ ಸಹ ಅಭ್ಯಂತರ ಬರುವದುಂಟು. ಆಮಾಶಯದ ಕೊನೆಯು ಎದುರಿಗೆ ಬಲದ 8ನೇ ಪಕ್ಕೆಲುಬಿನ ತುದಿಯಲ್ಲಿ (ಅಂದರೆ ಮೃದ್ವಸ್ಥಿಭಾಗದಲ್ಲಿ) ಪಿತ್ತಕೋಶದಿಂದ ಮುಚ್ಚಿಕೊಂಡು ಇರುವದು. ಆದ್ದರಿಂದ ನಿಜಸ್ಥಿತಿಯಲ್ಲಿ ಹೊರಗಿನ ಸ್ಪರ್ಶನಕ್ಕೆ ಸಿಕ್ಕದು. 13೦ ಪ್ಲೀಹವು ಆಮಾಶಯದ ಎಡದ ಕೊನೆಗೆ, ಅದರ ಅಡಿಬದಿ ಮತ್ತು ಸ್ವಲ್ಪ ಮಟ್ಟಿಗೆ ಸಣ್ಣ ಕರುಳುಗಳಿಂದ ಮರೆಮಾಡಲ್ಪಟ್ಟು, 9, 1೦, 11 ನೇ ಎಡದ ಪಕ್ಕೆಲುಬುಗಳ ಸ್ಥಾನದಲ್ಲ ಇರುತ್ತದೆ ಅದು ಬಾತಿದ್ದಾಗೆ, ಎಡದ 1೦, 11ನೇ ಪಕ್ಕೆಲುಬುಗಳ ಅಡಿಯಲ್ಲಿ ಹೊರಗಿನಿಂದ ಒತ್ತಿ ನೋಡಿದರೆ ಮುಟ್ಟಿಸಿಕ್ಕಬಹುದು, ಮತ್ತು ಹೊರಗೆ ಸಹ ಗಟ್ಟಿಯಾಗಿ ಕಾಣಬಹುದು., ನಿಜಸ್ಥಿತಿಯಲ್ಲಿರುವಾಗ್ಗೆ ಹೊರಗಿನ ಸ್ಪರ್ಶಕ್ಕೆ ಕಾಣದು. ದ್ವಾರನಾಳ (ಮುಖ)ವಿಲ್ಲದ ಗ್ರಂಧಿಗಳಲ್ಲಿ ಇದು ಅತ್ಯಂತ ದೊಡ್ಡದು ಅದು ಸುಮಾರು 5 ಇಂಚು ಉದ್ದ ಇರುತ್ತದೆ ಮತ್ತಗಾಗಿಯೂ, ಕಪ್ಪು ಒತ್ತಿದ ಕಂಪಾಗಿಯೂ ಇರುವದು. ಪೀ * ಇದರಲ್ಲಿರುವ ರಕ್ತದಲ್ಲಿ 60 ಕಂಪು ಜೀವಬೀಜಗಳಿಗೆ 1 ಬಿಳೇ ಬೀಜದಂತೆ ಇವೆ; ಬೇರೆ ಕಡೆಯ ರಕ್ತದಲ್ಲಿ 400ಕ್ಕೆ 1ರಂತೆ ಇರುವದಷ್ಟೆ. ರಕ್ತದ ಕೆಂಪುವರ್ಣವು ಈ ಕೆಂಪು ಜೀವಬೀಜಗಳ (Corpuscles) ದೆಸೆಯಿಂದ ಉಂಟಾಗುವಂಥಾದ್ದು. ಪಾಂಡು, ವಿಷಮಜ್ವರ ಇತ್ಯಾದಿ ರೋಗಗಳಲ್ಲಿ ಈ ಫೀಹವು ದೊಡ್ಡದಾಗುವದುಂಟು. ನಾಯಿಯ ಪ್ಲೇಹವನ್ನು ಅಪಾಯ ಬಾರದಂತೆ ತೆಗೆದುಬಿಟ್ಟಿದ್ದರಿಂದ, ಅದರಲ್ಲಿ ವಿಶೇಷವಾದ ಭೇದವೇನೂ ಕಾಣಲಿಲ್ಲ. ಮನುಷ್ಯರ ಪ್ಲೇಹವನ್ನು ಸಹ ಅಪಾಯವಿಲ್ಲದೆ ತೆಗೆದದ್ದುಂಟೆಂತ ಕಾಣುತ್ತದೆ. ಹೃದಯದ ಎಡಬದಿ ಕೆಳಗಣ ಅಂಕಣದಿಂದ ಹೊರಟ ದೊಡ್ಡ ಧಮನಿಯ ಒಂದು ಕವಲು ಈ ಫೀಹಕ್ಕೆ ಹೋಗಿಯದೆ. ಅಲ್ಲಿಂದ ಹೊರಟ ಮಲಿನ ರಕ್ತವು ಕ್ರಮೇಣ ಯಕೃತ್ತೆಂಬ ಪಿತ್ತಕೋಶಕ್ಕೆ ಹೋಗುತ್ತದೆ. _131. ಪಿತ್ತಕೋಶವು ಹೊಟ್ಟೆಯ ಬಲಬದಿಯಲ್ಲಿ ವಪಾವಹನಕ್ಕೆ ತಾಗಿ ಕೆಳಗೆ ಇರು. ಇದರ ಕಮಾನಾಕಾರವಾದ ಮೇಲಿನ ಅಂಚಿನ ಅತ್ಯಂತ ಎತ್ತರದ ಬಿಂದು ಬಲದ ಪಿತ್ತಕೋತ ಮೊಲೆತೊಟ್ಟಿನಿಂದ ಸುಮಾರು ಒಂದು ಇಂಚಿಗೆ ನೆಟ್ಟಗೆ ಕೆಳಗೆ ಇರುತ್ತದೆ. (ಯಕೃತ್) ಅದು ಎದೆಯೆಲುಬಿನ ಕೆಳಗಿನ ತುದಿಯನ್ನು ದಾಟಿ ಎಡಮೊಲೆಯ ಲೈನ್ (ಪಂಕ್ತಿ) ವರೆಗೆ ಪಸರಿಸಿರುತ್ತದೆ. ಹೊಟ್ಟೆಯ ಮಧ್ಯರೇಖೆಯಲ್ಲಿ ಎದೆಯೆಲುಬಿನ ತುದಿಗೂ, ಹೊಕ್ಕುಳಿಗೂ, ಮಧ್ಯದ ವರೆಗೆ ಅಗಲವಾಗಿ ಆಮಾಶಯದ ಎದುರು ಬದಿ ಇರುವದರಿಂದ,