ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 - 67 - ಆ 11 144 ತಾಲುವಿನ ಹೊದಿಕೆಯು ನಾಲಿಗೆಯ ಹೊದಿಕೆಗೆ ಸದೃಶವಾಗಿದೆ. ಅದರಲ್ಲಿಯೂ ರುಚಿಮೊಗ್ಗುಗಳು ಅಧವಾ ಮೊನೆಗಳು ಇವೆ, ಆದರೆ, ನಾಲಿಗೆಯಲ್ಲಿ ಇರುವಷ್ಟು ಅಲ್ಲ.

145 ನುಂಗುವಿಕೆ ಎಂಬದರಲ್ಲಿ ಮೂರು ಕೆಲಸಗಳಿವೆ, ಆಹಾರವು ನಾಲಿಗೆಯ ಬುಡಕ್ಕೆ ಹೋಗುವದು, ಕಫನಾಳದ ದ್ವಾರವನ್ನು ದಾಟುವದು, ಮತ್ತು ಅನ್ನನಾಳದೊಳಗೆ ಸೇರುವದು. ಇವುಗಳೊಳಗೆ ಒಂದನೇದು, ಇಚ್ಛೆಗೊಳಪಟ್ಟು, ನಾಲಿಗೆಯಿಂದ ಮಾಡಲ್ಪಡುತ್ತದೆ. ಎರಡನೇ ಮೂರನೇ ಕಲಸಗಳು ನಮ್ಮ ಸ್ವಾಧೀನವಿಲ್ಲ. ನುಂಗುವ ಸಮಯದಲ್ಲಿ ತಾಲುವಿನ ಹಿಂಭಾಗವು, ಎತ್ತಿಕೊಂಡು, ಮೂಗಿನೊಳಕ್ಕೆ ಹೋಗುವ ರಂಧ್ರಗಳನ್ನು ಮುಚ್ಚಿಬಿಡುತ್ತದೆ, ಹಾಗೆಯೇ ಕಫನಾಳದ ದ್ವಾರವು ಮುಚ್ಚಿ ಹೋಗುತ್ತದೆ.