ವಿಷಯಕ್ಕೆ ಹೋಗು

ಪುಟ:ಆಯುರ್ವೇದಸಾರ ಪ್ರಥಮ ಭಾಗ.djvu/೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ



                             ಉಪೋದ್ಘಾತ.               LXXV  

ದದ್ದೊ? ಅಂಗೈ ನೋಡುವದಕ್ಕೆ ಕನ್ನಡಿ ಬೇಡ,ಪ್ರತ್ಯಕ್ಷವನ್ನು ಅನುಮೋದಿಸುವದಕ್ಕೆ ಶಾಸ್ತ್ರಾಧಾರ ಅವಶ್ಯಕವಲ್ಲ. ಆಯುರ್ವೇದ ತತ್ವಗಳು ಪ್ರತ್ಯಕ್ಷಕ್ಕೆ ವಿರುದ್ಧವಾದವು ಎಂತ ಪಾಶ್ಚಾತ್ಯ ವಿದ್ವಾಂಸರು ಸಿದ್ದಾಂತ ಮಾಡಿಕೊಡುವ ವರೆಗೆ ಅವರಿಗೆ ಆಯುರ್ವೇದವು ಅಶಾ ಸ್ತ್ರೀಯವೆನ್ನುವದಕ್ಕೆ ಕಾರಣವಿಲ್ಲ.

  25. ಆದರೂ, ಜನಸಾಮಾನ್ಯದ ಸಮಾಧಾನಕ್ಕಾಗಿ ಕೆಲವು ಸಂಗತಿಗಳನ್ನು ಹೇಳ ಒಹುದು. ಚಳಿ-ಸೆಕೆ, ಶೀತ-ಉಷ್ಣ, ನೀರು ಬೆಂಕಿ ಎಂಬ ಹಾಗಿನ ದ್ವಂದ್ವಗಳು ಸರ್ವರಿಗೂ ಅನುಭವಸಿದ್ದ ಇವುಗಳನ್ನು ಕೂಡಿಕೊಂಡು ವಾಯವು ಸಂಚರಿಸುತ್ತಿರುವದರ ಮೇಲೆ ಜಗತ್ತಿನ ಸಮಸ್ತ ಸ್ಥಾವರ ಜಂಗಮ ಸಜೀವ ವಸ್ತುಗಳ ಸುಖದುಃಖಗಳು ಮತ್ತು ನಿರ್ಜೀವ ವಸ್ತುಗಳ ಗುಣ ಭೇದಗಳು ಆಧರಿಸಿ, ಇವೆ ಎಂಬದೇ ತ್ರಿದೋಷ ನ್ಯಾಯ, ಚಳಿ, ಶೀತ, ಸೀರು, ತಣಸು, ದ್ರವ ಮುಂತಾದವುಗಳಿಗೆಲ್ಲಾ ಮೂಲ ಚಂದ್ರ, ಮತ್ತು ಮನುಷ್ಯ ದೇಹದಲ್ಲಿ ಈ ವರ್ಗದ ಗುಣಗಳಿಗೆ ಮೂಲ, ಅಥವಾ ಸಾಮಾನ್ಯ ಹೆಸರು, ಕಫ, ಸೆಕೆ, ಉಷ್ಣ, ಬೆಂಕಿ, ಜ್ವಾಲೆ, ಉರಿ ಮುಂತಾದವುಗಳಿಗೆಲ್ಲಾ ಮೂಲ, ಸೂರ್ಯ, ಮತ್ತು ಆ ವರ್ಗದ ಗುಣಗಳಿಗೆ ಈ ದೇಹದಲ್ಲಿ ಮೂಲ, ಅಥವಾ ಸಾಮಾನ್ಯ ಹೆಸರು, ಪಿತ್ತ, ಚರಕನ ಪ್ರಕಾರ ವಾಯುವಿನ ನಿಜ ಅಕ್ಷಣಗಳು ರೂಕ್ಷತ್ವ (ಜಡ್ಡಿಲ್ಲದೆ ಒಣಗಿರುವದು), ಲಘುತ್ವ, ಎಶದಶ್ವ (ಸ್ವಚ್ಛವಾಗಿರು ವದು), ಶೈತ್ಯ, ಚಲನೆ ಮತ್ತು ಆಕಾರವಿಲ್ಲದಿರೋಣ ಸುಶ್ರುತನು ವಾಯುವನ್ನು ವರ್ಣಿಸು ವಾಗ್ಗೆ, “ಭೂತಗಳ ಸ್ಥಿತಿ, ಉತ್ಪತ್ತಿ, ನಾಶಗಳಿಗೆ ಇವನು ಕಾರಣನು, ಅವ್ಯಕ್ತ (ಅದೃಶ್ಯ) ನಾದಾಗ್ಯೂ ವ್ಯಕ್ತವಾದ (ಪ್ರಕಟವಾದ) ಕರ್ಮ ಮಾಡತಕ್ಕವನು, ಇವನು ರೂಕ್ಷ, ಶೀತ, ಲಘು, ಖರ, ಈ ಗುಣಗಳುಳ್ಳವನು, ಅಡ್ಡವಾಗಿ ಚಲಿಸುವವನು, ದ್ವಿಗುಣನು (ಶಬ್ದ ಸ್ಪರ್ಶ ಗುಣಗಳರಡುಳ್ಳವನು), ರಜೋಗುಣ ಹೆಚ್ಚಾಗಿ ಉಳ್ಳವನು, ನೆನಸಕೂಡದ ಶಕ್ತಿಯುಳ್ಳವನು, ದೋಷಗಳ ನಾಯಕನು, ಮತ್ತು ರೋಗಸಮೂಹದಲ್ಲಿ ಶೋಭಿಸುವವನು ಆಗಿದ್ದಾನೆ ಎಂತ ಹೇಳಿದ್ದಾನೆ. ದೇಹದಲ್ಲಿ ಈ ವರ್ಗದ ಲಕ್ಷಣಗಳಿಗೆ ಮೂಲವಾಗಿರುವದಕ್ಕೆ ವಾತ, ಅಥವಾ ವಾಯು, ಅನ್ನುವದಾಗಿರುತ್ತದೆ. ಕಫವು ಬಿಳುಪು ವರ್ಣಕ್ಕೆ, ಪಿತ್ತವು ಅರಸಿನ ವರ್ಣಕ್ಕೆ ಮತ್ತು ವಾಯುವು ಕಪ್ಪು ವರ್ಣಕ್ಕೆ ಹೇತು. ದೇಹದಲ್ಲಿ ಕೆಂಪು ವರ್ಣಕ್ಕೆ ರಕ್ತವು ಮೂಲವಾದಾಗ್ಯೂ, ರಕ್ತದೋಷಕ್ಕಲ್ಲ ಹೇತು ಮತ್ತು ಪ್ರತಿಕ್ರಿಯೆ ಪಿತ್ತದಂತೆಯಾದ್ದರಿಂದ, ಕೆಂಪು ವರ್ಣಕ್ಕೂ ಹೇತು ಪಿತ್ತವೆನ್ನಬಹುದು ಚಂದ್ರ, ಸೂರ್ಯ ವಾಯುಗಳ ಯೋಗಾ ಯೋಗಾತಿಯೋಗಗಳ ಲಕ್ಷಣಗಳು ಸರ್ವಪ್ರಾಣಿಗಳಲ್ಲಿಯೂ, ಸರ್ವಸ್ಥಾನಗಳಲ್ಲಿಯೂ,ಸರ್ವಪದಾರ್ಧಗಳಲ್ಲಿಯೂ, ಸತ್ಯಕ್ಷವಾಗಿಯಾಗಲೀ, ದೃಷ್ಟಿಗೋಚರವಲ್ಲದೆಯಾಗಲೀ, ಇರುತ್ತವೆ. ಪೃಥ್ವೀ-ಅಪ್-ತೇಜಃ-ವಾಯು, ಆಕಾಶ ಎಂಬ ಪಂಚ ಮಹಾಭೂತಗಳೊಳಗೆ ವೃಧ್ವೀ-ಜಲಗಳಿಂದ ಕಫ, ತೇಜಸ್ಸಿನಿಂದ ಪಿತ್ತ, ಆಕಾಶ-ವಾಯುಗಳಿಂದ ವಾತ, ವೃದ್ಧಿಯಾಗುತ್ತವೆ, ಮತ್ತು ತೇಜಃ-ಆಕಾಶಗಳಿಂದ ಕಫ, ಪೃಥ್ವೀ-ಅಪ್-ವಾಯುಗಳಿಂದ ಪಿತ್ತ, ಪೃಥ್ವೀ-ಅಪ್ -ತೇಜಸ್ಸುಗಳಿಂದ ವಾತ ಶಮನವಾಗುತ್ತವೆ. ಈ ಪಂಚ ಮಹಾಭೂತಗಳ ಸಂಯೋಗ ದಿಂದ ದ್ರವ್ಯಗಳ ರಸ ಭೇದಗಳು ಉಂಟಾಗುವದಾಗಿರುತ್ತದೆ. ಅಸ್-ಪೃಥ್ವೀಗಳು ಅಧಿಕವಾ ಗಿರುವದರಿಂದ ಸೀ; ಪೃಥ್ವಿ-ತೇಜಃ ಅಧಿಕವಾಗಿರುವದರಿಂದ ಹುಳಿ, ಅಲ್-ತೇಜಃ ಅಧಿಕವಾ ಗಿರುವದರಿಂದ ಉಪ್ಪು; ವಾಯು-ಅಗ್ನಿ ಅಧಿಕವಾಗಿರುವದರಿಂದ ಖಾರ, ವಾಯು-ಆಕಾಶ ಅಧಿ
                                                   10*