ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೨೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೬೪ ವೈಶಾಖ ಅದು ಮಿಯಾವ್ ಅಂದಮ್ಯಾಲೆ ಅದು ಕೊತ್ತಿ ಅನ್ನೋದು ಖಾತ್ರಿ ಆಗಿ, ಹೊಂಟೋಗಿದ್ದ ಜೀವ ಮರಳಿ ಬಂದಿತ್ತು... “ಇದರ ಅಮ್ಮನ್ನಾ” ಬಯ್ಯಕು, ಮತ್ತೆ ಕಪ್ಪ ಬೊಳುದಿದ್ದ ಅವಳ ಹೆಬ್ಬೆಟ್ಟ ತಕ್ಕಂಡು ಕ್ರಯಪತ್ರಕ್ಕೆ ಅದು ವತ್ತಿಸೇಬುಟ್ಟ... ಕದ್ದು ಕದ್ದು ಇನ್ನೆಲ್ಲ ಸಾಕ್ಷಿಯಾಗಿ ಸ್ವಾತ್ತ ನಿಂತಿದ್ದ ಲಕ್ಕ ಆವಯ್ಯ ತಾಟಕತನಕೆ ಬೆರುಗಾಗಿ, ಇಂಗೂ ಉಂಟ?-ಸತ್ತ ಹೆಣದ ಕಯ್ಯಲೂವೆ ರುಜ ಆಕಿಸಿಕಂಡನಲ್ಲ?... ಈಪಾಟಿ ಆಸೆ ಇರೋನು, ಇನ್ನೊಬ್ರ ಕತ್ತು ಮಿಸುಗಕ್ಕೆ ತಾನೆ ಹೇಸಾನೆ?' ಅಂದುಕಂಡ... ಆದ್ರೆ ಇದೇ ಇಚಾರದಲ್ಲಿ ಪಂಚಾತಿ ಸೇರಿದಾಗ, ತಾನು ಕಂಡದ್ದ ಯೋಳಕ್ಕೆ ಲಕ್ಕೆ ಹೆದರಿ ಹಿಂದೇಟು ಆಕಿದ್ದ. ಬೀದ್ಯಾಗೆ ವೋಗೊ ಮಾರಿ, ಅವರ ತಂಟೆ ನಂಗ್ಯಾಕೆ?- ಅಂತ ಬಾಯಿಗೆ ಬೀಗ ಆಕ್ಕಂಡಿದ್ದ. ಇದ್ರಿಂದ, ಪಂಚಾತೀಲಿ ತಕರಾರು ಹೂಡ್ಡ ಚಿಕ್ಕೀರಮ್ಮ ನೆಂಟರ ಇರುದ್ದ ಬೆಟ್ಟಯ್ಯ ಗೆಲ್ಲಕ್ಕೆ ಅನುಕೂಲಾಯ್ತು... ಈಗ್ಗೂವೆ ಈ ಇಚಾರ ಗ್ಯಾಪಕ ಬಂದು 'ಧೂ... ಯೆಂತಾ ಹೇಡಿಯಾ ನಾನು?'- ತನ್ನನ್ನು ತಾನೇ ಲಕ್ಕ ಹಳಿದುಕೊಂಡ. ಒಂದು ಪಕ್ಕಸ ನಾ ಯೋಳಿದ್ರೂವೆ' ಆ ಉತ್ತುಮರ ಪಂಚಾತೀಲಿ, ನಾ ಯಾವೂರ ಹಾಳೇಂತ ನನ್ನ ಮಾತ ಲೆಕ್ಕಕ್ಕೆ ತಕ್ಕತ್ತಿದ್ರು?... ಬೆಟ್ಟಯ್ಯಗೆ ಆಗದೆ ಇದ್ದೋರು ಈ ಹೈದಂಗೆ ದುಡ್ಡು ಕ್ವಟ್ಟು, ಇಲ್ಲ ಹೆದುರಿ ಬೆದುರಿ, ಈ ಹೈದ್ರಿಂದ ಸುಳ್ಳುಸಾಕ್ಷಿ ಯೋಳಿಸ್ತಾ ಅವರೇಂತ ತಳ್ಳಾಕೋರು!... ಅಂತಾನು ಅನ್ನುಸ್ತು... ಇದೇ ಯೋಚ್ಛೇಲಿ ಕಾಡಯ್ಯ ಅಟ್ಟಿ ಮುಂಚೋರಿ ಬಂದಿದ್ದ ಲಕ್ಕ. ಆದ್ರೂ ಈಗೂ ಬಹಳೊಟು ಕಾಲ ಕಳೆದೋಗಿದ್ರೂವೆ, ಆ ಜಾಗಕ್ಕೆ ಬಂದ ಕೂಡ್ಡೆ ಬೆಟ್ಟಯ್ಯನ ನಡುಸ್ತ ಅನ್ಯಾಯವೆ ಅವ್ರ ತಲೆಯ ತುಂಬಿಕತ್ತು, ಅಮ್ಮಿಗೆ ಕಾಡಯ್ಯನ ಅಟ್ಟಿಂದ ಆಗತಾನೆ ಬೂಮಿಗೆ ಪತನಾವದ ಕೂಸು ಗಾರ್‌ಗಾರ್ ಅತ್ತದ್ದು ಕೇಳಿಸ್ತೇ ಇಲ್ಲ.... ಕಾಡಯ್ಯನ ಅಟ್ಟಿ ಮುಂಚೋರಿಂದ ಈಚೆಗೆ ಕಡದ ಬುಂಡಮ್ಮ ಮಾತ್ರ ಕಣ್ಣಿಗೆ ಬಿದ್ರು, “ಇದೆನ ಬುಂಡಮಾರೆ- ಈಟೋತ್ಕಲ್ಲಿ... ನೀವಿಲ್ಲಿ?...” ಕೇಳಿದ. “ಕಾಡಯ್ಯ ಏಡನೆ ಸೊಸೆ ಪುಟ್ಟನಂಜಿ ಇಲ್ವ-ಜಾಬಗೆರೆಯೋಳುಅವಳು ಕಣ್ಣಿರಿಗೆ, ವಸಿ ಕಸ್ತಾಯ್ತು. ಹೆರಿಗೆ ಮಾಡಿಸಕ್ಕೆ ನಂಗೆ ಯೋಳಿ ಕಳಿದ್ರು.” ಎಲಡಿಕೆ ಜಗೀತ, ಹೊಗೆಸೊಪ್ಪ ಒಂದಸಲ ಇಮ್ಮಣಿಚೀಲದಿಂದ ತಗದು ಬಾಯಿಗೆಸೆಗೊತ್ತ ಬುಂಡಮಾರು ಯೋಳಿದ್ರು. “ಮೊಗ ಗಂಡೊ, ಎಣ್ಣೆ-ಬುಂಡಮ್ಮಾರೆ?”- ಸುಮ್ಮಕೆ ಕೇಳಿದ ಲಕ್ಕ.