ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೦೨ ವೈಶಾಖ ಈ ತೀರುಮಾನಕೆ ಬಂದಿವಿ, ಬುದ್ದಿ, ತಾವು ಇದ್ರೆ ವಪ್ಪುದೆ, ನಾಳೀಕೊ ನಾಡಿದ್ದೂ ನ್ಯಾಯಕ್ಕೆ ಸೇರಿಕತ್ತೀವಿ ಅಂದ್ರ. ಅದ್ರೆ ಸ್ವಾಮಿಗಳು-ಎಲ್ಲ ಸಿವನ ಇಚ್ಚೆ, ನಿಮ್ಮೆ ಅವನ ಪ್ರೇವಣೆ ಆಗಿರೊ ಅಂಗದೆ. ಅಂಗೇ ಮಾಡಿ, ಅಂತ ಅಪ್ಪಣೆ ಕೂಟ್ಟರು...” ಈಗಲೀಗ ಗಂಗಿ ಚೆಂದಾಗಿ ಬೆಟ್ಟೋಗಿದ್ದು. “ಯೇನಂದೆ ಮಾದಮ್ಮ?- ನನ್ನ ಬೆತ್ತಲೆ ಮಾಡಿ, ವೋಡೀತಾರಂತ?... ಅವತ್ನ ನ್ಯಾಯದಲ್ಲಿ ಅಂಗೇ ಕಂಬಕ್ಕೆ ಕಟ್ಟ ವೋಡಿಯೋದ ಅಂತ ಅಂತಿದಲ್ಲ?ನಾನೂವೆ ಇನ್ನೇನ ಮಾಡಾದು ವೋಡಿ ವೊಡಕಲ್ಲಿ ಅಂತ ಗಟ್ಟಿ ಮಾನಸ ಮಾಡಿದ್ದೆ... ಆದ್ರೆ-ಎಲ್ಲಾರ ಮುಂದೇನೂವೆ ಸೈಲೆ ಊರಾಕೋದು ಅಂದ್ರೆ... ಇದೇನವ್ವ ವೊಸ ಮಾತು? ಈ ಊರಿನೋಗ್ಗೆ ಯೇನವ್ವ ಬಂತು ಕೇಡುಗಾಲ?...” ಅಂತ ಬೇತುಗತ್ತಿದ್ದು, ಆಗ ಮಾದಮ್ಮ “ಈಗ ಯಾರ ದೂಸಣೆ ಮಾಡಿ ಯಾವ ಫಲ?... ನಿಂಗೆ ಬಂದಿರೋ ಗಂಡಾಂತ್ರದಿಂದ ಪಾರಾಗೊ ಉಪಾಯ ಉಡುಕು” ಅಂದ್ಲು. ವಸಿ ವೊತ್ತು ಗಂಗಿ ಕವ್‌ ಕಿವ್ ಅನ್ನುದೆ ಕುಂತಂಗಿತ್ತು. ಆಮ್ಯಾಕೆ ಮೆತ್ತಗೆ, “ಉಷ್ಣು-ಯೇಟು ಬಗೇಲಿ ಯೋಚ್ಛೆ ಮಾಡಿದ್ರೂವೆ ನಂಗೆ ಯಾವ ಉಪಾಯವೂ ತೋಚಕ್ಕಿಲ್ಲ. ನಿಂಗೇನಾರ ವೋಳು, ಯೋಳು ಮಾದಮ್ಮ” ಅಂದ್ಲು. ಮಾದಮ್ಮ - “ನಂಗೂ ವೋಳೀತಾನೆ ಇಲ್ಲ...” ಅಂದೋಲು, ವಸಿ ವೊತ್ತು ಸುಮ್ಮಕಿದ್ದು, “ಊ- ಇರಾದು ಒಂದೇ ದಾರಿ... ವ್ಹಾಡು ಗಂಗವ್ವ-ನಮ್ಮ ಮಟದ ಸ್ವಾಮಿಗೋಳು ದ್ಯಾವರಂತ ಮನಸ್ಸು, ಅವರೆ ಪಕ್ಷ ಪರಪಕ್ಷ ಅಂತ ಇಲ್ಲ. ಈಗ ನೀ ಬಂದು ಅವರ ಕಾಲ ಕಟ್ಟಿಕಂಡ್ರೆ ಕ್ವಾಡವ್ವ ಅವರೊಬ್ರೆ ಯೇನಾರ ಬಚಾವು ಮಾಡಬೌದು.” ಅಂದ್ಲು. ಗಂಗಿಗೆ ಈ ಮಾತು ಇಡುಸ್ಕಂಗೆ ಕಂಡು, “ಯಾವಾಗ ವೋಗಾನ ಅಂತೀ?” ಅಂತ ಕ್ಯಾಳೇಬುಟ್ಟು. “ಅಯ್ಯೋ, ಒಳ್ಳೆ ಕೆಲ್ಸ ಮಾಡಾಕೆ ಕಣೀನು ಕ್ಯಾಳಬೇಕ?... ನೀನು ಊ ಅಂದ್ರೆ, ಈಗಾಂದ್ರೆ ಈಗ...” –ಮಾದಮ್ಮ ಇಂಗೆ ಅಂತಿದ್ದಮಗೇಯ, ನಾನು ಜಾಗದಿಂದ ಜಾರಿ, ತಡದಿದ್ದ ಉಚ್ಚೆ ಪುಟ್ಟಣವ ಖಾಲಿ ಮಾಡಕ್ಕೆ ವೋರೀಕೋದೆ... ನಾನು ಬೇಲಿ ಮರೆಗೆ ಉಚ್ಚೆ ಉಯ್ಯತಿರೋನೂವೆ, ಮಾದಮ್ಮನೂ ಗಂಗಿಯೂವೆ ನಮ್ಮಿಬ್ರಟ್ಟಿ ಮುಂಚೂರಿ ಬಾಗಿಂದ ಮಟದ ದಿಕ್ಕೆ ಮೊಕವಾಗಿದ್ರ... ಮುಂದಕೇನಾಯ್ತಿ ನಂಗೆ ತಿಳೀದು. ಮಟದೊಳೆ ಯೇನು ನಡೀತೊ ಆ