________________
ಸಮಗ್ರ ಕಾದಂಬರಿಗಳು ೨೮೩ ಗಾಢನಿದ್ರೆ, ಅವರಿಬ್ಬರನ್ನೂ ಎಚ್ಚರಿಸಲು ಅಲ್ಲಿದ್ದವರೆಲ್ಲ ಪಟ್ಟ ಪ್ರಯತ್ನ ಸಫಲವಾಗಲಿಲ್ಲ. ರಾಚನೂ ಗಲ್ಲ ಬಿಟ್ಟು ಬಂದು ಎಬ್ಬಿಸಲು ನಡೆಸಿದ ಯತ್ನಗಳೂ ವಿಫಲವಾದವು. ಅಗಲೆ ಅಂಗಡಿ ಮುಚ್ಚುವ ವೇಳೆ ಮೀರಿತ್ತು. ಏನು ಮಾಡಲು ತೋಚದೆ ಕೊನೆಗೆ ಪಿಪಾಯಿಯಲ್ಲಿದ್ದ ನೀರನ್ನು ತಂದು ಅವರಿಬ್ಬರ ಮೇಲೂ ಸುರಿದ... ಎಸೋ ಹೊತ್ತಾದಬಳಿಕ ಗೋಸುಸಾಬರು “ಅರೆ ಇಸ್ತಿ-ಇದೆಲ್ಲಿಂದ ಬಂತಪ್ಪ ಈ ಕಲ್ಲುಮಳೆ?...” ಎನ್ನುತ್ತ, ಎದ್ದು ಕೂತರು- ಜೊತೆಜೊತೆಗೇ ಕರಿಯಪ್ಪನೂ, “ಬೊಡ್ಡಿಮಗ್ನ ಮ್ಯಾಡವೆ... ಇದ್ಯಾಕೀ ಜಿನ ನಮ್ಯಾಲೆ ಈಪಾಟಿ ಮಳೆ ಕರೀತ ಇದ್ದದ್ದು?”- ಹೇಳಿಕೊಳ್ಳುತ್ತ, ಎದ್ದು ಕೂತು, ಒದ್ದೆಯಾದ ಮೈ ಮೇಲಿನ ಬಟ್ಟೆಯನ್ನೇ ಮುಟ್ಟಿ ಮುಟ್ಟಿ ನೋಡಿಕೊಳ್ಳುತ್ತಿದ್ದ. ಆ ಸ್ನೇಹಿತರಿಬ್ಬರ ಜ್ಞಾನವೂ ನೆಟ್ಟಗಾಗಿ ಅವರು ತಮ್ಮ ಊರು ಸೇರುವ ವೇಳೆಗೆ ಶಕುನಿಕೊಪ್ಪಲಿನ ಕೋಳಿಗಳು ಎಚ್ಚರಗೊಳ್ಳುತ್ತಿದ್ದವು. ೨೮ | ಈ ಶುಕ್ರವಾರದ ದರುಮನಳ್ಳಿಯ ಬದುಕು ಬೇರೆ ಯಾವ ಶುಕ್ರವಾರದಂತೆ ಇರಲಿಲ್ಲ. ಈ ರಾತ್ರಿ ಊರಿನಲ್ಲಿ ದೊಡ್ಡ ನ್ಯಾಯ, ಹಿಂದೆ ಈ ಊರಿನಲ್ಲಿ ದೊಡ್ಡ ನ್ಯಾಯಗಳು ಆಗಿಲ್ಲವೆಂದಲ್ಲ. ಆದರೆ ಈ ರಾತ್ರಿಯ ನ್ಯಾಯಕ್ಕೆ ಒಂದು ವಿಶೇಷ ಮಹತ್ವ ಬಂದಿತ್ತು, ಹೊಲೆಯರ ಜಾತಿಯ ತರುಣನೊಬ್ಬ, ಉತ್ತಮರ ಹೆಂಗಸಿನ ಅದರಲ್ಲೂ ಹಿಂದೂ ಸಮಾಜದಲ್ಲಿ ಸರ್ವಶ್ರೇಷ್ಠವೆನಿಸಿದ ಬ್ರಾಹ್ಮಣ ಜಾತಿಯ ಯುವತಿಯೊಬ್ಬಳ ಸಂಗಸುಖ ಪಡೆದದ್ದು ಈ ಒಂದು ಊರಿನ ಉತ್ತಮರನ್ನೇ ಅಲ್ಲದೆ, ಸುತ್ತಮುತ್ತಲಿನ ಊರುಗಳ ಉತ್ತಮರೆನಿಸಿಕೊಂಡ ಜಾತಿಯವರೆಲ್ಲರನ್ನೂ ಕೆರಳಿಸಿತ್ತು. ಹಿಂದಿನ ರಾತ್ರಿಯಲ್ಲಿ ಹೇಗೊ ಹೊರಳಾಡಿದ ಆ ಹಳ್ಳಿ, ಆ ಸುದ್ದಿಯನ್ನೆ ಮುಕ್ಕಳಿಸುತ್ತ ಬೆಳಗಿಗೆ ಕಣ್ಣು ತೆರೆಯಿತು. ರೈತರು ಹೊಲಗದ್ದೆಗಳಲ್ಲಿ ಉಳುವಾಗ, ಹೆಂಗಳೆಯರು ಬಾವಿಯಲ್ಲಿ ನೀರು ಸೇದುವಾಗ, ಕಮ್ಮಾರರಿಂದ ಎತ್ತಿನ ಗಾಡಿಗೆ ಪಟ್ಟಿ ಬಿಡಿಸುವಾಗ, ಕುಂಬಾರರು ಮಡಿಕೆ ಮಾಡುವಾಗ, ಬಡಗಿಗಳು ನೇಗಿಲುಗಳನ್ನು ಕೆತ್ತುವಾಗ, ಹೊಲಗದ್ದೆ ರೈತ ಮಹಿಳೆಯರು ಕಳೆ ಕೀಳುವಾಗ, ಹಳ್ಳಿಯ ಹೈಕಳು ಕಾಡಿಗೆ ಎಮ್ಮೆ ದನಗಳನ್ನು ಅಟ್ಟಿಹೋದಾಗ, ಬೆಳಗಿನಿಂದ ಉತ್ತ ದಣಿದ ಗಂಡಂದಿರಿಗೆ ಅವರು ಆರು ಬಿಟ್ಟ ಒಡನೆಯೇ ಕೈತೊಳೆಯಲು ನೀರು ಕೊಟ್ಟು