ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಮಗ್ರ ಕಾದಂಬರಿಗಳು ೩೪೯ ಆ ತಿಂಡ್ ಈಸಿಗೊತ್ತ “ಇನ್ನೂವೆ ರೊಟ್ಟಿ ಬೆಚ್ಚಗೆ ಅವಲ್ಲವ್ವ!- ಇಂಗೆ ತಂದೆ?... ಇದೇನು ಚೋಜಿಗ?” ಅಂದು ಲಕ್ಕ ಬೆರಗುದ. “ಎಂಗೊ ತಂದೆ-ಅದರ ಕೇಮೆ ನಿಗ್ಯಾಕಲ?- ಗಮ್ಮನೆ ನಿನ್ನೋಟಿಗೆ ನೀನು ಇವ್ರ ವೊಟ್ಟೆಗೆ ಸೇರಿಸಾದು ಸ್ವಾಡು.” ಲಕ್ಕ, ತಿಂತಾ ತಿಂತಾ “ಅಯ್ಯನ ಚಮಾಚಾಲ್ವ ಆಮ್ಯಾಕೆ ಯೋನಿ ಅಂದ್ಯಲ್ಲ. ಈಗ ಎಂಗಿದ್ದನು ಅಯ್ಯ?” ಅಂದು ಒಂದೊಂದು ರಾಗಿರೊಟ್ಟಿ ಮುರುಕ ಬೊಡ್ಡಂಗೂ ಎಸೀತಿದ್ದ. “ಇನ್ನು ಎಂಗಿರಕ್ಕೆ ಆದಾತು-ಆಪಾಟಿ ಎಂಡ ಈರಿದ್ರೆ?” “ಅದು ಮೊಗ್ಲಿಂದ್ದೂ ಇದ್ದದ್ದೇಯ-ಅದ್ಯಾವ ವೊಸ ಸುದ್ದಿ, ಬುಡು” “ಅಂಗಲ್ಲ ಕಣೋ, ನೀ ಹ್ವಾದ ತಾವಿನಿಂದ್ಧೂವೆ, ನಮ್ಮ ಗುಡ್ಡಲ್ಲಿ ಅವುನು ಒಂದು ಜಿನ ಆದ್ರೂವೆ ನೆಟ್ಟಗೆ ಇಟ್ಟು ಉಂಡಿಲ್ಲ. ನೀರು ಕುಡಿದಿಲ್ಲ. ಸದೊಪ್ಪತ್ತು ಕಾಲವೊವೆ ಈ ಈಚಲುಟೆ ಆ ಈಚಲುಪ್ಯಾಟೇಂತ ತಿರುಗ್ತಾನೆ ಇರಾನೆ... ಅವುನು ಮನೆ ಕರ್ಚಿಗೆ ಒಂದು ಚಿಕ್ಕಾಸನೂ ಕೂಡಾ ಇಲ್ಲ... ಅದೆಲ್ಲಿ ಬಿದ್ದಿದ್ದಾನೆ ಏನು ಕತೆಯೊ, ಆ ಬಿಸಿಲು ಮಾರಮ್ಮಂಗೇ ಗೊತ್ತು. ಈಗಂತೂ ಕುಡುದು ಎಂಗಾಗವೆ ಅಂದೀ-ಕ್ವಾಡಬಡದು... ಬರೀ ಚಕ್ಕಳಮೂಳೆ!... ಯಾವ ಗಳಿಗೇಲಿ ಏನೊ ನಂಗೆ ಪೂರಾ ಬಯ ಬಂದುಬುಟ್ಟದೆ... ಅಂತಂತ ನಾನೇನಾರ ಇವೇಕ ಯೋಳಕ್ಕ ಹ್ವಾದರೆ, ಅಮ್ಮ ಕ್ಯಾಣ ಅದೇಟು ತೊರ ತಗೀತಾನೆ ಅಂತೀ-ಆ ಕ್ಯಾಣಾವ ನಮ್ಮೂರ ತುಂಬ ಅಂಚಬೌದು...” ಲಕ್ಕ ದುಕ್ಕದ ಜ್ವತೆಗೇ ನಕ್ಕ. “ಕೂಸು ಎಂಗಿದ್ದರು?” “ನೀ ಕಂಡಂಗೆ ಚೆಂದಾಗೇ ಇತ್ತು. ಆದೆ ಈಗೀಗ ಯಾಕೊ ನಮ್ಮ ಸಿವುನಿ ಹಾಲೇ ಬತ್ತೋಯ್ತ ಕುಂತದೆ.” “ಇದೊಗಾಚಾರ.” “ಇದಕ್ಕಿಂತ್ತೂವೆ ದೊಡ್ಡ ಗಾಚಾರ ನಮ್ಮೂರಿಗೆ ಅಂಟಿಕಂಡದೆ.' ಇಲ್ಲೀಗಂಟ ಅವರಿಬ್ಯೂವೆ ಎತ್ತಕ್ಕೆ ಇಂಜರಿತದ್ದ ಇಸ್ಯ ಗುಡು ಈಚೆ ಬಂತು. “ಆ ರುಕ್ಕಿಣವ್ವ ಊರ ಬುಟ್ಟೋದ ಇಸ್ಯ ಇಟೋತ್ತಿಗೆ ನಿನ್ನ ಕಿವಿಗೂ ಬಿದ್ದರಬೌದು...”