ವಿಷಯಕ್ಕೆ ಹೋಗು

ಪುಟ:ವೈಶಾಖ.pdf/೪೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೮ ವೈಶಾಖ ಊ. ಇನ್ನು ಅಲ್ಲಿ ನಿಲ್ಲೋದು ಚೆಂದಾಗಿಲ್ಲ ಅಂತ ಲಕ್ಕ ಮುಂಬೈ ವೊಂಟ, ಹಾಲಕ್ಕೆ ಕಿಚಪಚ ಅಂತಿದ್ದದ್ದು ಲಕ್ಕಂಗೂ ಕೇಳಸ್ತು. ಇವನ್ನೇಯ ಸಕುನದ ಹಕ್ಕಿ ಅನ್ನೋದು?- ಈ ಹಕ್ಕಿಗಳು ಯೋಳೊ ಸಕುನಾನೆ ಈ ದಾಸಯ್ಯ ಬೆಳುಗಾದಮ್ಯಾಲೆ ಊರಲ್ಲಿ ಮನೆಮದ್ದೂವೆ ವೋಗಿ ಸರಿ, ಅಕ್ಕಿ, ರಾಗಿ ಬಿಕ್ಷೆ, ದೋತ್ರ ಯೆಲ್ಲಾನು ಪಡಕಂಡೋಯ್ತಾನೆ. ಇರೋರು ಕ್ವಡ್ತಾರೆ, ಇಲ್ಲದೆ ಇರೋರು ಊಡಕ್ಕಿಲ್ಲ... ಲಕನ ಪಯಣ ಮುಂದುವರಿದಂಗೆ ಮೂಡಲ ಬಾನು ಕೆಂಪಾಯ್ತು ಬತ್ತಿತ್ತು. ಆಗ ಅಡವಿ ನಡೂಮಧ್ಯದಲ್ಲಿ ಇನ್ನೂ ಜ್ವಾಲೆ ಉರೀತಿದ ಕಂಡು, ಆಗ ಲಕ್ಕಂಗೆ ವೊಳೀತು... ಅಲ್ಲಿ ಕಾಣೋದು ಕೊಳ್ಳಿದೆವ್ರ ಅಲ್ಲ-ಬಿದಿರು ಇಂಡಲು ಉಜ್ಜಿ ಉಜ್ಜಿ ಅತ್ತಿಗಂಡು ಉರಿತಿರೊ ಕಾಡ್ಡಿಚ್ಚು, ಅಂತಾವ!... ಬೆಳಗಾಯಿದಂಗೆ, ಕಾಡಿನ ಗಿಡ, ಮರ, ಎಲ್ಲವೂವೆ ನಾತ್ರೆ ನಿದ್ದೆ ಮುಗಿಸಿ ಎಚ್ಚರಾಯ್ತ ಇದ್ದೂ, ಕಾಡಕ್ಕಿಗಳು ತರಾವರಿ ಮಟ್ನಲ್ಲಿ ಹಾಡಕ್ಕೆ ಮುಟ್ಟಗಂಡಿದ್ದೂಇದ ಕೆಳ್ತಾ ನಡದಂಗೆ, ಲಕ್ಕಂಗೆ ಊರ ನಾಟಕದ ಹೈಕಳು ಪಾಲು ಮಾಡೋವಾಗ ಹಾಡ್ತಾ ಇದ್ದದ್ದು ಗೆಪ್ತಿಆಯ್ತು... ಲಕ್ಕ ಮುಂದುಮುಂದುಕೋದಂಗೆ, ಬೆಳಕು ಹರಿದು ಬಂದು ಅವನ ಮೈಯ ಬೆಚ್ಚಗೆ ಮಾಡು..... ಲಕ್ಕಂಗೆ ಆ ಗಳಿಗೇಲಿ ಹಿಂದಿನದೆಲ್ಲ ಮರೆತೋದಂಗಾಯ್ತು, ಎಳಬಿಸಿ ಸಾಕ ಅವ್ರ ನರನರಾವೆ ಚುಮುಚುಮುಗುಟ್ಟಿ, ಅವನ ವೊಟ್ಟೆ ವಳಗೆ ಕುಸಿ ತುಂಬಾ ಇತ್ತು... ತನಗೇ ಅರುವಿಲ್ಲದೆ ಲಕ್ಕ ಪದ ಯೋಳಕ್ಕೆ ಸುರುಮಾಡ್ಡ, ಒಂದು ಜಿನ ಕಾಡಲ್ಲಿ ತಾವಿಬ್ರೂ ಚಿಕ್ಕೋರಾಗಿದ್ದಾಗ, ತಂಗಿ ಸಿವುನಿ ತನ್ನ ತೀಟೆ ಮಾಡ್ಮಿಕ ಮರ ಅತ್ತಿ ಕುಂತು ಯೋಳಿದ್ದ ಪದ.... ಲಕ್ಕಪ್ಪ ಲಕ್ಕಪ್ಪ ಲೋ ಲೋ ಲೋ ಎಕ್ಕದ ಗಿಡದಲ್ಲಿ ಲೋ ಲೋ ಲೋ ಬೆನಕಪ್ಪ ಕುಂತಿ ಲೋ ಲೋ ಲೋ ಕರಿಗಡುಬ ತಿಂತವೈ ಲೊ ಲೋ ಲೋ... ಅವನು ಇಂಗೆ ಪದ ಯೋ ವೋಯ್ತಿರಬೇಕದರೆ, ಬೊಡ್ಡ ಒಂದು ನಾಗರಾವಿನ ಪೊರೆಯ ಕಚ್ಚಿಗಂಬಮತು. ಲಕ್ಕ ಪೊರೆಯ ಬೊಡ್ಡ ಬಾಯಿಂದ ಕಿತ್ತಾಕ್ತ. “ಬೋ ಸೂರ ಕಾಲಿ ಪೊರೆ ಕಚ್ಚಿಗ೦ಬರಬೇಕಾರೆ ನೀನೆ