________________
೨೯೮ ವೈಶಾಖ ಕೆ . “ವೋಗೋಗೊ ಗುಲಾಮ. ನಿನ್ನಡತಿ ನಾ ಯಾಕಾಗ್ಲಿ, ಗಂಡಸರಿಗೇನೂ ಬರ ಬಂದಿಲ್ಲ ಕನ” – ಮಾತು ಚುಕಾಯಿಸಿದ್ದು. “ನನ್ನ-ಗುಲಾಮ ಅಂದ್ರೇನೆ?” ವೋಡೆಯೋನಂಗೆ ಚಾವಡಿ ಮೆಟ್ಟಿಲಿಳಿದ. ತಕ್ಷಣ ನಂಜೇಗೌಡ ಎದ್ದ ಬಂದು ಗಂಗಪ್ಪ ತಬ್ಬಿ, “ದುಡುಕಬ್ಯಾಡ, ಗಂಗಪ್ಪ, ಇವಳೆ ಬುದ್ದಿ ಕಲಿಸಕ್ಕೆ ನಾವಿವಿ...”ಸಮಾಧಾನ ಯೋಳಿ, ಇಂದ್ರೆ ಕರಕಂಡೋಗಿ ಕುಂಡರಿಸ್. ಆಮ್ಯಾಕೆ ಚಾವಡೀಲಿ ಕುಂತ ಯಜಮಾನ ಕಡೀಕೆ ತಿರುಗಿ, ನಂಜೇಗೌಡ “ಇದೀಗ ಇಪರೀತಕೇ ವೋಟೋಯ್ತು. ಒಂದೀಟು ತೊಪ್ಪೆ ಮಾತ್ತೆ ತನಗಿಂತ ಇರಿಯೋರು ಅನ್ನು ನಾಡದೆ ಈ ಪಾಟಿ ಬಾಯಿ ಮಾಡೋ ಎಂಗಸ ಇಂಗೇ ಬುಡೋದು ತರವಲ್ಲ. ಇವಳೆ ಸರಾಗಿ ಬುದ್ದಿ ಕಲಿಸಬೇಕು” ಅಂದ. - “ಅಂತಿಂತ ಸಿಕ್ತ ಕಟ್ಟರೆ, ಈ ಸಂತೆಬಜಾರಿಗೆ ಬುದ್ದಿ ಬರಕ್ಕಿಲ್ಲ. ಅವಳ ಈ ಮಾಳದ ಮಧ್ಯದಲ್ಲಿ ರೋ ಪಾಂಡವರ ಕಂಬಕ್ಕೆ ಕಟ್ಟಿ ಚಮಡ ಸುಲೀಬೇಕು.” -ಗಂಗಪ್ಪ ವದರಾಡ್ಡ, “ಗಂಗಪ್ಪ ಯೋಳದಂಗೆ ಮಾಡದೆ ಸರಿ, ಈತೋರ ಯಜಮಾನ ಮುಂದೆ ಎದೆ ಕ್ವಿಟ್ಟ ಈ ಗಯ್ಯಾಳಿ ಎಣ್ಣೆಗೆ ಸಹ್ಯಾಗೆ ಪಾಟ ಕಲಿಸಬೇಕು, ಇವಳೆ ಒಂದು ಸಣ್ಣ ಸಿಕ್ಕೆ ಮಾಡಿಬುಟ್ಟರೆ, ಊರು ಅಲ್ಲಂಡೆ ಆಯ್ತದೆ. ಚಿಕ್ಕಮಟ್ಟ ಎಣ್ಣಮಕ್ಕಳೆಲ್ಲ ಇವಳ ಚೆಂಗೂಲಿ ಬುದ್ದೀನೆ ಕಲ್ಲು, ಎಲ್ಲಾರ ಅಟ್ಟಿಗಳೂವೆ ಕುರುಕ್ಷೇತ್ರಾನೆ ಆಗೋಯ್ತವೆ”- ಇಂಗಂದೋನು ದೊಳಪ್ಪ, “ಔದೌದು. ಇವಳ ಪಾಂಡವರ ಕಂಬಕ್ಕೆ ಕಟ್ಟಿ ನಾಕು ಬಿಗಿಯಾದೆ ಸರಿ.” ಇನ್ನೊಬ್ಬ ಯಜಮಾನ ಅಂದ. ಜ್ವತೆ ಇನ್ನೂ ಮೂರು ನಾಕು ಯಜಮಾನ್ನು, “ಎಚ್ಚು ಮಾತ್ಯಾಕೆ ಕಟ್ಟಿ ಕಂಬಕೆ ಇವಳ”- ಆತುರಿಸಿದ್ದು, “ಸಾನುಬೋಗು, ಅಂಗೇಯ ಇನ್ನೂ ವಸಿ ಆಳು, ಅಂಗೂ ಮಾತಾಡ್ಡೆ ಇಂಗೂ ಮಾತಾಡ್ಡೆ, ಚಾವಡಿ ವಳುಗೆ ಸುಮ್ಮಕೆ ಲಿಪಿ ಕುಂತಂಗೆ ಕುಂತಿದ್ರು. ಇನ್ನೆಲ್ಲ ಕ್ವಾಡ್ ಕುಂತಿದ್ದ ಬುಂಡಮ್ಮಾರೆ ರೇಗು. “ಮುಟ್ಟಾಗಿರೊ ಎಂಗಸಿನ ಮ್ಯಾಲೆ ಕಮ್ಮಿ ಮಾಡಕ್ಕೆ ನಿಮ್ಮೆ ನಾಚಿಕೆ ಆಗಕ್ಕಿಲ್ವ?- ಗಂಡಸ್ರಂತೆ ಗಂಡಸ್ತು!” ವಸಿ ಜೋರಾಗಿ ಗೊಣಗಿದ್ರು. ನಂಜೇಗೌಡ ಎದ್ದ. “ಬುಂಡಜ್ಜಿ ಯೋಳೊ ಮಾತ್ನಲೂ ನ್ಯಾಯ ಅದೆ. ಈ ಗಂಗೆ ಏಟು