________________
ಬಾಳ ನಿಯಮ ಹೇರಳವಾಗಿದ್ದ ಹಳ್ಳ ತಿಟ್ಟುಗಳಲ್ಲಿ ನಾಯಕನು ಪ್ರಯಾಣಮಾಡಿದನು. ಕ್ಯಾರಿಬ್ ಹಿಂಡು ಪಕ್ಕದಲ್ಲೇ ಹಾದುಹೋಯಿತು ; ಅದರ ಹಿಂದೆ ಇಪ್ಪತ್ತಾರು ಇತರ ಪ್ರಾಣಿಗಳೂ ಹಿಂಬಾಲಿಸಿದವು. ಅವೆಲ್ಲವೂ ಕೈಗೆ ಸಿಕ್ಕಿ ಬಿಡುವಂತೆಯೇ, ರೈಫಲ್ ರೇಂಜಿನಲ್ಲೇ ಇದ್ದವು. ಆ ಪ್ರಾಣಿಗಳ ಮೇಲೆ ಬಿದ್ದು ಹೊಡೆದುಹಾಕಿ ಬಿಡುವಂತೆ ನಾಯಕನಲ್ಲಿ ಕ್ರೂರವಾದ ಆಸೆ ಉದ್ಭವಿಸಿತು. ಬಾಯಲ್ಲಿ ಬಾರ್ ಮಿಗನ್ ಹಕ್ಕಿಯನ್ನು ಕಚ್ಚಿ ಕೊಂಡು ಕರಿಯ ನರಿಯೊಂದು ಅವನ ಮುಂದೆಯ ಬಂದನಿಂತಿತು. ಮನುಷ್ಯ ಕೂಗಿಕೊಂಡನು. ಅವನೇನೊ ಭಯ ಹುಟ್ಟಿಸು ವಂತೆ ಅರಚಿದನು. ಆದರೆ ನರಿಯು ಥಟ್ಟನೆ ಒಂದೇ ನೆಗೆತಕ್ಕೆ ಹಾರಿ ಕಣ್ಮರೆಯಾಯಿತು ; ಟಾರ್ಮಿಗನ್ ಹಕ್ಕಿಯನ್ನು ಮಾತ್ರ ಕೆಳಕ್ಕೆ ಬೀಳಿಸಲೇ ಇಲ್ಲ ! ಮಧ್ಯಾಹ್ನ ಕೊನೆ ಘಳಿಗೆಗಳಲ್ಲಿ ಅವನಿಗೆ ಸಣ್ಣ ಹೊಳೆಯೊಂದರ ದರ್ಶನವಾಯಿತು. ಅದು ಸುಣ್ಣದ ನೀರಿನಂತೆ ತಿಳಿಯಾಗಿತ್ತು. ನೀರಿನ ಅಂಚಿನಲ್ಲಿ ಜೊಂಡು ಹುಲ್ಲು ಅಲ್ಲಲ್ಲಿ ವಿರಳವಾಗಿ ಬೆಳೆದಿತ್ತು. ಒಂದರ ಬುಡ ವನ್ನು ಭದ್ರವಾಗಿ ಹಿಡಿದು ಎಳೆದನು. ಮೇಲು ನೋಟಕ್ಕೆ ಸಣ್ಣ ಈರುಳ್ಳಿಯ ಮೃದುವಾದ ಗಿಡವನ್ನು ಹೋಲುತಿತ್ತು. ಅವನ ಹಲ್ಲುಗಳು ಮುಂದೆ ಚಾಚಿ ದವು ; ಮತ್ತೆ ಕೇಳಿಸಿದ್ದು : ಚಕಚಕನೆ ಅಗಿಯುವ ಶಬ್ದ. ಆದರೆ ಗಿಡದ ನಾರುಗಳು ಒರಟಾಗಿದ್ದವು. ಮಸ್ಯೆಗೆ ಕಾಯಿಯಂತೆಯೆ ಇದರಲ್ಲೂ ನೀರಿನ ಅಂಶ ಬಿಟ್ಟರೆ, ಪುಷ್ಟಿಕೊಡುವಂಥ ಮತ್ತಾವ ಗುಣಗಳೂ ಇರಲಿಲ್ಲ. ಅಷ್ಟಾ ದರೂ, ನಾಯಕನು ತನ್ನ ಮೂಟೆಗಳನ್ನೊಗೆದು ಕೈ ಕಾಲಿಗೆ ಸಿಕ್ಕಿಬಿದ್ದ ಜೊಂಡು ಗಳನ್ನು, ಹಿಂದು ಮುಂದು ನೋಡದೆ, ಕುರುಕಿಕೊಂಡು ದನದಂತೆ ದವಡೆ ಯಿಂದಲೇ ಅಗಿಯುತಿದ್ದನು. ಅವನು ತುಂಬಾ ಬಳಲಿದ್ದನು ; ವಿಶ್ರಾಂತಿಗಾಗಿ ಹಾತೊರೆದನು. ಎಲ್ಲಾ ದರೂ ಮಲಗಿ ನಿದ್ರಿಸೋಣವೆಂದರೆ ಅವಕಾಶವೇ ಇಲ್ಲ. ಯಾವುದೋ ಶಕ್ತಿ ಅವನನ್ನು ಮುಂದೆ ಮುಂದೆ ಹೋಗುವಂತೆ ತಳ್ಳುತಿತ್ತು. ಕಡ್ಡಿ ಪುಳ್ಳೆಗಳ ನಾಡನ್ನು ನೋಡಲು ಅಷ್ಟು ಉತ್ಸಾಹವೇ ? ಹಿಂದೆ ಇತ್ತು ; ಈಗ ಖಂಡಿತ ವಾಗಿಯೂ ಇಲ್ಲ. ಸದ್ಯ ಅವನು ಮುಂದುವರಿಯುತ್ತಿರುವುದು ಹೊಟ್ಟೆಯ ತಾಳಕ್ಕೆ ಅನುಗುಣವಾಗಿ, ಆದ್ದರಿಂದಲೇ ಸಣ್ಣ ಸಣ್ಣ ಕೊಳಗಳಲ್ಲಿ ಕಪ್ಪೆಗಳಿ ಗಾಗಿ ಕೈಯಾಡಿಸಿದನು. ಕೈ ಉಗುರಿನಿಂದ ನೆಲವನ್ನು ಅಗೆದು, ಹುಳುಗಳಿ ವೆಯೇ ಎಂದು ಪರಿಶೀಲಿಸಿದನು. ಅಷ್ಟು ಉತ್ತರೋತ್ತರ ಪ್ರದೇಶಗಳಲ್ಲಿ ಕಪ್ಪೆ,